ಮಕ್ಕಳಲ್ಲಿ ಕರಕುಶಲ ತಯಾರಿಕಾ ನೈಪುಣ್ಯತೆ ಬೆಳೆಸಿ

| Published : Jan 03 2024, 01:45 AM IST

ಸಾರಾಂಶ

ನೈಸರ್ಗಿಕ ಮತ್ತು ಪರಿಸರ ಸ್ನೇಹಿ ಬಿದುರಿನ ಬುಟ್ಟಿ ಹಾಗೂ ಅಲಂಕಾರಿಕ ವಸ್ತುಗಳು, ಜೊಂಡು ಹುಲ್ಲಿನಿಂದ ಮನೆ ಬಳಕೆ ವಸ್ತುಗಳು, ಬಂಜಾರ ಉಡುಪಿನ ಕೈಕಸೂತಿ ಮುಂತಾದ ಕರಕುಶಲ ವಸ್ತು ತಯಾರಿಸಿ ಪ್ರದರ್ಶಿಸಲಾಗುವುದು ಇದರ ಸದುಪಯೋಗ ಪಡೆದುಕೊಳ್ಳಬೇಕು

ಕೊಪ್ಪಳ: ಮಕ್ಕಳಲ್ಲಿ ಕರಕುಶಲ ತಯಾರಿಕಾ ನೈಪುಣ್ಯತೆ ಬೆಳೆಸಲು ಈ ಕಾರ್ಯಕ್ರಮವು ಸಹಕಾರಿಯಾಗಲಿದೆ. ಇದರ ಸದುಪಯೋಗ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಶಾಲಾ ಕಾರ್ಯನಿರ್ವಹಣಾ ನಿರ್ದೇಶಕ ಡಾ.ವಿಶ್ವನಾಥ ರೆಡ್ಡಿ ಹೇಳಿದರು. ನಗರದ ಕಿಡದಾಳದ ಬಳಿಯಿರುವ ಶ್ರೀಶಾರದ ಇಂಟರ್ ನ್ಯಾಷನಲ್ ಶಾಲೆಯ ಕಲಾಮಯಿ ಸಭಾಂಗಣದಲ್ಲಿ 3 ದಿನಗಳ ಕರಕುಶಲ ವಸ್ತು ತಯಾರಿಕೆ ಕಾರ್ಯಗಾರ ಮತ್ತು ಪ್ರದರ್ಶನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರಕುಶಲ ಅಭಿವೃದ್ಧಿ ಇಲಾಖೆ ಮತ್ತು ಜವಳಿ ಸಚಿವಾಲಯ, ಭಾರತ ಸರ್ಕಾರ. ಮಂಗಳೂರು ವಿಭಾಗ ವತಿಯಿಂದ ಮೂರು ದಿನಗಳ ಕಾಲ ಈ ಕಾರ್ಯಗಾರ ನಡೆಯಲಿದ್ದು, ನೈಸರ್ಗಿಕ ಮತ್ತು ಪರಿಸರ ಸ್ನೇಹಿ ಬಿದುರಿನ ಬುಟ್ಟಿ ಹಾಗೂ ಅಲಂಕಾರಿಕ ವಸ್ತುಗಳು, ಜೊಂಡು ಹುಲ್ಲಿನಿಂದ ಮನೆ ಬಳಕೆ ವಸ್ತುಗಳು, ಬಂಜಾರ ಉಡುಪಿನ ಕೈಕಸೂತಿ ಮುಂತಾದ ಕರಕುಶಲ ವಸ್ತು ತಯಾರಿಸಿ ಪ್ರದರ್ಶಿಸಲಾಗುವುದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲ ಡಾ.ಪಿ.ಆರ್.ಎಸ್. ಚಕ್ರವರ್ತಿ, ಕರಕುಶಲ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ. ಎಸ್, ಸಹನಾ ರೀಡ್ ಕ್ರಾಫ್ಟ್ ಲಕ್ಷ್ಮೀಶ್ವರ, ಕಿಷ್ಕಿಂದ ಟ್ರಸ್ಟ್ ಆನೆಗೊಂದಿ, ಕರಕುಶಲ ಕೇಂದ್ರ ಸಂಡೂರು, ಕರಕುಶಲ ಕೈಗಾರಿಕಾ ಮೇಳ ಕೊಪ್ಪಳ ಮುಂತಾದ ನುರಿತ ಕುಶಲಕರ್ಮಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳು ಇದ್ದರು.