ಸಾರಾಂಶ
ಸಾಮಾಗ್ರಿ ವಿತರಣೆಯಲ್ಲಿ ಎಸ್ ಕೆ.ಬಿ.ಪ್ರಸಾದ್ ಅಭಿಮತಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸಮಾಜದ ಕಟ್ಟ ಕಡೆಯ ಮಗುವಿಗೂ ಸರ್ಕಾರದ ಎಲ್ಲ ಸೌಲಭ್ಯಗಳು ದೊರೆತಾಗ ದೇಶದ ಅಭಿವೃದ್ಧಿ ಸಾಧ್ಯ ಎಂದು ಸಮಗ್ರ ಶಿಕ್ಷಣ ಕರ್ನಾಟಕ ಯೋಜನಾ ನಿರ್ದೇಶಕರ ಕಚೇರಿಯ ಸಹ ನಿರ್ದೇಶಕ ಎಸ್.ಕೆ.ಬಿ ಪ್ರಸಾದ್ ಹೇಳಿದರು.ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ಗೃಹಾಧಾರಿತ ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ಅವಶ್ಯಕ ಸಾಮಗ್ರಿಗಳ ವಿತರಣೆ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಅನುದಾನದಲ್ಲಿ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಒಂದು ಕೋಟಿ 67 ಲಕ್ಷ ಮಕ್ಕಳಿಗೂ ಶಿಕ್ಷಣ ಇಲಾಖೆಯ ಎಲ್ಲಾ ಸೌಲಭ್ಯಗಳು ದೊರೆಯುವಂತಾಗಬೇಕು. ಚಿತ್ರದುರ್ಗ ತಾಲೂಕಿನಲ್ಲಿ 36 ಗೃಹಾಧಾರಿತ ಮಕ್ಕಳು ಇದ್ದು ಅವರಲ್ಲಿ ತೀವ್ರತರ ಅಗತ್ಯತೆಯುಳ್ಳ 7 ಮಕ್ಕಳಿಗೆ ಹಾಸಿಗೆ, ಸೊಳ್ಳೆ ಪರದೆ, ಬಕೆಟ್ ಇತ್ಯಾದಿ ಪರಿಕರಗಳನ್ನು ವಿತರಿಸಲಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂóಷಣ್ ಮಾತನಾಡಿ, ಶಿಕ್ಷಣ ಇಲಾಖೆಯ ಎಲ್ಲಾ ಅನುಷ್ಟಾನಾಧಿಕಾರಿಗಳು ಹೋಬಳಿ ಮತ್ತು ಕ್ಲಸ್ಟರ್ ಹಂತಗಳಲ್ಲಿ ವಿಶೇಷ ಅಗತ್ಯತೆಯುಳ್ಳ ಮಕ್ಕಳ ಮನೆಗೆ ಭೇಟಿ ನೀಡಿ ಸ್ಥಳೀಯ ದಾನಿಗಳಿಂದ ಸಂಪನ್ಮೂಲ ಸಂಗ್ರಹಿಸಿ ನೆರವು ನೀಡಬೇಕು ಎಂದು ತಿಳಿಸಿದರು.ಡಿವೈಪಿಸಿ ವೆಂಕಟೇಶಪ್ಪ, ಹನುಮಂತಪ್ಪ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಮಹಾಂತೇಶ್, ತಾಲೂಕು ಅಧ್ಯಕ್ಷ ಕೆಂಚಪ್ಪ, ಜಿಲ್ಲಾ ನೌಕರರ ಸಂಘದ ಪದಾಧಿಕಾರಿ ಕೆ.ಟಿ ತಿಮ್ಮಾರೆಡ್ಡಿ, ಬಿಆರ್ ಸಿ ಸಂಪತ್‍ಕುಮಾರ್, ಶಿಕ್ಷಣ ಸಂಯೋಜಕ ಕೆ.ಆರ್.ಲೋಕೇಶ್, ಮೂರ್ತಾಚಾರ್, ಮಲ್ಲಿಕಾರ್ಜುನ್, ಅಂಜಿನಪ್ಪ, ರಮೇಶ್ ರೆಡ್ಡಿ, ರವೀಂದ್ರನಾಥ್, ಟಿ.ಪಿ.ಇ.ಓ ಚನ್ನಬಸಪ್ಪ, ಬಿ.ಐ.ಇ.ಆರ್.ಟಿ ರಾಜೀವ್, ರಾಜಣ್ಣ ಮತ್ತಿತರರಿದ್ದರು.