ರೈತರ ಪರ ದೇವೇಗೌಡರ ಕಾರ್ಯ ಅಭಿನಂದನೀಯ: ಜೆಡಿಎಸ್‌ ನಾಯಕ

| Published : Jan 19 2024, 01:49 AM IST

ಸಾರಾಂಶ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ, ಪಕ್ಷದ ವರಿಷ್ಠ ಎಚ್ ಡಿ ದೇವೇಗೌಡ .ಅಧ್ಯಕ್ಷತೆಯಲ್ಲಿ ಜಿಲ್ಲಾಧ್ಯಕ್ಷರು ಸಭೆಯನ್ನು ಶುಕ್ರವಾರ ಅರಸೀಕೆರೆಯ ಅವರ ನಿವಾಸದ ಮುಂದಿನ ಆವರಣದಲ್ಲಿ ಕರೆಯಲಾಗಿದೆ. ಇದರಲ್ಲಿ ರೈತರ ಪರ ಇರುವ ಎಚ್‌.ಡಿ.ದೇವೇಗೌಡ ಅವರಿಗೆ ರೈತರು ಅಭಿನಂದನೆ ಸಲ್ಲಿಸುವರು ಎಂದು ಜೆಡಿಎಸ್ ಮುಖಂಡ ಎನ್ ಆರ್ ಸಂತೋಷ್ ಕುಮಾರ್ ತಿಳಿಸಿದರು.

ಜೆಡಿಎಸ್ ಮುಖಂಡ ಎನ್ ಆರ್ ಸಂತೋಷ್ ಕುಮಾರ್ । ಎಚ್‌ಡಿಡಿಗೆ ಕೃತಜ್ಞತೆ ಸಲ್ಲಿಸಲು ರೈತರಿಂದ ಅಭಿನಂದನಾ ಸಮಾರಂಭಕನ್ನಡಪ್ರಭ ವಾರ್ತೆ ಅರಸೀಕೆರೆ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ, ಪಕ್ಷದ ವರಿಷ್ಠ ಎಚ್ ಡಿ ದೇವೇಗೌಡ .ಅಧ್ಯಕ್ಷತೆಯಲ್ಲಿ ಜಿಲ್ಲಾಧ್ಯಕ್ಷರು ಸಭೆಯನ್ನು ಶುಕ್ರವಾರ ಅರಸೀಕೆರೆಯ ಅವರ ನಿವಾಸದ ಮುಂದಿನ ಆವರಣದಲ್ಲಿ ಕರೆಯಲಾಗಿದೆ ಎಂದು ಜೆಡಿಎಸ್ ಮುಖಂಡ ಎನ್ ಆರ್ ಸಂತೋಷ್ ಕುಮಾರ್ ತಿಳಿಸಿದರು

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಈ ಸಭೆಯಲ್ಲಿ ಸಂಸದರಾದ ಪ್ರಜ್ವಲ್ ರೇವಣ್ಣ, ಶಾಸಕ ಎಚ್‍.ಡಿ. ರೇವಣ್ಣ ಪಾಲ್ಗೊಳ್ಳಲಿದ್ದಾರೆ. ನಗರಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಚಿಹ್ನೆಯಾದ ತೆನೆ ಹೊತ್ತ ಮಹಿಳೆ ಚಿನ್ನೆ ಮೇಲೆ 21 ಸದಸ್ಯರು ಗೆದ್ದು ಬಂದಿದ್ದು ಕೆಲವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿರೋಧ ಪಕ್ಷದ ಚಿಹ್ನೆ ಪರವಾಗಿ ಕೆಲಸ ಮಾಡಿದ್ದರು. ಅಂಥವರಿಗೆ ಮತ್ತೊಂದು ಅವಕಾಶ ನೀಡುವ ಸಲುವಾಗಿ ಶುಕ್ರವಾರದ ಸಭೆಗೆ ಹಾಜರಾಗಬೇಕೆಂದು ತಿಳಿಸುವ ಪತ್ರವನ್ನು ಕಳಿಸಲಾಗಿದೆ. ಅವರು ಲಭ್ಯವಿಲ್ಲದಿದ್ದರೆ ಬಾಗಿಲಿಗೆ ಅಂಟಿಸಿ ಬರಲಾಗಿದೆ’ ಎಂದು ಹೇಳಿದರು.

ಅರಸೀಕೆರೆ ತಾಲೂಕಿನ ರೈತರು ಹಲವು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಯ ಅಭಾವ ಕೊಬ್ಬರಿಗೆ ಬೆಲೆ ಇಲ್ಲದಂತಾಗಿದೆ. ಇಂಥ ಸಂಕಷ್ಟ ಸಮಯದಲ್ಲಿ ನಮ್ಮ ಪಕ್ಷದ ವರಿಷ್ಠರಾದ ದೇವೇಗೌಡರು ಪ್ರಧಾನಿ ಅವರನ್ನು ಭೇಟಿ ಮಾಡಿ ನಾಫೆಡ್ ಮೂಲಕ ಕೊಬ್ಬರಿ ಖರೀದಿ ಮಾಡಬೇಕೆಂದು ಮಾಡಿಕೊಂಡ ಮನವಿಗೆ ಸ್ಪಂದಿಸಿದ ಫಲವಾಗಿ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿ ಕೇಂದ್ರ ಪ್ರಾರಂಭವಾಗಲಿದೆ. ಇದಕ್ಕಾಗಿ ರೈತರು ದೇವೇಗೌಡರಿಗೆ ಅಭಿನಂದನಾ ಕಾರ್ಯಕ್ರಮವನ್ನು ಸಭೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಇಲಾಖೆಯು ಬೈಪಾಸ್ ರಸ್ತೆಗಾಗಿ ಬೆಂಡೆಕೆರೆ ರೈತರ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡ ಸಮಯದಲ್ಲಿ ಶಾಸಕ ಶಿವಲಿಂಗೇಗೌಡ ಅವರು ಒಂದು ನಿರ್ದಿಷ್ಟ ಸಮುದಾಯಕ್ಕೆ ಗುಂಟೆಗೆ 9 ಸಾವಿರ ರು. ನಿಗದಿ ಮಾಡಿದ್ದರು. ರೈತರು ಇದರ ವಿರುದ್ಧ ಪ್ರತಿಭಟಿಸಲು ಮುಂದಾಗಿದ್ದ ಸಮಯದಲ್ಲಿ ಲಾಟಿ ಚಾರ್ಜ್ ಮಾಡಲು 300, 400 ಪೊಲೀಸರು ಆಗಮಿಸಿದ ವೇಳೆ ಎಚ್. ಡಿ. ರೇವಣ್ಣನವರು ಪೊಲೀಸರನ್ನು ವಾಪಸ್ ಕಳಿಸಲು ಸ್ಪಂದಿಸಿದ್ದರು ಎಂದರು.

ಬುಧವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನ ಅಧಿಕಾರಿಗಳು ಬೆಂಡೆಕೆರೆ ಗ್ರಾಮದಲ್ಲಿ ನಿಗದಿಪಡಿಸಿರುವ ಪರಿಹಾರ ವ್ಯತ್ಯಾಸವಿದೆ. ಜಾಜೂರು ಗ್ರಾಮದಬಳಿ ಅಥವಾ ಬೆಂಡೆಕೆರೆ ಗ್ರಾಮದಲ್ಲಿ ಅತಿ ಹೆಚ್ಚು ಬೆಲೆಗೆ ಕ್ರಯವಾಗಿರುವ ಭೂಮಿಯ ಬೆಲೆ ಆಧರಿಸಿ ಪರಿಹಾರ ನೀಡಲು ಅಧಿಕಾರಿಗಳು ಒಪ್ಪಿಕೊಂಡರು, ಇದರಿಂದಾಗಿ ಗುಂಟೆಗೆ ಸುಮಾರು ಒಂದು ಲಕ್ಷದ ಇಪ್ಪತ್ತು ಸಾವಿರ ರು. ದೊರಕುತ್ತದೆ. ಜಿಲ್ಲಾಧಿಕಾರಿಯನ್ನು ಅಭಿನಂದಿಸುತ್ತೇನೆ, ಸಂಜೆ 5 ರಿಂದ ರಾತ್ರಿ 9 ರವರೆಗೆ ಸಭೆಯಲ್ಲಿದ್ದು ರೈತರ ಸಮಸ್ಯೆಗೆ ಉತ್ತಮವಾಗಿ ಸ್ಪಂದಿಸಿದರು. ಸಂಸದ ಪ್ರಜ್ವಲ್ ರೇವಣ್ಣ ಮತ್ತು ರೇವಣ್ಣ ಅವರು ರೈತರಿಗೆ ಆಗಿರುವ ಅನ್ಯಾಯವನ್ನು ಎಳೆಎಳೆಯಾಗಿ ತೆರೆದಿಟ್ಟು ಅಧಿಕಾರಿಗಳಿಗೆ ಮನದಟ್ಟು ಮಾಡಿಕೊಡುವಲ್ಲಿ ಯಶಸ್ವಿ ಆಗುವ ಮೂಲಕ 2016 ರಿಂದ ಎದುರಿಸುತ್ತಿದ್ದ ರೈತರ ಸಮಸ್ಯೆಗೆ ತೆರಳದಂತಾಗಿದೆ ಎಂದು ತಿಳಿಸಿದರು.

ಈಶಣ್ಣ ಪಂಚಾಕ್ಷರಿ, ಭೋಜನಾಯ್ಕ, ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಪ್ಪ ಉಪಸ್ಥಿತರಿದ್ದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಎನ್ ಆರ್ ಸಂತೋಷ್ ಕುಮಾರ್ ಮಾತನಾಡಿದರು