ಸಾರಾಂಶ
ದಾಬಸ್‍ಪೇಟೆ: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ 93ನೇ ಹುಟ್ಟುಹಬ್ಬದ ಅಂಗವಾಗಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ತ್ಯಾಮಗೊಂಡ್ಲು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ರೋಗಿಗಳಿಗೆ ಹಣ್ಣು ಹಾಗೂ ಬ್ರೆಡ್ ವಿತರಿಸಿ ಜನ್ಮದಿನ ಆಚರಿಸಿದರು. ಜಿಪಂ ಮಾಜಿ ಸದಸ್ಯ ಟಿ. ಎಚ್. ರಾಜು ಮಾತನಾಡಿ, ರಾಷ್ಟ್ರ ಕಂಡ ರಾಜಕಾರಣಿಗಳಲ್ಲಿ ವಿಶಿಷ್ಟ ಹಾಗೂ ಘನತೆಯನ್ನು ಉಳಿಸಿಕೊಂಡು ಎಲ್ಲಾ ರಾಜಕೀಯ ಪಕ್ಷಗಳ ಮುತ್ಸದ್ದಿಯಾಗಿರುವ ಗೌಡರ ಇಂದಿನ ನಡೆ ಯುವ ರಾಜಕಾರಣಿಗಳಿಗೆ ಮಾದರಿಯಾಗಿದೆ. ಗ್ರಾಮೀಣ ಪರಿಸರ ಹಾಗೂ ರೈತನ ಮಗನಾಗಿ ಬೆಳೆದು ಇಳಿ ವಯಸ್ಸಿನಲ್ಲಿಯೂ ರೈತರ ಪರ ಕಾಳಜಿಯನ್ನು ಮರೆಯದೇ ದೇಶದ ರೈತರ ಧ್ವನಿಯಾಗಿದ್ದಾರೆ ಎಂದರು. ಗ್ರಾಪಂ ಸದಸ್ಯ ಸುಜಿತ್ ಕುಮಾರ್ ಮಾತನಾಡಿ, ಗೌಡರ ಸರಳತೆ, ಹೋರಾಟದ ಬದುಕು ಹಾಗೂ ರೈತರ ಪರ ಧ್ವನಿ ನಮ್ಮ ಸಮಾಜಕ್ಕೆ ಅನಿವಾರ್ಯವಾಗಿದೆ ಎಂದರು. ಗ್ರಾಮದ ಮುಖಂಡರಾದ ಹನುಮಂತರಾಜು, ಸುಜಿತ್ ಕುಮಾರ್, ಲಕ್ಷ್ಮೀನಾರಾಯಣ್, ಡೈರಿ ನಾಗರಾಜು, ಜಗದೀಶ್, ಸಿದ್ದಪ್ಪ, ಸ್ವಾಮಿ, ಅರುಣ್ ಗೌಡ, ರಾಜಣ್ಣ, ಮೂರ್ತಿ, ವೆಂಕಟೇಶ್, ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಾದ ಡಾ.ವೀರೇಂದ್ರ ಕುಮಾರ್, ಡಾ.ಚಂದ್ರಕಲಾ, ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.