ಸಾರಾಂಶ
ಹೂವಿನಹಡಗಲಿ: ಇಂದಿನ ಪಠ್ಯಕ್ರಮವು ಸುಳ್ಳುಗಳಿಂದ ತುಂಬಿದೆ. ಉಪಯೋಗಕ್ಕೆ ಬಾರದ ಶಿಕ್ಷಣ ವ್ಯವಸ್ಥೆ ಇದೆ. ಬುದ್ಧಿ ಏನು ಎಂದು ತಿಳಿಯದವರು ಬುದ್ಧಿಜೀವಿಗಳಾಗಿದ್ದಾರೆ. ದೇಶದ ಬೌದ್ಧಿಕ ಕಾಯಿಲೆಯನ್ನು ಕಿತ್ತು ಹಾಕುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ವಿಜಯಪುರದ ನಿರ್ಭಯಾನಂದ ಸ್ವಾಮೀಜಿ ಹೇಳಿದರು.
ಇಲ್ಲಿನ ಜಿಬಿಆರ್ ಕಾಲೇಜಿನಲ್ಲಿ ಆಯೋಜಿಸಿದ್ದ ಕರ್ನಾಟಕ ಸಂಘ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ವೇದ ಕಾಲದಿಂದ ವಿದ್ಯಾರ್ಥಿಗಳ ಪರಂಪರೆ ಆರಂಭವಾಯಿತು. ಧರ್ಮವನ್ನು ವಿರೋಧಿಸುವ ವಿಜ್ಞಾನಿಗಳ ಗುಂಪು ಸಹ ಉಪನಿಷತ್ತುಗಳನ್ನು ಅಧ್ಯಯನ ಮಾಡಿದ್ದಾರೆ. ನಮ್ಮ ದೇಶದ ವಿದ್ಯಾರ್ಥಿ ಪರಂಪರೆ ಹೆಚ್ಚು ಶಕ್ತಿಯುತವಾಗಿದ್ದು. ಪ್ರತಿಯೊಂದು ಜಾತಿಯ ಪೂರ್ವಜರು, ವೇದ ಕಾಲದ ಋಷಿಗಳ ಪರಂಪರೆಗೆ ಸೇರಿದ್ದಾರೆ. ಅವರ ರಕ್ತವು ನಿಮ್ಮಲ್ಲಿದೆ. ಯಾವ ಪ್ರವಾದಿ, ಮಹಾತ್ಮ ಹಾಗೂ ಸ್ವತಃ ವಿವೇಕಾನಂದರು ಹೇಳಿದ್ದನ್ನು ಪರೀಕ್ಷಿಸದೇ ಯಾವುದನ್ನು ನಂಬಬಾರದು ಎಂದರು.ಇತಿಹಾಸದಲ್ಲಿ ಆರ್ಯರು ಹೊರಗಿನವರು ಎಂದು ಸುಳ್ಳು ಹೇಳಿದ್ದಾರೆ. ಈ ದೇಶದಲ್ಲಿ ಉಪಯೋಗಕ್ಕೆ ಬಾರದ ಶಿಕ್ಷಣ ವ್ಯವಸ್ಥೆ ಇದೆ. ವೈಜ್ಞಾನಿಕ ಲೋಕಕ್ಕೆ ಸವಾಲಾಗಿದ್ದನ್ನು ನಿಮ್ಮ ವಯಸ್ಸಿನ ವಿಜ್ಞಾನಿಯೊಬ್ಬ ಪರಿಹರಿಸಿದ್ದಾನೆ. ಜೀವನದಲ್ಲಿ ಸಾಧನೆ ಮಾಡುವವರಿಗೆ ಯಾವುದೂ ಅಸಾಧ್ಯವಿಲ್ಲ ಎಂದರು.
ದೇಶದ ಆಡಳಿತ ಮೂರ್ಖರ ಕೈಯಲ್ಲಿದೆ. ಬೆಳೆಯುವ ಮಕ್ಕಳಿಗೆ ದೇಶದ ಇತಿಹಾಸ ತಿಳಿಸುತ್ತಿಲ್ಲ, ವಿವೇಕಾನಂದರಿಗೆ ಅದರ ತಿಳಿವಳಿಕೆ ಇತ್ತು. ಇತಿಹಾಸದಲ್ಲಿ ಚಂದಮಾಮ ಮತ್ತು ಬೇತಾಳದ ಕಥೆಗಳು ಇದ್ದವು. ನಿಜವಾದ ಇತಿಹಾಸವನ್ನು ತಿಳಿಯಲು ಮೊದಲು ಮುಂದಾಗಬೇಕೆಂದು ಹೇಳಿದರು.ಮಕ್ಕಳಿಗೆ ಶಿಕ್ಷಕರು ಕ್ರಿಯಾಶೀಲವಾಗಿ ಕಲಿಕಾಸಕ್ತಿ ಬೆಳೆಸಬೇಕಿದೆ. ಶಿಕ್ಷಕರು ಸರಿಯಾಗಿ ಕೆಲಸ ಮಾಡಿದರೇ, ಒಂದು ದೇಶವನ್ನು ನಕರದಿಂದ ಸ್ವರ್ಗವನ್ನು ಸೃುಷ್ಟಿ ಮಾಡಬಹುದು, ಶಿಕ್ಷಕರು ತಾವು ಪಡೆಯುವ ಸಂಬಳದ ಎರಡರಷ್ಟು ಕೆಲಸ ಮಾಡಬೇಕು.ಪ್ರಪಂಚದಲ್ಲಿ ಭಾರತ ಅತಿ ಶ್ರೀಮಂತ ದೇಶವಾಗಿತ್ತು. ಆದರೆ ಶಿಕ್ಷಕರು ಸರಿಯಾಗಿ ಕೆಲಸ ಮಾಡದ ಕಾರಣ, ಈ ದೇಶದಲ್ಲಿ ಬಡತನ ಸೃಷ್ಟಿಯಾಯಿತು. ನಡೆದಾಡುವ ದೇವರು ಎಂಬುವ ಹೆಸರು ಶಿಕ್ಷಕರಿಗೆ ಒಪ್ಪುತ್ತದೆ ಎಂದರು.
ಕಾಲೇಜು ಪ್ರಾಚಾರ್ಯ ಎಸ್.ಎಸ್.ಪಾಟೀಲ ಮಾತನಾಡಿ, ಐದು ಲಕ್ಷಕ್ಕೂ ಮೊತ್ತದ ದತ್ತಿ ಹಣವನ್ನು ಠೇವಣಿಯಾಗಿದೆ. ಈ ಕಾಲೇಜಿನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ವಿದ್ಯಾರ್ಥಿಗಳು ಸಿಕ್ಕ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಉತ್ತರ ಕರ್ನಾಟಕ ಭಾಗದಲ್ಲಿ ಹಾನಗಲ್ಲ ಕುಮಾರ ಸ್ವಾಮೀಜಿ ಜನಿಸದಿದ್ದರೆ, ಈ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳು ಆರಂಭವಾಗುತ್ತಿರಲಿಲ್ಲ. ಅವರಿಂದ ಆರಂಭವಾದ ಶಿಕ್ಷಣ ಸಂಸ್ಥೆಗಳು ಅಕ್ಷರಕ್ರಾಂತಿ ಮಾಡಿವೆ ಎಂದರು.
ಆಡಳಿತ ಮಂಡಳಿ ಅಧ್ಯಕ್ಷ ಸಿ.ಮೋಹನ ರೆಡ್ಡಿ, ವೀವಿ ಸಂಘದ ಮಾಜಿ ಸಹ ಕಾರ್ಯದರ್ಶಿ ಐಗೋಳ್ ಚಿದಾನಂದ, ವಕೀಲ ಸಿ.ಕೆ.ಎಂ. ಬಸವಲಿಂಗಯ್ಯ ಸ್ವಾಮಿ, ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಅಕ್ಕಿ ಶಿವಕುಮಾರ್, ಸದಸ್ಯ ಕನ್ನಿಹಳ್ಳಿ ಮುದುಕಪ್ಪ, ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಇತರರಿದ್ದರು.