ಹಡಪದ ಅಪ್ಪಣ್ಣನ ತತ್ವಾದರ್ಶ ಬೆಳಸಿಕೊಳ್ಳಿ

| Published : Jul 11 2025, 12:32 AM IST

ಹಡಪದ ಅಪ್ಪಣ್ಣನ ತತ್ವಾದರ್ಶ ಬೆಳಸಿಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಶರಣ ಹಡಪದ ಅಪ್ಪಣ್ಣನವರ ತತ್ವಾದರ್ಶ ಇಂದಿಗೂ ಅನನ್ಯವಾಗಿವೆ. ಅವುಗಳನ್ನು ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಹಸನಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗಿಟ್ಟೆ ಮಾಧವ ವಿಠ್ಠಲ್ ರಾವ್ ಹೇಳಿದರು.

ದಾವಣಗೆರೆ: ಶಿವಶರಣ ಹಡಪದ ಅಪ್ಪಣ್ಣನವರ ತತ್ವಾದರ್ಶ ಇಂದಿಗೂ ಅನನ್ಯವಾಗಿವೆ. ಅವುಗಳನ್ನು ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಹಸನಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗಿಟ್ಟೆ ಮಾಧವ ವಿಠ್ಠಲ್ ರಾವ್ ಹೇಳಿದರು.ಇಲ್ಲಿನ ಜಿಲ್ಲಾಡಳಿತ ಕಚೇರಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಅಪ್ಪಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಬಸವಣ್ಣನವರ ಜನಪರ ಕಾಳಜಿ ಮತ್ತು ಜನರನ್ನು ತಿದ್ದುವಂತಹ ಆದರ್ಶಗಳನ್ನು ಅಳವಡಿಸಿಕೊಂಡ ಹಡಪದ ಅಪ್ಪಣ್ಣನವರು ನಮಗೆಲ್ಲ ಆದರ್ಶಪ್ರಾಯರು ಎಂದರು. ಕ್ರಾಂತಿಕಾರಿ ಅವಧಿಯಲ್ಲಿ ತಮ್ಮದೇ ಆದ ಸಾಮಾಜಿಕ ಕ್ರಾಂತಿಯ ಮೂಲಕ ಸಮಾಜದಲ್ಲಿ ಅನೇಕ ಬದಲಾವಣೆಗಳನ್ನು ತಂದವರು ಅಪ್ಪಣ್ಣ. 12ನೇ ಶತಮಾನದಲ್ಲಿ ಹಡಪದ ಸಮಾಜದವರು ಬೆಳಿಗ್ಗೆ ಎದುರು ಬಂದರೆ ಏನೋ ಅನಾಹುತವಾಗುತ್ತದೆ ಎಂಬ ಮೂಢನಂಬಿಕೆ ಇತ್ತು. ಇದನ್ನು ಹೋಗಲಾಡಿಸಲು ಬಸವಣ್ಣನವರು ಯಾರೇ ಬಂದರೂ ಮೊದಲು ಹಡಪದ ಅಪ್ಪಣ್ಣನವರನ್ನು ನೋಡಿಕೊಂಡು ಬರಬೇಕೆಂಬ ನಿಯಮವನ್ನೇ ಮಾಡಿದ್ದರೆಂಬ ಪ್ರತೀತಿ ಇದೆ. ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ಸಾರುವುದರೊಂದಿಗೆ ಸಾಕಷ್ಟು ವಚನಗಳನ್ನು ಬರೆದ ಕೀರ್ತಿ ಹಡಪದ ಅಪ್ಪಣ್ಣನವರಿಗೆ ಸಲ್ಲುತ್ತದೆ ಎಂದು ತಿಳಿಸಿದರು. ಅಪ್ಪಣ್ಣನವರು ಯಾವ ರೀತಿ ಕ್ರಾಂತಿಕಾರಿ ಪುರುಷರಾದರೆಂಬ ಬಗ್ಗೆ, ದೇವರಾದರೆಂಬ ಬಗ್ಗೆ ನಾವು ತಿಳಿಯಬೇಕಾಗಿದೆ. ಜ್ಞಾನ, ಭಕ್ತಿ ಮತ್ತು ಕಾಯಕ ಮಾರ್ಗದಿಂದ ಅಪ್ಪಣ್ಣ ನವರು ದೇವರಾದರು. ಇದೇ ರೀತಿ ನಾವು ದೇವರನ್ನು ಕಾಣುವ ಮಾರ್ಗವನ್ನು ಕಂಡುಕೊಳ್ಳಬೇಕು. ಒಳ್ಳೆಯದೆಲ್ಲವೂ ದೇವರ ಸಮಾನ. ಆದ್ದರಿಂದ ನಾವು ಒಳ್ಳೆಯದನ್ನು ಆಯ್ಕೆ ಮಾಡಬೇಕು. ವಚನಗಳನ್ನು ಓದಿ, ಅರ್ಥೈಸಿಕೊಂಡು ಕರಗತ ಮಾಡಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ದೂಡಾ ಅಧ್ಯಕ್ಷ ದಿನೇಶ್.ಕೆ ಶೆಟ್ಟಿ, ಉಪವಿಭಾಗಾಧಿಕಾರಿ ಸಂತೋಷ್ ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ದೂಡಾ ಸದಸ್ಯೆ ವಾಣಿ ಬಕ್ಕೇಶ್, ಬಸಾಪುರದ ಶಶಿಧರ್ ಉಪಸ್ಥಿತರಿದ್ದರು.