ಸಾರಾಂಶ
ರಾಣಿಬೆನ್ನೂರು: ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ನಗರದ ಕೃಷಿ ಇಲಾಖೆಯಲ್ಲಿ ಸೋಮವಾರ ಕೃಷಿ ಇಲಾಖೆ ಹಾಗೂ ತಾಲೂಕು ಕೃಷಿಕ ಸಮಾಜ, ಆತ್ಮ ಯೋಜನೆಯ ವತಿಯಿಂದ ಹಮ್ಮಿಕೊಂಡ ರೈತ ದಿನಾಚರಣೆ ಉದ್ಟಾಟಿಸಿ ಮಾತನಾಡಿದರು.ಮಾಜಿ ಪ್ರಧಾನಿ ಚೌಧರಿ ಚರಣಸಿಂಗ್ ಅವರ ಜನ್ಮದಿನದ ಅಂಗವಾಗಿ ರೈತ ದಿನ ಆಚರಿಸಲಾಗುತ್ತಿದೆ. ರೈತರು ಬೀಜ, ಗೊಬ್ಬರ ಸೇರಿದಂತೆ ಎಲ್ಲವನ್ನೂ ರಿಟೇಲ್ ದರದಲ್ಲಿ ಖರೀದಿ ಮಾಡುತ್ತಾರೆ. ಆದರೆ, ತಾನು ಬೆಳೆದ ಬೆಳೆಗಳನ್ನು ಹೋಲ್‌ಸೆಲ್‌ನಲ್ಲಿ ಮಾರಾಟ ಮಾಡುತ್ತಾರೆ ಎಂದರು.ರೈತರಲ್ಲಿ ಸಂಘಟನೆ ಕೊರತೆಯಿದೆ. ಸರ್ಕಾರ ಎಚ್ಚೆತ್ತುಕೊಳ್ಳಲು ರೈತರು ಒಗ್ಗೂಡಿಕೊಂಡು ಹೋರಾಟ ಮಾಡಬೇಕಾಗುತ್ತದೆ. ನಾನೂ ಒಕ್ಕುಲತನ ಮಾಡಿದ್ದೇನೆ. ನಾನೂ ಒಬ್ಬ ರೈತ ಎನ್ನಲು ಹೆಮ್ಮೆ ಎನಿಸುತ್ತದೆ. ರೈತರಿಗೆ ಸರ್ಕಾರದಿಂದ ನ್ಯಾಯ ಸಿಕ್ಕಿಲ್ಲ. ಹಸಿರು ಟವಲ್ ಹಾಕಿಕೊಂಡರೆ ನಾನು ರೈತನಾಗಲ್ಲ. ಅವರ ಸಮಸ್ಯೆ ಪರಿಹಾರಕ್ಕೆ ಹೋರಾಟ ಮಾಡಬೇಕು ಎಂದರು.
ಈ ವರ್ಷ ಈರುಳ್ಳಿ ರೇಟ್ ಜಾಸ್ತಿ ಎಂದರೆ ಈರುಳ್ಳಿ ಹಾಕುವುದು ಸರಿಯಲ್ಲ. ಇನ್ನು ಅಡಕೆ ತಿನ್ನುವರು ಬೇರೆ ದೇಶದಲ್ಲಿ ಯಾರೂ ಇಲ್ಲ. ನಮ್ಮ ದೇಶದಲ್ಲಿ ಮಾತ್ರ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಹೀಗಾಗಿ, ಎಲ್ಲರೂ ಅಡಕೆ ಬೆಳೆದರೆ ಮುಂದಿನ ದಿನಗಳಲ್ಲಿ ದರ ಕಡಿಮೆಯಾದರೂ ಅಗಬಹುದು. ಆದ್ದರಿಂದ ರೈತರು ಸಮಗ್ರ ಕೃಷಿಯ ಕಡೆಗೆ ಗಮನ ಹರಿಸಿ ಎಂದರು.ಕೃಷಿ ಅಧಿಕಾರಿ ಶಾಂತಮಣಿ ಮಾತನಾಡಿ, ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಬೆಳೆಗಳ ಕಟಾವಿಗೆ ಅನುಕೂಲವಾಗಲಿ ಎಂದು ಶಾಸಕರು ಹಾರ್ವೆಸ್ಟ್ ಹಬ್ ಯೋಜನೆಗೆ ಸದ್ಯದಲ್ಲಿಯೇ ಚಾಲನೆ ನೀಡಲಿದ್ದಾರೆ ಎಂದರು.
ಕೃಷಿ ವಿಜ್ಞಾನಿ ಡಾ. ಮಂಜುನಾಥ ಎಲ್. ಉಪನ್ಯಾಸ ನೀಡಿದರು. ಕೃಷಿಕ ಸಮಾಜ ಅಧ್ಯಕ್ಷ ಎಂ.ಎಚ್. ಪಾಟೀಲ, ಕೃಷಿ ಇಲಾಖೆ ಉಪನಿರ್ದೇಶಕ ಕರಿಯಲ್ಲಪ್ಪ ಕೊರಚೇರ, ರೈತ ಸಂಘದ ತಾಲೂಕು ಅಧ್ಯಕ್ಷ ಸುರೇಶ ಮೈದೂರ, ರೈತ ಮುಖಂಡ ರವೀಂದ್ರಗೌಡ ಪಾಟೀಲ, ಹನುಮಂತಪ್ಪ ಕಬ್ಬಾರ, ಬಸವರಾಜ ಕಡೂರ, ಕೃಷ್ಣಮೂರ್ತಿ ಸುಣಗಾರ, ಶಂಕ್ರಪ್ಪ ಮೆಣಸಿನಹಾಳ, ಎಂಸಿಎಫ್ ಮ್ಯಾನೇಜರ್ ದೇವರಾಜ, ತೋಟಗಾರಿಕೆ ಅಧಿಕಾರಿ ಜಗದೀಶ ಹುಲಗೂರ ಮತ್ತಿತರರಿದ್ದರು.;Resize=(128,128))
;Resize=(128,128))
;Resize=(128,128))