ಜಾನಪದ ಸಾಹಿತ್ಯ ಅಧ್ಯಯನದ ಒಲವು ಬೆಳೆಸಿಕೊಳ್ಳಿ: ಡಾ.ಎಂ.ಬಿ.ಗಣಪತಿ

| Published : Apr 11 2025, 12:37 AM IST

ಜಾನಪದ ಸಾಹಿತ್ಯ ಅಧ್ಯಯನದ ಒಲವು ಬೆಳೆಸಿಕೊಳ್ಳಿ: ಡಾ.ಎಂ.ಬಿ.ಗಣಪತಿ
Share this Article
  • FB
  • TW
  • Linkdin
  • Email

ಸಾರಾಂಶ

ಆನವಟ್ಟಿ: ವಿದ್ಯಾರ್ಥಿಗಳು ಜಾನಪದ ಸಾಹಿತ್ಯ ಅಧ್ಯಯನದ ಒಲವು ಬೆಳೆಸಿಕೊಳ್ಳಬೇಕು ಎಂದು ಪ್ರಾಂಶುಪಾಲ ಡಾ.ಎಂ.ಬಿ.ಗಣಪತಿ ಸಲಹೆ ನೀಡಿದರು.

ಆನವಟ್ಟಿ: ವಿದ್ಯಾರ್ಥಿಗಳು ಜಾನಪದ ಸಾಹಿತ್ಯ ಅಧ್ಯಯನದ ಒಲವು ಬೆಳೆಸಿಕೊಳ್ಳಬೇಕು ಎಂದು ಪ್ರಾಂಶುಪಾಲ ಡಾ.ಎಂ.ಬಿ.ಗಣಪತಿ ಸಲಹೆ ನೀಡಿದರು.ಇಲ್ಲಿನ ಸರ್ಕಾರಿ‌ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡ ಜಾನಪದ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದ ಸಾಹಿತ್ಯದಲ್ಲಿ, ಬದುಕಿನ ಪ್ರತಿಯೊಂದು ಸ್ತರವನ್ನು ಜಾನಪದರು ತಮ್ಮದೆ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಹಳ್ಳಿಗಾಡಿ ಬದುಕು, ಅವರ ಸಂಸ್ಕಾರ, ಆಚಾರ-ವಿಚಾರಗಳ ಜೊತೆಗೆ ತತ್ವಗಳು ಮತ್ತು ಗಣಿತಶಾಸ್ತ್ರವನ್ನು ತಮ್ಮ ಪದಗಳ ರಚನೆಯಲ್ಲಿ ಜೋಡಿಸಿದ್ದಾರೆ. ಜಾನಪದ ಸಾಹಿತ್ಯ ಅಧ್ಯಯನದಿಂದ ಜ್ಞಾನದ ವಿಕಸನ ಆಗುತ್ತದೆ ಎಂದರು.

ತಾಲೂಕು‌ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ‌ಡಾ.ಎಸ್.ಎಂ.ನೀಲೇಶ ಮಾತನಾಡಿ, ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಿಸುವಲ್ಲಿ ಜಾನಪದ ಸಾಹಿತ್ಯ, ಕಲೆಗಳ ಕೊಡುಗೆ ಅನನ್ಯ. ಆಧುನಿಕತೆ ಹಾಗೂ ಜಾಗತಿಕರಣದ ವ್ಯತಿರಿಕ್ತ ಪರಿಣಾಮದಿಂದ ಜಾನಪದ ಅಳಿವಿನಂಚಿನಲ್ಲಿದೆ. ಮನುಷ್ಯನ ಬದುಕಿನ ಚಿತ್ರಣ ಹಾಗೂ ಮೌಲ್ಯಗಳು ಜಾನಪದದಲ್ಲಿ ಅಡಗಿದ್ದು, ಅದನ್ನು ವಿದ್ಯಾರ್ಥಿಗಳಿಗೆ ತಿಳಿಸುವ ನಿಟ್ಟಿನಲ್ಲಿ ಕಾಲೇಜುಗಳಲ್ಲಿ ಜಾನಪದ ಉತ್ಸವ ನಡೆಸುತ್ತಿರುವುದು ಉತ್ತಮ‌ ಬೆಳವಣಿಗೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಹ ಪ್ರಾಧ್ಯಾಪಕಿ ಎಸ್.ಯಶೋಧ, ಐಕ್ಯೂಎಸಿ ಸಂಚಾಲಕ ಎಸ್.ಬಿ.ರಾಘವೇಂದ್ರ ನಾಯ್ಕ್, ಸಾಂಸ್ಕೃತಿಕ ವಿಭಾಗದ ಸಂಚಾಲಕ ಆರ್.ಸಿ.ಭೀಮಪ್ಪ, ಜಾನಪದ ಉತ್ಸವ ಸಂಚಾಲಕ ಶ್ರೀಕಾಂತ ಮಹಾದೇವ ಆಡೆಮನೆ, ಸಹ ಸಂಚಾಲಕ ಇ.ಶಿವಕುಮಾರ್ ಇದ್ದರು.

ಪೂಜಾ ಸಂಗಡಿಗರು ಪ್ರಾರ್ಥಿಸಿ, ವಿಜಯಲಕ್ಷ್ಮಿ ಸ್ವಾಗತಿಸಿ, ಕಿರಣ ವಂದಿಸಿ, ಕ್ಷಮಾ ಮತ್ತು ನಮಿತಾ ನಿರೂಪಿಸಿದರು.