ಸಾರಾಂಶ
ಪಾಂಡವಪುರ: ತಾಲೂಕಿನ ಬೇವಿನಕುಪ್ಪೆ ಗ್ರಾಮಸ್ಥರ ಒಮ್ಮತದ ಮಾತುಕತೆ ಫಲವಾಗಿ ಗ್ರಾಮದ ಡೈರಿಗೆ ನಿರ್ದೇಶಕರ ಅವಿರೋಧ ಆಯ್ಕೆ ನಡೆದು ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ದೇವರಾಜು ಹಾಗೂ ಉಪಾಧ್ಯಕ್ಷರಾಗಿ ರೈತಸಂಘದ ಬೆಂಬಲಿತ ಅಶೋಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗ್ರಾಮದ ದೇವಸ್ಥಾನದ ಅಭಿವೃದ್ಧಿ ದೃಷ್ಟಿಯಿಂದ ಚುನಾವಣೆಗೆ ಹೋಗದೆ ಎಲ್ಲ ನಿರ್ದೇಶಕರನ್ನು ಗ್ರಾಮದ ಯಜಮಾನರ ಮೂಲಕ ಜೆಡಿಎಸ್ ಮುಖಂಡ ಬಿ.ಸಿ.ಜಯರಾಮು ಹಾಗೂ ರೈತಸಂಘದ ಮುಖಂಡರಾದ ಇಂಜಿನಿಯರ್ ಬೇವಿನಕುಪ್ಪೆ ಯೋಗೇಶ್, ಅನಿಲ್ ಅವರ ನೇತೃತ್ವದಲ್ಲಿ ಒಮ್ಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಮಾತುಕತೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿಗೆ ಹಾಗೂ ರೈತಸಂಘ ಮತ್ತು ಕಾಂಗ್ರೆಸ್ ಪಕ್ಷಕ್ಕೆ ತಲಾ ಎರಡೂವರೆ ವರ್ಷ ಅಧಿಕಾರ ಹಂಚಿಕೆ ಕೂಡ ಮಾಡಲಾಗಿದೆ. ಲಾಟರಿ ಮೂಲಕ ಮೊದಲ ಅವಧಿಗೆ ಬಿಜೆಪಿಯ ದೇವರಾಜ ಅಧ್ಯಕ್ಷರಾಗಿಯೂ ಹಾಗೂ ರೈತಸಂಘದ ಅಶೋಕ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ ಮೂಲಕ ಚುನಾವಣೆಗೆ ಹೋಗದಂತೆ ಮಾಡಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ದೇವರಾಜು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರೈತಸಂಘದ ಬೆಂಬಲಿತ ಅಭ್ಯರ್ಥಿ ಅಶೋಕ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಸಹಕಾರ ಇಲಾಖೆಯ ಶೋಭಾ ಇವರಿಬ್ಬರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.