ಸಾರಾಂಶ
ವಿದ್ಯಾರ್ಥಿಗಳ ಇಂಟರ‍್ಯಾಕ್ಟ್ ಕ್ಲಬ್‌ನ ಪದಗ್ರಹಣ ಸಮಾರಂಭ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುವಿದ್ಯಾರ್ಥಿಗಳು ಶಿಕ್ಷಣದ ಜೊತೆಯಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ರೋಟರಿ ಜಿಲ್ಲಾ ಉಪ ಕಾರ್ಯದರ್ಶಿ ಕೆ.ಟಿ.ವೆಂಕಟೇಶ್ ಹೇಳಿದರು. ಮೇಲ್ಪಾಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ಆಯೋಜಿಸಿದ್ದ ವಿದ್ಯಾರ್ಥಿಗಳ ಇಂಟರ‍್ಯಾಕ್ಟ್ ಕ್ಲಬ್‌ನ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ಇಂಟರ‍್ಯಾಕ್ಟ್ ಕ್ಲಬ್ ರೋಟರಿ ಸಂಸ್ಥೆ ಅಂಗ ಸಂಸ್ಥೆಯಾಗಿದ್ದು, ವಿದ್ಯಾರ್ಥಿಗಳು ಇಂತಹ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜಮುಖಿ ಕೆಲಸ ಮಾಡುವ ಮೂಲಕ ನಾಯಕತ್ವ ಗುಣ ಗಳನ್ನು ಬೆಳೆಸಿಕೊಳ್ಳಬೇಕು. ಅಲ್ಲದೆ ಸಮಾಜದ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು. ಇಂದು ಕೌಶಲ್ಯ ಆಧಾರಿತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಇದೆ ಎಂದರು.
ರೋಟರಿ ಅಧ್ಯಕ್ಷ ತಿಮ್ಮಯ್ಯಗೌಡ ಮಾತನಾಡಿ, ಸಮಾಜ ಸೇವೆ ಮಾಡಲು ಇಂಟರ‍್ಯಾಕ್ಟ್ ಕ್ಲಬ್ ಒಂದು ಉತ್ತಮ ವೇದಿಕೆ. ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಪಾಲ್ಗೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಾಗ ಆತ್ಮ ತೃಪ್ತಿ ದೊರೆಯಲಿದೆ ಎಂದರು.ಇಂಟರ‍್ಯಾಕ್ಟ್ ಕ್ಲಬ್ ನೂತನ ಅಧ್ಯಕ್ಷರಾಗಿ ಆತ್ಮಿಕ, ಕಾರ್ಯದರ್ಶಿಯಾಗಿ ಲೋಹಿತಯ್ಯ ಅಧಿಕಾರ ಸ್ವೀಕರಿಸಿದರು. ರೋಟರಿ ವಲಯಾಧಿಕಾರಿ ಎಂ.ಸಿ.ಯೋಗೀಶ್, ವಲಯ ಕಾರ್ಯದರ್ಶಿ ಎಂ.ಸಿ.ವಿವೇಕ್, ಕಾರ್ಯದರ್ಶಿ ಸೈಯ್ಯದ್ ಫಾಜಿಲ್ ಹುಸೇನ್, ಮುಖ್ಯಶಿಕ್ಷಕ ಎಚ್.ವಿ.ಸುರೇಶಪ್ಪ, ಇಂರ‍್ಯಾಕ್ಟ್ ನೋಡಲ್ ಅಧಿಕಾರಿ ಶಿಕ್ಷಕರಾದ ಕೆ.ಎಂ.ರಾಘವೇದ್ರ, ಎಚ್.ಎನ್. ವಿಶ್ವನಾಥ್, ವೆಂಕಟೇಶಮೂರ್ತಿ, ರಾಮಣ್ಣ, ರೇಖಾ, ಇಂಟರ‍್ಯಾಕ್ಟ್ ನಿರ್ಗಮಿತ ಅಧ್ಯಕ್ಷೆ ರಕ್ಷಾ, ಕಾರ್ಯದರ್ಶಿ ಸಾನ್ವಿತ್ ಮತ್ತಿತರರು ಹಾಜರಿದ್ದರು. ೨೩ಬಿಹೆಚ್‌ಆರ್ ೫:ಬಾಳೆಹೊನ್ನೂರು ಸಮೀಪದ ಮೇಲ್ಪಾಲ್ ಸರ್ಕಾರಿ ಪ್ರೌಡಶಾಲೆಯಲ್ಲಿ ರೋಟರಿ ಕ್ಲಬ್ ನಿಂದ ನಡೆದ ವಿದ್ಯಾರ್ಥಿಗಳ ಇಂಟರ‍್ಯಾಕ್ಟ್ ಕ್ಲಬ್‌ನ ಪದಗ್ರಹಣ ಸಮಾರಂಭದಲ್ಲಿ ರೋಟರಿ ಜಿಲ್ಲಾ ಉಪ ಕಾರ್ಯದರ್ಶಿ ಕೆ.ಟಿ.ವೆಂಕಟೇಶ್ ಮಾತನಾಡಿದರು. ತಿಮ್ಮಯ್ಯಗೌಡ, ಎಂ.ಸಿ.ಯೋಗೀಶ್, ಎಂ.ಸಿ.ವಿವೇಕ್, ಸೈಯ್ಯದ್ ಫಾಜಿಲ್ ಇದ್ದರು.