ಕಾರ್ಯದರ್ಶಿಗಳು ನಿಷ್ಠೆ, ಪ್ರಾಮಾನ ಕಾಯಕವೆಂದು ಭಾವಿಸಿದತರೆ ಅಭಿವೃದ್ಧಿ ಸಾಧ್ಯ: ಎಸ್ ಡಿ ಸೋನಾಲ್ ಗೌಡ

| Published : Dec 12 2024, 12:32 AM IST

ಕಾರ್ಯದರ್ಶಿಗಳು ನಿಷ್ಠೆ, ಪ್ರಾಮಾನ ಕಾಯಕವೆಂದು ಭಾವಿಸಿದತರೆ ಅಭಿವೃದ್ಧಿ ಸಾಧ್ಯ: ಎಸ್ ಡಿ ಸೋನಾಲ್ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಕಾರ್ಯದರ್ಶಿಗಳು ನಿಷ್ಠೆ, ಪ್ರಾಮಾನ ಕಾಯಕವೆಂದು ಭಾವಿಸಿದರೆ ಹಾಲು ಉತ್ಪಾದಕರು ಹಾಗೂ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹಾಸನ ಹಾಲು ಒಕ್ಕೂಟದ ನಿರ್ದೇಶಕ ಎಸ್. ಡಿ. ಸೋನಾಲ್ ಗೌಡ ಹೇಳಿದ್ದಾರೆ.

ತರೀಕೆರೆಯಲ್ಲಿ ಒಂದು ದಿನದ ವಿಶೇಷ ಸಹಕಾರಿ ತರಬೇತಿ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ, ತರೀಕೆರೆ

ಕಾರ್ಯದರ್ಶಿಗಳು ನಿಷ್ಠೆ, ಪ್ರಾಮಾನ ಕಾಯಕವೆಂದು ಭಾವಿಸಿದರೆ ಹಾಲು ಉತ್ಪಾದಕರು ಹಾಗೂ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹಾಸನ ಹಾಲು ಒಕ್ಕೂಟದ ನಿರ್ದೇಶಕ ಎಸ್. ಡಿ. ಸೋನಾಲ್ ಗೌಡ ಹೇಳಿದ್ದಾರೆ.ಬುಧವಾರ ಪಟ್ಟಣದ ಟಿಎಪಿಎಂಎಸ್ ನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿಯಮಿತ, ಚಿಕ್ಕಮಂಗಳೂರು ಜಿಲ್ಲಾ ಸಹಕಾರ ಯೂನಿಯನ್, ಹಾಸನ ಹಾಲು ಒಕ್ಕೂಟ, ಚಿಕ್ಕಮಗಳೂರು ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ತರೀಕೆರೆ, ಅಜ್ಜಂಪುರ, ಎನ್ಆರ್ ಪುರ, ಕೊಪ್ಪ ತಾಲೂಕುಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ, ಕಾರ್ಯಾಧಕ್ಷತೆ, ಶುದ್ಧ ಹಾಲು ಉತ್ಪಾದನೆ ಹಾಗೂ ರಾಸುಗಳ ಆರೋಗ್ಯ ನಿರ್ವಹಣೆ ಬಗ್ಗೆ ನಡೆದ ಒಂದು ದಿನದ ವಿಶೇಷ ಸಹಕಾರಿ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.ಹಾಲು ಹಾಗೂ ಹೈನುಗಾರಿಕೆಯಲ್ಲಿ ದೇಶದಲ್ಲಿ ಉತ್ತರ ಪ್ರದೇಶ ಮಧ್ಯಪ್ರದೇಶ, ಗುಜರಾತ್, ರಾಜಾಸ್ಥಾನ, ಈಗ ಕರ್ನಾಟಕವೂ ಈ ರಾಜ್ಯಗಳಿಗೆ ಹೋಲಿಸಿದರೆ ಈ ವರ್ಷದಲ್ಲಿ ನಾಲ್ಕರಷ್ಟು ಹಾಲಿನ ಉತ್ಪಾದನೆ ಹೆಚ್ಚಿಸಿಕೊಂಡು ಮುಂದೆ ಸಾಗುತ್ತಿದ್ದು, ಇದಕ್ಕೆ ಕರ್ನಾಟಕ ಮಿಲ್ಕ್ ಫೆಡರೇಶನ್ ತುಂಬಾ ಸಹಾಯ ಮಾಡುತ್ತಿದೆ ಎಂದು ತಿಳಿಸಿದರು.ಕಾರ್ಯದರ್ಶಿಗಳು ಪ್ರಾಮಾಣಿಕತೆಯಿಂದ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಸ್ಪಂದಿಸುವ ಮುಖಾಂತರ ಶುದ್ಧ ಹಾಲು ಉತ್ಪಾದಿಸುವ ಸಲುವಾಗಿ ಕೆಎಂಎಫ್ ನಿಂದ ನೀಡಬಹುದಾದ ಸೌಲಭ್ಯಗಳನ್ನು ಕೊಡಿಸಿ ಹೈನುಗಾರಿಕೆ ಅವಲಂಭಿತ ರೈತರಿಗೆ ಸಹಾಯ ಮಾಡುವುದು ಕಾರ್ಯದರ್ಶಿ ಕರ್ತವ್ಯ. ಈ ನಿಟ್ಟಿನಲ್ಲಿ ಅವರಿಗೆ ಮಾರ್ಗದರ್ಶಿಯಾಗಿ ರಾಸು, ವ್ಯವಹಾರ ಹಾಗೂ ಸಂಘದ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಮುಕ್ತ ಹಾಲು ಉತ್ಪಾದಕರ ಸಂಘಗಳಾಗಿ ಪರಿವರ್ತನೆಗೊಂಡು ದೇಶಕ್ಕೆ ಉತ್ತಮ ಆದಾಯ ತರುವ ನಿಟ್ಟಿನಲ್ಲಿ ಸಹಕಾರಿ ಆಗಬೇಕೆಂದು ಹೇಳಿದರು. ಸಹಕಾರ ಯೂನಿಯನ್ ನ ಉಪಾಧ್ಯಕ್ಷ ದಿವಾಕರ್ ಅಧ್ಯಕ್ಷತೆವಹಿಸಿ ಮಾತನಾಡಿ ಪ್ರಸ್ತುತ ಹೈನುಗಾರಿಕೆ ಮತ್ತು ಹಾಲು ಉತ್ಪಾದನೆ ಈ ದೇಶದಲ್ಲಿ ವಿವಿಧ ತಿನಿಸುಗಳ ಮುಖಾಂತರ ದೇಶಕ್ಕೆ ಆದಾಯ ತಂದು ಕೊಡುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದು. ಹಾಲು ಉತ್ಪಾದಕರು ಗುಣಮಟ್ಟದ ಹಾಲು ನೀಡುವ ಮೂಲಕ ನಮ್ಮ ಹೆಮ್ಮೆಯ ಕೆಎಂಎಫ್ ನ್ನು ಬಲಿಷ್ಠ ಗೊಳಿಸಬೇಕೆಂದು ತಿಳಿಸಿದರು. ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಎಂ.ನರೇಂದ್ರ ಮಾತನಾಡಿ. ಕಾರ್ಯದರ್ಶಿಗಳು ಹಾಲು ಉತ್ಪಾದಕರ ಸಹಕಾರ ಸಂಘದ ವ್ಯವಹಾರದ ಜೊತೆಯಲ್ಲಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಗುಣಮಟ್ಟದ ಆಹಾರ ಪದ್ಧತಿ ಬಯಸುವ ಜನತೆಗೆ. ಉತ್ಕೃಷ್ಟ ಉತ್ಪಾದನೆ ನೀಡಬೇಕಾಗಿದ್ದು ನಮ್ಮ ಕರ್ತವ್ಯ. ಸರ್ಕಾರ ಹಾಗೂ ಫೆಡರೇಶನ್ ನಲ್ಲಿ ಸವಲತ್ತು ಪಡೆದು. ರಾಸುಗಳ ಆರೋಗ್ಯ , ಸದಸ್ಯರಿಗೆ ಲಾಭದಾಯಕವಾದ ಹಾಲು ಉತ್ಪಾದನೆ ಹೆಚ್ಚಿಸುವ ಮಾರ್ಗದರ್ಶನ ನೀಡುವುದು ಕಾರ್ಯದರ್ಶಿಗಳ ಕರ್ತವ್ಯ ಎಂದು ಹೇಳಿದರು.ಕೆಎಂಎಫ್ ವೈದ್ಯಾಧಿಕಾರಿ ಡಾ. ಪ್ರಸನ್ನ , ಸಹಾಯಕ ವ್ಯವಸ್ಥಾಪಕ ರನ್ನಕುಮಾರ್, ವಿಶೇಷ ತರಬೇತಿ ನೀಡಿದರು. ಸಹಕಾರ ಯೂನಿಯನ್ ನಿರ್ದೇಶಕ ಶಶಿಕುಮಾರ್, ಹಾಸನ ಹಾಲು ಒಕ್ಕೂಟದ ನಿರ್ದೇಶಕರಾದ ಟಿ. ಕೆ.ಜಗದೀಶ್, ಚೈತ್ರ, ಆಶಾ, ಕೆಎಂಎಫ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಶಸ್. ಎಚ್. ಕೆ, ವಿಸ್ತರಣಾಧಿಕಾರಿ ಯದುರಾಜ್, ಭರತ್, ಅಕ್ಕನಾಗಮ್ಮ, ಇಂದ್ರೇಶ್ ಭಾಗವಹಿಸಿದ್ದರು.

11ಕೆಟಿಆರ್.ಕೆ.10ಃ

ತರೀಕೆರೆಯಲ್ಲಿ ನಡೆದ ಒಂದು ದಿನದ ವಿಶೇಷ ಸಹಕಾರಿ ತರಬೇತಿ ಕಾರ್ಯಾಗಾರವನ್ನು ಹಾಸನ ಹಾಲು ಒಕ್ಕೂಟದ ನಿರ್ದೇಶಕ ಎಸ್. ಡಿ. ಸೋನಾಲ್ ಗೌಡ ಉದ್ಘಾಟಿಸಿದರು. ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಎಂ.ನರೇಂದ್ರ ಮತ್ತಿತರರು ಇದ್ದರು.