ಶೃಂಗೇರಿಕ್ಷೇತ್ರದಲ್ಲಿ ಅಭಿವೃದ್ಧಿಯೆಂಬುದು ಮರಿಚೀಕೆಯಾಗಿದೆ. ಮಣ್ಣು, ಮರಳು ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಕಚೇರಿಗಳಳ್ಲಿ ಕೆಲಸ ಕಾರ್ಯಗಳು ಇಲ್ಲ. ಅಧಿಕಾರಿಗಳು ಶಾಸಕರ ಕೈಗೊಂಬೆಗಳಂತೆ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ದ್ವೇಷ ರಾಜಕಾರಣದಿಂದ ಕಳೆದ ಎರಡೂವರೆ ವರ್ಷದಿಂದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಆರೋಪಿಸಿದರು.

ಶೃಂಗೇರಿ ಕ್ಷೇತ್ರದಲ್ಲಿ ಅಧಿಕಾರಿಗಳು ಶಾಸಕರ ಕೈಗೊಂಬೆಗಳಂತೆ ಕೆಲಸ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಕ್ಷೇತ್ರದಲ್ಲಿ ಅಭಿವೃದ್ಧಿಯೆಂಬುದು ಮರಿಚೀಕೆಯಾಗಿದೆ. ಮಣ್ಣು, ಮರಳು ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಕಚೇರಿಗಳಳ್ಲಿ ಕೆಲಸ ಕಾರ್ಯಗಳು ಇಲ್ಲ. ಅಧಿಕಾರಿಗಳು ಶಾಸಕರ ಕೈಗೊಂಬೆಗಳಂತೆ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ದ್ವೇಷ ರಾಜಕಾರಣದಿಂದ ಕಳೆದ ಎರಡೂವರೆ ವರ್ಷದಿಂದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಆರೋಪಿಸಿದರು.

ಪಟ್ಟಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೆಎಸ್ ಆರ್ ಟಿಸಿ ಡಿಪೋ ಹೆಸರಲ್ಲಿ ಜಾಗದ ಮಣ್ಣು ಮಾರಾಟ ವಾಗುತ್ತಿದ್ದು ಬಿಡುಗಡೆಯಾದ ಅನುದಾನವೆಲ್ಲ ಮಣ್ಣು ತೆಗೆಯಲು ಬಳಕೆಯಾಗುತ್ತಿದೆ.100 ಬೆಡ್ ಆಸ್ಪತ್ರೆ ಒಳ್ಳೆ ಜಾಗ ಬಿಟ್ಟು ರಸ್ತೆ ಪಕ್ಕದಲ್ಲಿಯೇ ನಿರ್ಮಾಣ ಮಾಡುತ್ತಿದ್ದು ರಸ್ತೆ ಅಗಲೀಕರಣವಾದರೆ ಮತ್ತೆ ಸಮಸ್ಯೆಯಾಗುತ್ತದೆ ಎಂಬ ಅರಿವಿಲ್ಲದಂತೆ ಯೋಜನೆ ರೂಪಿಸಲಾಗಿದೆ ಎಂದರು.

ಧಿ ಮೈದಾನದಲ್ಲಿ ಬದುಕಿಗಾಗಿ ಸುಮಾರು ವರ್ಷಗಳಿಂದ ಅಂಗಡಿ ಹೋಟೇಲ್‌ ನಡೆಸುತ್ತಿದ್ದ ವ್ಯಾಪಾರಿಗಳನ್ನು ಅಧಿಕಾರಿಗಳ ಮೇಲೆ ಒತ್ತಡ ಹೇರಿ ದ್ವೇಷ ಸಾಧನೆಗೆ ತೆರವು ಗೊಳಿಸಿ ಅವರನ್ನು ಬೀದಿ ಪಾಲು ಮಾಡಲಾಗಿದೆ. ಆದರೆ ಕೋಗಿಲುವಿನಲ್ಲಿ ಜಾತಿ ರಾಜಕಾರಣ ಮಾಡಿ ಪುನರ್ವಸತಿ ಕಲ್ಪಿಸಲಾಗಿದೆ. ಇಲ್ಲಿಯೂ ಅದೇ ರೀತಿ ಪುನರ್ವಸತಿ ಕಲ್ಪಿಸಬೇಕು ಇಲ್ಲದಿದ್ದರೆ ಅಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ರಾಜ್ಯ ಸರ್ಕಾರ ಇದ್ದು ಇಲ್ಲದಂತಾಗಿದೆ ಕೆ.ಸಿ.ವೇಣುಗೋಪಾಲ್ ಕರ್ನಾಟಕದ ಸೂಪರ್ ಸಿಎಂ ಆಗಿದ್ದಾರೆ. ರಾಜ್ಯದಲ್ಲಿ ಏನೇ ತಿರ್ಮಾನವಾಗಬೇಕಾದರೆ ಕೇರಳ ಸರ್ಕಾರದ ಆದೇಶ ಪಾಲಿಸುವಂತಾಗಿದೆ. ಬಾಂಗ್ಲಾದಿಂದ ನುಸುಳಿ ಬಂದ ನಿರಾಶ್ರಿತರಿಗೆ ಆಶ್ರಯ ನೀಡುತ್ತಿದ್ದಾರೆ. ಬಾಂಗ್ಲದಲ್ಲಿ ನಡೆಯುತ್ತಿರುವ ಘಟನೆಗಳು ರಾಜ್ಯದಲ್ಲಿ ನಡೆಯದಿರಲಿ. ಎಲೆ ಚುಕ್ಕಿ ರೋಗ ಬಂದಿಲ್ಲ ವೆಂದು ವರದಿ ನೀಡಿದ್ದಾರೆ. ಬೆಳೆ ವಿಮೇ ಕೇಳಿದರೆ ಅತಿವೃಷ್ಠಿ ಎಂದು ಘೋಷಣೆಯಾಗಿಲ್ಲ. ಅತಿವೃಷ್ಠಿ ಎಂದು ಏಕೆ ಘೋಷಣೆ ಮಾಡಿಲ್ಲ ಎಂದರೆ ಮಳೆ ಬಂದಿಲ್ಲ ಎನ್ನುತ್ತಾರೆ. ಮಳೆ ಮಾಪನ ಕೇಂದ್ರಗಳು ಹಾಳಾಗಿವೆ. ಶಾಸಕರು ದ್ವೇಷ ಬಿಟ್ಟು ಅಭಿವೃದ್ಧಿ ಮಾಡಬೇಕು ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ತಲಗಾರು ಉಮೇಶ್, ಕಾರ್ಯದರ್ಶಿ ವೇಣುಗೋಪಾಲ್, ನೂತನ್ ಕುಮಾರ್, ಪ್ರವೀಣ್ ಕುಮಾರ್, ಅಂಗುರುಡಿ ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.

2 ಶ್ರೀ ಚಿತ್ರ 1-ಶೃಂಗೇರಿ ಪಟ್ಟಣದಲ್ಲಿ ತಾಲೂಕು ಬಿಜೆಪಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿದರು.