ಸಾರಾಂಶ
ಹಾಸನ ಜಿಲ್ಲೆಯ ಅಭಿವೃದ್ಧಿಗೆ ಎಚ್.ಡಿ.ದೇವೇಗೌಡರ ಕೊಡುಗೆ ಅಪಾರವಾಗಿದೆ, ಇಂತಹವರನ್ನು ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು. ಚನ್ನರಾಯಪಟ್ಟಣದಲ್ಲಿ ಪ್ರಜ್ವಲ್ ರೇವಣ್ಣ ಪರವಾಗಿ ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಮತ್ತು ಬೆಂಬಲಿಗರು ಬುಧವಾರ ಮತಯಾಚನೆ ಮಾಡಿದರು.
ಎನ್‌ಡಿಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಪರ ಶಾಸಕ ಬಾಲಕೃಷ್ಣ ಮತಯಾಚನೆ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣಹಾಸನ ಜಿಲ್ಲೆಯ ಅಭಿವೃದ್ಧಿಗೆ ಎಚ್.ಡಿ.ದೇವೇಗೌಡರ ಕೊಡುಗೆ ಅಪಾರವಾಗಿದೆ, ಇಂತಹವರನ್ನು ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ತಾಲೂಕಿನ ಕಸಬಾ ಹೋಬಳಿಯ ಡಿ. ಕಾಳೇನಹಳ್ಳಿ ಗ್ರಾಮದಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರವಾಗಿ ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಮತ್ತು ಬೆಂಬಲಿಗರು ಬುಧವಾರ ಮತಯಾಚನೆ ಮಾಡಿದರು. ಬಳಿಕ ಕಾಳೇನಹಳ್ಳಿ ಗ್ರಾಮದ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಸಿ. ಎನ್. ಬಾಲಕೃಷ್ಣ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೈತರ ಬಗ್ಗೆ ವಿಶೇಷ ಕಾಳಜಿಯಿಂದ ಸಾಲ ಮನ್ನಾ ಯೋಜನೆಯನ್ನು ಜಾರಿ ಮಾಡಿದ್ದಾರೆ, ಮಾಜಿ ಸಚಿವ ಎಚ್.ಡಿ.ರೇವಣ್ಣನವರು ಹಾಸನ ಜಿಲ್ಲೆಯ ಅಭಿವೃದ್ಧಿಗಾಗಿ ಹಲವಾರು ಜನಪರವಾದ ಯೋಜನೆಗಳನ್ನು ಜಾರಿ ಮಾಡುವಲ್ಲಿ ಸಫಲರಾಗಿದ್ದಾರೆ ಎಂದು ಹೇಳಿದರು.ಸಂಸದ ಪ್ರಜ್ವಲ್ ಪ್ರಜ್ವಲ್ ರೇವಣ್ಣ ಹಾಸನ ಜಿಲ್ಲೆಯ ಅಭಿವೃದ್ಧಿಗಾಗಿ ೧೬,೦೦೦ ಕೋಟಿ ರು. ಅನುದಾನವನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ, ಇವರ ಸೇವೆಯನ್ನು ಗಮನದಲ್ಲಿಟ್ಟುಕೊಂಡು ೨೦೨೪ನೇ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾದ ಪ್ರಜ್ವಲ್ ರೇವಣ್ಣ ರವರನ್ನು ಗೆಲ್ಲಿಸಿ ಕೊಡಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಸಹಕಾರ ಮಾರಾಟ ಮಂಡಳಿಯ ನಿರ್ದೇಶಕ ಸಿ. ಎನ್. ಪುಟ್ಟಸ್ವಾಮಿಗೌಡ, ನಾಡಪ್ರಭು ಕೆಂಪೇಗೌಡ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಆನಂದ್ ಕಾಳೇನಹಳ್ಳಿ, ಸುಬ್ಬಣ್ಣ, ರಂಗಪ್ಪ, ಕೆಇಬಿ ಗೋಪಾಲ್, ಮೊಗಣ್ಣ, ಬೋರ್ ವೆಲ್ ವೆಂಕಟೇಶ್, ಕಂಟ್ರ್ಯಾಕ್ಟರ್ ಶಂಕರ್, ದಿಲೀಪ್ (ಗುಂಡ), ಸ್ಟುಡಿಯೋ ಮಂಜು, ಪಟೇಲ್ ಲಕ್ಷ್ಮೀಶ, ಕಾರ್ತಿಕ್, ಸುಭಾಷ್, ಚಕ್ಕೆ ರಾಜು, ನಾಗೇಂದ್ರ, ನಾಗಯ್ಯ,ಸುರೇಶ್ ರಂಗಸ್ವಾಮಿ, ರಂಗಪ್ಪ ,ಮಂಜಪ್ಪ, ಕುಮಾರ್ ರಾಜೀವ್, ಧರ್ಮೇಶ್ ಉಮೇಶ್, ಡೈರಿ ಮಂಜು, ರಾಜು, ವಿಜಯ್, ಅಜಯ್, ಕಾಂತರಾಜು, ಚಂದ್ರಶೇಖರ್, ಕೋಡಿ ನಂಜುಂಡಪ್ಪ, ಕೋಡಿ ಸ್ವಾಮಿ, ಕಂಟ್ರ್ಯಾಕ್ಟರ್ ಜಯರಾಮ್, ಸೊಪ್ಪಿನಹಳ್ಳಿ ಮಂಜು, ಕೊಡಿ ಗಿರೀಶ್, ಚಂದ್ರು, ನಾಗೇಶ್, ಪುಟ್ಟಸ್ವಾಮಿ, ನಾರಾಯಣಶೆಟ್ಟಿ, ಮೂಸಪ್ಪನ ನಾಗಣ್ಣ ಹಾಜರಿದ್ದರು.ಚನ್ನರಾಯಪಟ್ಟಣದ ಡಿ. ಕಾಳೇನಹಳ್ಳಿ ಗ್ರಾಮದಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರವಾಗಿ ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಮತ್ತು ಬೆಂಬಲಿಗರು ಬುಧವಾರ ಮತಯಾಚನೆ ಮಾಡಿದರು.