ದೇವೇಗೌಡ ಹುಟ್ಟುಹಬ್ಬ: ಅರಸೀಕೆರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

| Published : May 19 2024, 01:55 AM IST

ದೇವೇಗೌಡ ಹುಟ್ಟುಹಬ್ಬ: ಅರಸೀಕೆರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹುಟ್ಟು ಹಬ್ಬವನ್ನು ಅರಸೀಕೆರೆಯ ಜೆಡಿಎಸ್ ಮುಖಂಡರು ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಸಿಹಿ ಹಂಚಿ ಹಾಗೂ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲನ್ನು ವಿತರಿಸುವ ಮೂಲಕ ಆಚರಿಸಿದರು.

ದೇವೇಗೌಡರ ಜನ್ಮದಿನಕ್ಕೆ ಗಣಪತಿ ದೇಗುಲದಲ್ಲಿ ವಿಶೇಷ ಪೂಜೆ । ಸಿಹಿ ಹಂಚಿ ಸಂಭ್ರಮ

ಕನ್ನಡಪ್ರಭ ವಾರ್ತೆ ಅರಸೀಕೆರೆ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹುಟ್ಟು ಹಬ್ಬವನ್ನು ನಗರದಲ್ಲಿ ಜೆಡಿಎಸ್ ಮುಖಂಡರು ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಸಿಹಿ ಹಂಚಿ ಹಾಗೂ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲನ್ನು ವಿತರಿಸುವ ಮೂಲಕ ಆಚರಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಹೊಸೂರು ಗಂಗಾಧರ್ ಮಾತನಾಡಿ, ಕನ್ನಡ ನಾಡಿನ ಗೌರವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ದೇಶದ 11ನೇ ಪ್ರಧಾನಿಯಾಗಿ ಉತ್ತಮ ಸೇವೆ ಸಲ್ಲಿಸುವ ಮೂಲಕ ನಾಡಿಗೆ ಕೀರ್ತಿಯನ್ನು ತಂದುಕೊಟ್ಟವರು ಎಚ್.ಡಿ.ದೇವೇಗೌಡರು. ಇವರ ಆಡಳಿತದ ಕಡಿಮೆ ಅವಧಿಯಲ್ಲಿಯೂ ಯಾವುದೇ ಭ್ರಷ್ಟಾಚಾರವಿಲ್ಲದೇ ದೇಶದ ಏಳಿಗೆಗೆ ಶ್ರಮಸಿದರು. ಅಲ್ಲದೇ ರಾಜ್ಯದ ಅಭಿವೃದ್ದಿ ದೃಷ್ಠಿಯಿಂದ ಯಾವುದೇ ಸಮಸ್ಯೆಗಳು ಬಂದರೂ ಸಹ ಯಾರೇ ಪ್ರಧಾನಿಯಾಗಿದ್ದರೂ ಹೋರಾಟ ಮಾಡಿ ರಾಜ್ಯದ ಚಿಂತನೆ ಮಾಡುವರು ಎಂದು ಹೇಳಿದರು.

ಗ್ರಾಮೀಣ ಪರಿಸರದಿಂದ ಬಂದ ಇವರು ರೈತರ ಮಗನಾಗಿ ಸಕ್ರಿಯ ರಾಜಕಾರಣ ಮೂಲಕ ಎತ್ತರಕ್ಕೇರಿದ ಇವರು ದಕ್ಷಿಣ ಭಾರತದಿಂದ ಉತ್ತಮ ಭಾರತದೆಡೆ ಸಾಗಿ ಕೆಂಪು ಕೋಟೆಯ ಮೇಲೆ ಧ್ವಜ ಹಾರಿಸಿದರು. ಪಂಜಾಬಿನಲ್ಲಿ ಇಂದೂ ಕೂಡ ಇವರ ಹೆಸರಿನ ಭತ್ತದ ತಳಿ ಇರುವುದು ಇವರ ಆಡಳಿತದ ವೈಖರಿಯನ್ನು ತೋರಿಸುತ್ತದೆ ಎಂದು ಬಣ್ಣಿಸಿದರು.

ಮಾಜಿ ಶಾಸಕ ಪರಮೇಶ್ವರಪ್ಪ ಮಾತನಾಡಿ, ಕರ್ನಾಟಕಕ್ಕೆ ಪ್ರತ್ಯೇಕ ರೈಲ್ವೆ ವಲಯವನ್ನು ಮಂಜೂರು ಮಾಡಿಸಿ, ಸರೋಜನಿ ಮಹಿಷಿ ವರದಿಯನ್ನು ಅನುಷ್ಠಾನಗೊಳಿಸಿದ ಕೀರ್ತಿ ದೇವೇಗೌಡರದ್ದು. ಅಲ್ಲದೇ ರಾಜ್ಯ ಕಬ್ಬು ಬೆಳೆಗಾರರ ಕಷ್ಟವನ್ನರಿತು 20 ಹೊಸ ಸಕ್ಕರೆ ಕಾರ್ಖಾನೆಗಳಿಗೆ ಅನುಮತಿ ನೀಡಿದರು. ಅಲ್ಲದೇ ನೀರಾವರಿ ತಜ್ಞರಾಗಿರುವ ಇವರು ಆಲಮಟ್ಟಿ ಅಣೆಕಟ್ಟಿನ ಎತ್ತರಕ್ಕೆ ಅನುಮೋದನೆ ನೀಡಿದವರು. ಬೆಂಗಳೂರು ನಗರಕ್ಕೆ ಭಗೀರಥರಾಗಿ ಕಾವೇರಿ 4ನೇ ಹಂತದ ಮೂಲಕ ನೀರನ್ನು ಒದಗಿಸಲು ಮುಕ್ತಿ ಕೊಡಿಸಿದವರು ಎಂದು ತಿಳಿಸಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಬಾಣಾವರ ಅಶೋಕ್, ಹುಲ್ಲೇಕೆರೆ ಕುಮಾರ್, ನಗರಸಭೆ ಸದಸ್ಯ

ಈಶ್ವರಪ್ಪ, ಜಾಕೀರ್, ಲಾಳನಕೆರೆ ಯೋಗೀಶ್, ಬಿ.ಜಿ.ನಿರಂಜನ್, ಶೇಖರ್‌ ನಾಯ್ಕ, ಹರ್ಷವರ್ಧನ್, ರಮೇಶ್, ಕೆಜೆಪಿ ಮಂಜು, ಗಣೇಶ್, ರವಿ, ಸಂತೋಷ್, ಗಂಡಸಿ ಮಂಜುನಾಥ್, ಮಹದೇವಪ್ಪ ಹಿರಿಯಾಳು, ಮೇಳೇನಹಳ್ಳಿ ಮಲ್ಲಿಕಾರ್ಜುನ್ ಇದ್ದರು.