ರಾಜ್ಯದ ಎಲ್ಲಾ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಶಾಲ ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯ ಎಂದು ನಾಮಕರಣ ಮಾಡಿ ಕ್ರಾಂತಿ ಮಾಡಿದ ಡಿ. ದೇವರಾಜು ಅರಸರ ವಿಚಾರಧಾರೆ, ಸಂದೇಶ ಹಾಗೂ ಮಾರ್ಗದರ್ಶನ ಇಂದಿನ ಯುವಜನತೆ ಎದೆಯೊಳಗೆ ಬಿಟ್ಟುಕೊಂಡು ಮುಂದೆ ಬಂದಲ್ಲಿ ಸುಂದರ ಸಮಾಜದೊಂದಿಗೆ ಅಭಿವೃದ್ಧಿಯ ಸಮ ಸಮಾಜ ನಿರ್ಮಿಸಬಹುದು.
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಸಾಮಾಜಿಕ ನ್ಯಾಯದ ಹರಿಕಾರ ಎನಿಸಿದ ಬಸವಣ್ಣ ನಾಲ್ವಡಿಯವರ ನಂತರ ಸಂವಿಧಾನಾತ್ಮಕ ರಾಜಕೀಯದ ರಾಜಕಾರಣದಲ್ಲಿ ಸಾಮಾಜಿಕ ನ್ಯಾಯದ ಬಂಡಿಯನ್ನು ಎಳೆದು ಆಡಳಿತದಲ್ಲಿ ಸುವರ್ಣಯುಗವನ್ನು ಸೃಷ್ಟಿಸಿರುವುದು ಮಾಜಿ ಮುಖ್ಯಮಂತ್ರಿ ದಿ.ಡಿ. ದೇವರಾಜರಸ್ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿಂಡಿಮ ಶಂಕರ್ ಹೇಳಿದರು.ಪಟ್ಟಣದ ರೋಟರಿ ಭವನದಲ್ಲಿ ತಾಲೂಕು ಕಸಾಪ ವತಿಯಿಂದ ಏರ್ಪಡಿಸಿದ್ದ ಡಿ. ದೇವರಾಜ ಅರಸು ಅವರ ನೆನೆಪು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ತಮ್ಮ ಅಧಿಕಾರವಧಿಯಲ್ಲಿ ಕನ್ನಡವನ್ನು ಆಡಳಿತಭಾಷೆ ಮಾಡಿದ ಕೀರ್ತಿ ಪಡೆದ ಅರಸರು, ಭೂ ಸುಧಾರಣೆ ಕಾಯ್ದೆ, ಉಳುವವನೆ ಭೂಮಿ ಒಡೆಯ, ಜೀತ ಪದ್ದತಿ ವಿರುದ್ದ ಕಾನೂನು, ಮಲಹೊರುವ ಪದ್ದತಿ ವಿರುದ್ದ ಹೋರಾಟ, ಋಣಭಾರ ಕಾಯ್ದೆ, ಭಾಗ್ಯ ಜ್ಯೋತಿಯಂತಹ ಹತ್ತು ಹಲವು ಕಾನೂನುಗಳ ಮೂಲಕ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಬಡಜನತೆಗೆ ನ್ಯಾಯ ಒದಗಿಸುವ ಕೆಲಸ ಮಾಡಿ ಸಾಮಾಜಿಕ ನ್ಯಾಯದ ಹಾಗೂ ಪರಿವರ್ತನೆಯ ಹರಿಕಾರ ಎನಿಸಿಕೊಂಡ ಭರತ ಖಂಡದ ಏಕೈಕ ಮುಖ್ಯಮಂತ್ರಿ ಎನಿಸಿದ್ದಾರೆ ಎಂದರು.ರಾಜ್ಯದ ಎಲ್ಲಾ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಶಾಲ ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯ ಎಂದು ನಾಮಕರಣ ಮಾಡಿ ಕ್ರಾಂತಿ ಮಾಡಿದ ಡಿ. ದೇವರಾಜು ಅರಸರ ವಿಚಾರಧಾರೆ, ಸಂದೇಶ ಹಾಗೂ ಮಾರ್ಗದರ್ಶನ ಇಂದಿನ ಯುವಜನತೆ ಎದೆಯೊಳಗೆ ಬಿಟ್ಟುಕೊಂಡು ಮುಂದೆ ಬಂದಲ್ಲಿ ಸುಂದರ ಸಮಾಜದೊಂದಿಗೆ ಅಭಿವೃದ್ಧಿಯ ಸಮ ಸಮಾಜ ನಿರ್ಮಿಸಬಹುದು ಎಂದರು.
ಜಾನಪದ ಪರಿಷತ್ ಅಧ್ಯಕ್ಷ ತಿಮ್ಮಶೆಟ್ಟಿ, ನಿವೃತ್ತ ಉಪನ್ಯಾಸಕ ಡಾ. ಕೃಷ್ಣ, ರೋಟರಿ ಅಧ್ಯಕ್ಷ ಪುರುಷೋತ್ತಮ, ನಿವೃತ್ತ ಶಿಕ್ಷಕ ರಾಮಕೃಷ್ಣ, ಉದಯಕುಮಾರ್, ಕಸಾಪ ನಗರಾಧ್ಯಕ್ಷ ಸಿ.ವಿ. ಮೋಹನ್ ಕುಮಾರ್, ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ಸಿ.ಕೆ. ರವೀಂದ್ರ, ರೋಟರಿ ಸಹಾಯಕ ಗೌವರ್ನರ್ಬ್ಯಾಂಕ್ ರಾಘವೇಂದ್ರ, ನಿವೃತ್ತ ಮುಖ್ಯಶಿಕ್ಷಕ ಚಂದ್ರಶೇಖರ್ ಅವರು ಡಿ. ದೇವರಾಜ ಅರಸ್ ಅವರ ಕುರಿತು ಮಾತನಾಡಿದರು.ರೋಟರಿ ಕಾರ್ಯದರ್ಶಿ ಅಶೋಕ್ ಕುಮಾರ್, ಮಾಜಿ ಅಧ್ಯಕ್ಷ ದಯಾನಂದ್, ಮಿರ್ಲೆ ರಾಧಾಕೃಷ್ಣ, ರಾಮಕೃಷ್ಣ, ಸಾಹಿತಿ ಚವ್ಹಾಣ್, ಹರೀಶ್, ವ್ಯಾನ್ ಸುರೇಶ್, ಹೆಗ್ಗಂದೂರು ಪ್ರಭಾಕರ್, ರೈತ ಸಂಘದ ಗೌರವಾಧ್ಯಕ್ಷ ಕುಮಾರ್, ಭಾಸ್ಕರ್, ಬಿಎಸ್ಎನ್ಎಲ್ ಕೃಷ್ಣ, ರಾಮಶೆಟ್ಟಿ, ಯೋಗೇಶ್ ಮೊದಲಾದವರು ಪಾಲ್ಗೊಂಡಿದ್ದರು.