ಸಾರಾಂಶ
ಸದಸ್ಯರ ವಾರ್ಷಿಕ ಸಭೆ ಕನ್ನಡಪ್ರಭ ವಾರ್ತೆ ತಿಪಟೂರು
ಪ್ರಾಮಾಣಿಕತೆ, ಸಹಕಾರಿ ತತ್ವ, ಸೇವಾ ಮನೋಭಾವನೆಗಳನ್ನಿಟ್ಟುಕೊಂಡು ಬೆಳೆಯುತ್ತಿರುವ ಸಹಕಾರಿ ಸಂಘಗಳಿಗೆ ಸದಸ್ಯರುಗಳೇ ಆಧಾರ ಸ್ತಂಭವಿದ್ದಂತೆ ಎಂದು ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ಎಚ್.ಸಿ.ರಾಜಶೇಖರಯ್ಯ ಹೇಳಿದರು.ನಗರದ ಗೊರಗೊಂಡನಹಳ್ಳಿ ಪ್ರಾಥಮಿಕ ಕೃಷಿ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾರಂಭಗೊಂಡ ನಮ್ಮ ಸಹಕಾರ ಸಂಘಕ್ಕೆ ೧೧೪ ವರ್ಷ ತುಂಬಿದೆ. ಅಲ್ಲಿಂದ ಇಲ್ಲಿಯವರೆಗೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತ ಎಲ್ಲರ ಮೆಚ್ಚುಗೆ ಗಳಿಸಿದೆ. ಪ್ರಸಕ್ತ ವರ್ಷ ನಮ್ಮ ಸಂಘವು ೭ಲಕ್ಷದ ೨೪ಸಾವಿರದ ೫೩೯ ರು. ನಿವ್ವಳ ಲಾಭ ಗಳಿಸಿದ್ದು, ಸದಸ್ಯರ ಸಹಕಾರದಿಂದ ಅಭಿವೃದ್ಧಿ ಹೊಂದಿದೆ ಎಂದು ತಿಳಿಸಿದರು.ಸದಸ್ಯರ ಅನುಕೂಲಕ್ಕಾಗಿ ವಿವಿಧ ರೀತಿಯ ಸಾಲ ಮತ್ತು ವ್ಯವಹಾರ ಮಾಡಿಕೊಂಡು ಬರುತ್ತಿದೆ. ಕೆಸಿಸಿ ಸಾಲ, ವಾಹನ ಸಾಲ, ಚಿನ್ನಾಭರಣ ಸಾಲ, ಸ್ಥಿರಾಸ್ತಿ ಆಧಾರ ಸಾಲ, ನಿತ್ಯ ನಿಧಿ ಸಾಲ, ಬಳಕೆ ಸಾಲ ಒಟ್ಟು ₹೫ ಕೋಟಿಗೂ ಹೆಚ್ಚು ಸಾಲವನ್ನು ಸದಸ್ಯರಿಗೆ ನೀಡಲಾಗಿದೆ ಎಂದು ಹೇಳಿದರು.
ಮುಖಂಡ ಎಂ.ಸಿ.ಮಂಜುನಾಥ್ ಮಾತನಾಡಿ, ದೇಶದಲ್ಲಿ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕೃಷಿ ಪತ್ತಿನ ಸಹಕಾರಿ ಕಾರಣವಾಗಿದೆ. ರೈತರು ಅಲ್ಪಾವಧಿ ಬೆಳೆಸಾಲ, ಕೃಷಿ ಸಾಮಗ್ರಿ, ಗೊಬ್ಬರ ಬೀಜ ಖರೀದಿ ಬೆಳೆ ಸಾಳ, ಸರ್ಕಾರದ ನಿರ್ದೇಶನದಂತೆ ನೀಡಲಾಗುತ್ತಿದೆ. ತಾಲೂಕಿನಲ್ಲಿ ೨೧ ಸಹಕಾರಿಗಳಲ್ಲಿ ಈ ಸಹಕಾರಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಬಿ.ರಾಜಶೇಖರಯ್ಯ, ಸಹಕಾರಿ ಉಪಾಧ್ಯಕ್ಷೆ ಕಲಾವತಿ, ನಿರ್ದೇಶಕರಾದ ಸುದರ್ಶನ್, ನಾಗರಾಜು, ಮಹಾಲಿಂಗಪ್ಪ, ದೇವರಾಜು, ವಿಶ್ವೇಶ್ವರಯ್ಯ, ಗೋಪಾಲ್, ಲತಮ್ಮ, ಶಿವಯ್ಯ, ನವೀನ್‌ಕುಮಾರ್, ಸುರೇಶ್, ನಗರಸಭಾ ಸದಸ್ಯೆ ಪದ್ಮಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್‌ಕುಮಾರ್, ಸಿಬ್ಬಂದಿಗಳಾದ ಕಾಂತರಾಜ್, ಪವನ್‌ಕುಮಾರ್ ಇದ್ದರು.