ರಾಮಾಯಣ, ಮಹಾ ಭಾರತ ಓದುವ ಹವ್ಯಾಸ ಬೆಳೆಸಿಕೊಳ್ಳಿ: ಚಂದ್ರೇಗೌಡ

| Published : Sep 30 2025, 12:00 AM IST

ಸಾರಾಂಶ

ಯುವ ಸಮುದಾಯದಲ್ಲಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂಬ ಮನೋಭಾವ ಬರಬೇಕು. ಅದಕ್ಕಾಗಿ ನಾವು ಹಿಂದಿನ ಕಥೆಗಳ ಬಗ್ಗೆ ತಿಳಿಸಿ ಹೇಳಬೇಕು. ಬರಿ ಗಣಿತ, ವಿಜ್ಞಾನ, ಸಮಾಜ, ಎಂಬುದನ್ನು ತಿಳಿಸುತ್ತಾ ಅವರು ಡಾಕ್ಟರ್ ಮತ್ತು ಎಂಜಿನಿಯರ್‌ಗಳಾಗಿ ಹೋಗುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಹಲಗೂರು

ರಾಮಾಯಣ, ಮಹಾಭಾರತ ಸೇರಿದಂತೆ ದೇಶಕ್ಕಾಗಿ ಶ್ರಮಿಸಿದ ಹಲವು ಮಹನೀಯರು ಬರದಿರುವ ಪುಸ್ತಕಗಳನ್ನು ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಶಿಕ್ಷಕ ಚಂದ್ರೇಗೌಡ ಕರೆ ನೀಡಿದರು.

ಹಲಗೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಅವರಣದ ಕುವೆಂಪು ಸಭಾಂಗಣದಲ್ಲಿ ಡಿ.ಆರ್.ಗುರು ಶಿಷ್ಯರ ಬಳಗದಿಂದ ಹಮ್ಮಿಕೊಂಡಿದ್ದ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳನ್ನು ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ಮಾಡಲು ಮಹನೀಯರು ಬರೆದಿರುವ ಪುಸ್ತಕಗಳು ನೆರವಾಗಲಿವೆ. ಮಕ್ಕಳಲ್ಲಿ ಒಳ್ಳೆಯ ಆದರ್ಶ ಗುಣ ಬೆಳೆಸುವಲ್ಲಿ ನಾವುಗಳು ಮುಂದಾಗಬೇಕಾಗಿದೆ ಎಂದರು.

ಯುವ ಸಮುದಾಯದಲ್ಲಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂಬ ಮನೋಭಾವ ಬರಬೇಕು. ಅದಕ್ಕಾಗಿ ನಾವು ಹಿಂದಿನ ಕಥೆಗಳ ಬಗ್ಗೆ ತಿಳಿಸಿ ಹೇಳಬೇಕು. ಬರಿ ಗಣಿತ, ವಿಜ್ಞಾನ, ಸಮಾಜ, ಎಂಬುದನ್ನು ತಿಳಿಸುತ್ತಾ ಅವರು ಡಾಕ್ಟರ್ ಮತ್ತು ಎಂಜಿನಿಯರ್‌ಗಳಾಗಿ ಹೋಗುತ್ತಿದ್ದಾರೆ. ಸಮಾಜದ ಏಳಿಗೆಗಾಗಿ ಕೊಡುಗೆ ನೀಡುವ ನಿಟ್ಟಿನಲ್ಲಿ ಉತ್ತಮ ಪ್ರಜೆಯಾಗಿ ಮಾಡಲು ವಿಫಲರಾಗುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಶಿಕ್ಷಕರಾದ ಸಿದ್ದಯ್ಯ, ಬಸವರಾಜು, ಪ್ರಭಾಕರ್, ನರಸಿಂಹೇಗೌಡ, ರಮೇಶ್ ಅವರನ್ನು ಗುರು ಶಿಷ್ಯರ ಬಳಗದಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಈ ವೇಳೆ ಬಳಗದ ಅಧ್ಯಕ್ಷ ಎ.ಎಸ್.ದೇವರಾಜು, ಕಾರ್ಯದರ್ಶಿ ರಾಜೇಶ್ವರಿ, ಖಜಾಂಚಿ ಅಭಿಜಿತ್ ಬಸವರಾಜು, ಪದಾಧಿಕಾರಿಗಳಾದ ತಮ್ಮಣ್ಣಗೌಡ, ಜಿ.ಎಸ್.ಕೃಷ್ಣ, ಚಂದ್ರೇಗೌಡ, ನಂಜರಾಜು, ಸುರೇಂದ್ರ, ಮಹೇಶ್, ಡಾ.ರಾಜು ಗುಂಡಾಪುರ ಸೇರಿದಂತೆ ಹಲವರು ಭಾಗವಹಿಸಿದ್ದರು.

ಡೇರಿ ನಿರ್ದೇಶಕರಾಗಿ ಅವಿರೋಧ ಆಯ್ಕೆ

ದೇವಲಾಪುರ: ನಾಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಎನ್.ಜೆ.ರಾಜೇಶ್ ನೇತೃತ್ವದಲ್ಲಿ ಬೆಂಬಲಿತರು ವಿರೋಧವಾಗಿ ಆಯ್ಕೆಯಾಗಿದರು. ಗ್ರಾಮದ ಡೇರಿ ಸಂಘದಲ್ಲಿ ಇದುವರೆಗೂ ಮೂರು ಬಾರಿಯೂ ಚುನಾವಣೆ ನಡೆಯದೆ ಎನ್.ಜೆ.ರಾಜೇಶ್ ಸೇರಿದಂತೆ ಎನ್.ಎಸ್ ಗೋಪಾಲ, ಎನ್.ಅಪ್ಪಾಜಿಗೌಡ, ಮುದ್ದೇಗೌಡ, ಚನ್ನಮ್ಮ, ಮರಿದೇವಮ್ಮ, ಇಂದ್ರ, ಚನ್ನಶೆಟ್ಟಿಸ, ಎನ್.ಕೆ.ಅಶೋಕ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.