ಜಿಲ್ಲಾ ಸ್ವಯಂ ಸಮಿತಿ ಸಭೆಯಲ್ಲಿ ಮೈ ಭಾರತ ಕೇಂದ್ರದ ಉಪ ನಿರ್ದೇಶಕಕನ್ನಡಪ್ರಭ ವಾರ್ತೆ ಕಾರವಾರ
ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಮೈ ಭಾರತ್ ಜಿಲ್ಲಾ ಸ್ವಯಂ ಸಮಿತಿ ಮೂಲಕ ಯುವ ಸಬಲೀಕರಣ ಮತ್ತು ವಿಕಸಿತ ಭಾರತದ ದೃಷ್ಠಿಯನ್ನು ಬಲಪಡಿಸಲು ಒಟ್ಟು 5 ಕೋಟಿ ಯುವಕರ ನೋಂದಣಿ ಮಾಡುವ ಗುರಿಯೊಂದಿಗೆ ನೋಂದಣಿ ಅಭಿಯಾನ ಮತ್ತು ನಶಾ ಮುಕ್ತ ಯುವ- ವಿಕಸಿತ ಭಾರತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮೈ ಭಾರತ ಕೇಂದ್ರದ ಉಪ ನಿರ್ದೇಶಕ ಲೋಕೇಶ್ ಕುಮಾರ್ ಹೇಳಿದರು.ಇತ್ತೀಚೆಗೆ ಮೈ ಭಾರತ ಕಚೇರಿಯಲ್ಲಿ ನಡೆದ ಜಿಲ್ಲಾ ಸ್ವಯಂ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತೀವ್ರ ನೋಂದಣಿ ಅಭಿಯಾನವು ಯುವಕರನ್ನು ಸ್ವಯಂ ಸೇವಕತೆ, ಕೌಶಲ್ಯಾಭಿವೃದ್ಧಿ, ನಾಯಕತ್ವ ಮತ್ತು ರಾಷ್ಟ್ರೀಯ ಸೇವಾ ಅವಕಾಶಗಳೊಂದಿಗೆ ಡಿಜಿಟಲ್ ವೇದಿಕೆಯ ಮೂಲಕ ಸಂಪರ್ಕಿಸುವ ಉದ್ದೇಶ ಹೊಂದಿದ್ದು, ದೇಶಾದ್ಯಂತ ಒಟ್ಟು 5 ಕೋಟಿ ಯುವಕರ ನೋಂದಣಿ ಮಾಡುವ ಗುರಿ ಹೊಂದಿದ್ದು, ಜಿಲ್ಲೆಯಲ್ಲಿ 35 ಸಾವಿರ ಯುವಕರನ್ನು ನೋಂದಾಯಿಸುವ ಗುರಿ ಹೊಂದಿದೆ. ಇದು ಯುವಕರಿಗೆ ಸರ್ಕಾರದ ವಿವಿಧ ಕಾರ್ಯಕ್ರಮಗಳ ಪ್ರಯೋಜನ ಪಡೆಯಲು ಮತ್ತು ಸಮುದಾಯದ ಅಭಿವೃದ್ಧಿಗೆ ಕೊಡುಗೆ ನೀಡಲು ಒಂದು ಸುಸಜ್ಜಿತ ಏಕೀಕೃತ ವೇದಿಕೆಯಾಗಿದ್ದು, ಮೈ ಭಾರತ ಕೇಂದ್ರವು ಯುವಕರಿಗೆ ಉಜ್ವಲ ಭವಿಷ್ಯನ್ನು ರೂಪಿಸುವ ಅವಕಾಶಗಳನ್ನು ನೀಡುವ ಮೂಲಕ ರಾಷ್ಟ್ರವನ್ನು ಬಲಪಡಿಸುವ ಕಾರ್ಯ ಮಾಡುತ್ತಿದೆ ಎಂದರು.ಮಾದಕ ವಸ್ತು ಮುಕ್ತ, ಶಕ್ತಿಶಾಲಿ ಮತ್ತು ಪ್ರಗತಿಶೀಲ ಯುವ ಸಮುದಾಯದ ನಿರ್ಮಾಣಕ್ಕಾಗಿ ಜಾಗೃತಿ ಮೂಡಿಸಲು ಮತ್ತು ಸಕಾರಾತ್ಮಕ ಭಾರತಕ್ಕಾಗಿ ಮೈ ಭಾರತ್ ಪೋರ್ಟಲ್‌ನಲ್ಲಿ ಮಾದಕ ವಸ್ತು ಮುಕ್ತ ಭಾರತಕ್ಕಾಗಿ ನಿಮ್ಮ ಧ್ವನಿಯನ್ನು ವ್ಯಕ್ತಪಡಿಸಿ ಎಂಬ ಶೀರ್ಷಿಕೆಯಡಿ ಸಂಗೀತ, ನೃತ್ಯ, ರೀಲ್ಸ್ / ಕಿರುಚಿತ್ರ, ನುಕ್ಕಡ್ ನಾಟಕ, ಸ್ಲಾಮ್ ಕಾವ್ಯ, ಚರ್ಚೆ, ಚಿತ್ರಕಲೆ, ಸ್ಲೋಗನ್ ಬರಹ, ಪ್ರಬಂಧ ಮತ್ತು ಪ್ರಶ್ನೋತ್ತರ, ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು.
ಈ ಸ್ಪರ್ಧೆಗಳು ಯುವಕರಿಗೆ ತಮ್ಮ ಪ್ರತಿಭೆ, ಸಾಂಸ್ಕೃತಿಕ ವಿನಿಮಯ ಮಾಡಿಕೊಳ್ಳಲು ಮತ್ತು ಸಮುದಾಯದಲ್ಲಿ ಜಾಗೃತಿ ಮೂಡಿಸಲು ಉತ್ತಮ ಅವಕಾಶ ಕಲ್ಪಿಸುತ್ತವೆ. ಆದ್ದರಿಂದ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಯುವಕ-ಯುವತಿಯರು mybharat.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳುವ ಮೂಲಕ ನಶಾ ಮುಕ್ತ ವಿಕಸಿತ ಭಾರತಕ್ಕಾಗಿ ಆರೋಗ್ಯಕರ ಮಾದಕ ವಸ್ತು ಮುಕ್ತ ಜೀವನಕ್ಕೆ ಪ್ರತಿಜ್ಞೆ ಸ್ವೀಕರಿಸಬೇಕು ಹಾಗೂ ಈ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಕೈಜೋಡಿಸುವಂತೆ ತಿಳಿಸಿದರು.