ಪ್ರಾಥಮಿಕ ಹಂತದಿಂದ ಕನ್ನಡ ಭಾಷೆಯ ಕೌಶಲ ಅರಿವು ಮೂಡಿಸಿ

| Published : Feb 22 2024, 01:49 AM IST

ಸಾರಾಂಶ

ಕರ್ನಾಟಕ ಏಕೀಕರಣದ ನಂತರ ಸಮಗ್ರವಾಗಿ ಕರ್ನಾಟಕ ಮತ್ತು ಕನ್ನಡ ಕಟ್ಟುವುದರಲ್ಲಿ ಹಿನ್ನಡೆಯಾಗುತ್ತಿರುವ ಪರಿಣಾಮ ಕನ್ನಡ ಭಾಷೆಯ ಪ್ರಾಬಲ್ಯ ಕುಗ್ಗುತ್ತಿದೆ. ಹೀಗಾಗಿ ಪ್ರಾಥಮಿಕ ಹಂತದಿಂದಲೇ ಕನ್ನಡ ಭಾಷಾ ಕೌಶಲ್ಯಗಳ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ.ಜಿ.ಹಿರೇಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕರ್ನಾಟಕ ಏಕೀಕರಣದ ನಂತರ ಸಮಗ್ರವಾಗಿ ಕರ್ನಾಟಕ ಮತ್ತು ಕನ್ನಡ ಕಟ್ಟುವುದರಲ್ಲಿ ಹಿನ್ನಡೆಯಾಗುತ್ತಿರುವ ಪರಿಣಾಮ ಕನ್ನಡ ಭಾಷೆಯ ಪ್ರಾಬಲ್ಯ ಕುಗ್ಗುತ್ತಿದೆ. ಹೀಗಾಗಿ ಪ್ರಾಥಮಿಕ ಹಂತದಿಂದಲೇ ಕನ್ನಡ ಭಾಷಾ ಕೌಶಲ್ಯಗಳ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ.ಜಿ.ಹಿರೇಮಠ ಹೇಳಿದರು.

ಅವರು ಬಿ.ವ್ಹಿ.ವ್ಹಿ.ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯ, ಕನ್ನಡ ಸ್ನಾತಕೋತ್ತರ ವಿಭಾಗ,ಕನ್ನಡ ನುಡಿ ವೇದಿಕೆ ಹಮ್ಮಿಕೊಂಡ ಕನ್ನಡ ನುಡಿ ವೇದಿಕೆಯ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಎಂ.ಎ.ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿ ಮಾತನಾಡಿದರು.

ಕನ್ನಡ ಭಾಷೆಯನ್ನು ಕಟ್ಟಿಕೊಳ್ಳುವ ವ್ಯವಸ್ಥೆಯಲ್ಲಿ ನಾವೆಲ್ಲರು ವಿಪಲರಾಗಿದ್ದು, ಕನ್ನಡ ಭಾಷೆ ರಾಜಕೀಯಕ್ಕೆ ಬಳಕೆಯಾದಷ್ಟು ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ಬಳಕೆ ಯಾಗಿದ್ದು ಕಡಿಮೆ. ಆಧುನಿಕ ಯುಗದಲ್ಲಿ ಪುಸ್ತಕಗಳ ರಾಶಿಯ ಇದೆ. ಆ ಪುಸ್ತಕಗಳನ್ನು ಬಳಸಿಕೊಳ್ಳುವವರ ಪ್ರಮಾಣ ಕಡಿಮೆ ಇದೆ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡವನ್ನು ಹೇಗೆ ತೆಗೆದುಕೊಳ್ಳಬೇಕು, ಯಾವ ಪುಸ್ತಕ ಓದಬೇಕು ಜೊತೆಗೆ ನಾಡು ನುಡಿಯ, ಪ್ರಜ್ಞೆ ಮೂಡಿಸುವುದು ಅನಿವಾರ್ಯವಾಗಿದೆ ಎಂದರು.

ಅನ್ಯಭಾಷಿಕ ವಿದ್ಯಾರ್ಥಿಗಳು ಕನ್ನಡ ಸಾಹಿತ್ಯ ಚಾರಿತ್ರಿಕ ಪತ್ರಿಕೆಗಳನ್ನು ಓದಿಕೊಂಡೆ ಯು.ಪಿ.ಎಸ್.ಸಿ.ಹಾಗೂ ಕೆ.ಪಿ.ಎಸ್ಸಿ. ಪರೀಕ್ಷೆಗಳನ್ನು ಬರೆಯುವುದಾದರೆ, ಕನ್ನಡ ವಿದ್ಯಾರ್ಥಿಗಳಿಗೆ ಇದು ಏಕೆ ಸಾಧ್ಯವಾಗುವುದಿಲ್ಲ ಎಂದು ಪ್ರಶ್ನಿಸಿದರು,

ಕನ್ನಡ ಭಾಷೆ ಇಂದು ಕಂಪ್ಯೂಟರ್ ಹಾಗೂ ಮೊಬೈಲ್ ಭಾಷೆಯಾಗಬೇಕಿದೆ. ಮಕ್ಕಳಲ್ಲಿ ನಮ್ಮ ದೇಶ,ನಮ್ಮ ರಾಜ್ಯ,ನಮ್ಮ ಭಾಷೆಯೆಂಬ ಕನ್ನಡಾಭಿಮಾನವನ್ನು ಬೆಳಸಬೇಕಿದೆ. ಅನ್ಯ ಭಾಷೆಗಳ ಬೆಳವಣಿಗೆಯ ತಂತ್ರಗಳನ್ನು ಗಮನಸಿ, ನಮ್ಮ ಕನ್ನಡ ಭಾಷೆಯ ಬೇರುಗಳನ್ನು ಇನ್ನಷ್ಟು ಗಟ್ಟಿಗೊಳಿಸಲು ನಮ್ಮದೆಯಾದ ಆಧುನಿಕ ತಂತ್ರಗಳನ್ನು ಕಂಡುಹಿಡಿಬೇಕಿದೆ ಎಂದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾವಿದ್ಯಾಲಯ ಪ್ರಾಚಾರ್ಯ ಎಸ್.ಆರ್. ಮೂಗನೂರಮಠ 2001ರಲ್ಲಿ ಕನ್ನಡ ಸ್ನಾತಕೋತ್ತರ ವಿಭಾಗವನ್ನು ಡಾ.ಬಿ.ಕೆ.ಹಿರೇಮಠ ಅವರ ನೇತೃತ್ವದಲ್ಲಿ ಪ್ರಾರಂಬಿಸಲಾಯಿತು. ಕನ್ನಡ ವಿಭಾಗವನ್ನು ಕಟ್ಟುವಿಕೆ ಮತ್ತು ಬೆಳೆಯುವಿಕೆಗೆ ಅನೇಕ ವಿದ್ವಾಂಸರ ಪಾತ್ರ ಹಿರಿದಾಗಿದೆ. ಜೊತೆ ಜೊತೆಗೆ ಕನ್ನಡ ನುಡಿ ವೇದಿಕೆ ಪ್ರಾರಂಭಗೊಂಡಿದ್ದು, ಕನ್ನಡಪರ ಅನೇಕ ಕಾರ್ಯ ಚಟುವಟಿಕೆಗಳನ್ನು ಆಯೋಜನೆ ಮಾಡುವ ಮೂಲಕ ಕನ್ನಡ ಭಾಷೆಯ ಅಭಿವೃದ್ಧಿಗೆ ತನ್ನದೆಯಾದ ಕೊಡುಗೆಯನ್ನು ನಮ್ಮ ಮಹಾವಿದ್ಯಾಲಯದ ಕನ್ನಡ ನುಡಿವೇದಿಕೆ ನೀಡಿದೆ. ಕನ್ನಡ ವಿದ್ಯಾರ್ಥಿಗಳು ಭಾಷಾ ಸೃಜನಶೀಲತೆಯನ್ನು ಬೆಲೆಸಿಕೊಳ್ಳಬೇಕು ಎಂದರು.

ಕನ್ನಡ ಸ್ನಾತಕೋತ್ತರ ವಿಭಾಗದ ಸಂಯೋಜಕಿ ಡಾ.ವೀಣಾ ಕಲ್ಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೆಲೆ ಕನ್ನಡ ನುಡಿ ವೇದಿಕೆಯ ಸಂಚಾಲಕ ಡಾ.ಬಸವರಾಜ ಕುಂಬಾರ, ಐಕ್ಯೂಎಸಿ ಸಂಯೋಜಕ ಡಾ.ಎ.ಯು.ರಾಠೋಡ, ಪ್ರಾಧ್ಯಾಪಕರಾದ ಡಾ.ಎಸ್.ಡಿ.ಕೆಂಗಲಗುತ್ತಿ, ಪ್ರೊ.ಆರ್.ಆಯ್.ಗೌಡರ ಇದ್ದರು.

ಇದೇ ಸಂದರ್ಭದಲ್ಲಿ ಎಂ.ಎ.ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ಪುಷ್ಪ ಹಾಗೂ ಪುಸ್ತಕ ಕೊಡುವ ಮೂಲಕ ಸ್ವಾಗತಿಸಲಾಯಿತು.

ಕುಮಾರ ಶರಣ ಬಸವ ಪಲ್ಲೆದ ಪ್ರಾರ್ಥಿಸಿದರು. ಸುಜಾತ ಧುತ್ತರಗಿ ಸ್ವಾಗತಿಸಿದರು. ಸಮಿವುಲ್ಲಾ ಭಾಗವಾನ ವಂದಿಸಿದರೆ, ಶ್ರೀದೇವಿ ಮೆಣಸಿನಕಾಯಿ ನಿರೂಪಿಸಿದರು.

--

(ಫೋಟೋ 21ಬಿಕೆಟಿ5,ಪೋಟೋ 02