ಸಾರಾಂಶ
ಕುರುಗೋಡು: ಗ್ರಾಮಗಳ ಅಭಿವೃದ್ಧಿಯಲ್ಲಿ ರಾಜಕೀಯ ಬೆರೆಸದೇ ಸಮಾನ ಮನಸ್ಕರು ಸೇರಿ ಯೋಜನೆಗಳನ್ನು ರೂಪಿಸಿ ಅವುಗಳ ಅನುಷ್ಠಾನಕ್ಕೆ ಶ್ರಮಿಸಬೇಕು ಎಂದು ಚಲನಚಿತ್ರ ನಿರ್ದೇಶಕ ನಾಗರಿಹಳ್ಳಿ ಚಂದ್ರಶೇಖರ್ ಚಲಹೆ ನೀಡಿದರು.ಸಮೀಪದ ಸಾದಾಪುರ ಗ್ರಾಮದಲ್ಲಿ ಸಿರಿಗೇರಿ ಅನ್ನಪೂರ್ಣ ಕ್ರಿಯೇಷನ್ಸ್ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸಾಹಿತ್ಯ ಮತ್ತು ಸಿನೆಮಾ ಮಾಧ್ಯಮಗಳ ಸಂಬಂಧ ಒಂದು ಅವಲೋಕನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
೧೯೭೦ರಲ್ಲಿ ನಾನು ಜನಿಸಿದ ನಾಗತಿಹಳ್ಳಿಯಲ್ಲಿ ಬೀದಿದೀಪಗಳು ಇರಲಿಲ್ಲ. ಗ್ರಾಮದಲ್ಲಿ ಯುವಕರ ತಂಡ ಕಟ್ಟಿಕೊಂಡು ಮನೆಮನೆಗಳಲ್ಲಿ ತೆಂಗಿನಕಾಯಿ ಸಂಗ್ರಹಿಸಿ ಮಾರಾಟ ಮಾಡಿದ ಹಣದಲ್ಲಿ ಬೀದಿ ದೀಪ ಹಾಕಿಸಿದ ತೃಪ್ತಿ ನನಗಿದೆ ಎಂದು ಹಳೆಯ ನೆನಪನ್ನು ಮೆಲುಕು ಹಾಕಿದರು. ಗ್ರಾಮಗಳ ಅಭಿವೃದ್ಧಿಯಲ್ಲಿ ರಾಜಕೀಯ ಪಕ್ಷ, ಜಾತಿ, ಮತ, ಪಂಥ ಭೇದ ಬೆರತರೆ ಅಭಿವೃದ್ಧಿ ಅಸಾಧ್ಯ ಎಂದು ಎಚ್ಚರಿಸಿದರು.ಮಹಿಳೆಯರನ್ನೂ ಅಭಿವೃದ್ಧಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಮರೆಯಬಾರದು ಎಂದ ಅವರು, ಮಹಿಳೆಯರಲ್ಲಿ ಕುಟುಂಬದ ಜವಾಬ್ದಾರಿಯ ಜತೆಗೆ ಗ್ರಾಮದ ಅಭಿವೃದ್ಧಿಪರ ಚಿಂತನೆಗಳು ಇರುತ್ತವೆ ಎಂದರು.
ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಪಕ್ಷ ನಂತರ ಅವರನ್ನು ನಂಬದಿರಿ. ಅವರು ಸಂಘಟನೆಗಳಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಸಿ ಒಡೆದು ಹಾಳುವ ನೀತಿ ಅನುಸರಿಸುತ್ತಾರೆ. ಅದಕ್ಕೆ ಅವಕಾಶ ಕೊಡದೇ ಜನರಲ್ಲಿ ಗ್ರಾಮದ ಅಭಿವೃದ್ಧಿ ಮಂತ್ರ ಮಾತ್ರ ಜಪಿಸಬೇಕು ಎಂದು ಸಲಹೆ ನೀಡಿದರು.ನಿಜವಾದ ಕನ್ನಡ ಸೊಗಡು ಗ್ರಾಮೀಣ ಪ್ರದೇಶದಲ್ಲಿ ಜೀವಂತವಾಗಿದೆ. ಅಲ್ಲಿ ಹೆಚ್ಚು ಹೆಚ್ಚು ಚಟುವಟಿಕೆಗಳನ್ನು ಆಯೋಜಿಸಬೇಕು. ಮೌನವಾಗಿರುವ ಜನರನ್ನು ಎಚ್ಚರಿಸಬೇಕು ಎಂದರು.
ಸಾಹಿತ್ಯ ಮಾರಾಟದ ವಸ್ತುವಾಗಿ ಬದಲಾಗುತ್ತಿದೆ. ಅದರಲ್ಲಿ ಮೌಲ್ಯಗಳು ಕಣ್ಮರೆಯಾಗಿ ಯುವಶಕ್ತಿ ದಾರಿ ತಪ್ಪಿಸುವ ವಿಷಯಗಳು ಅಡಕವಾಗಿರುವುದು ಉತ್ತಮ ಬೆಳವಣಿಗೆಯಲ್ಲ ಎಂದರು.ಜನರ ಜೀವನಕ್ಕೆ ಅತ್ತುರವಾದ ಸಾಹಿತ್ಯ ರಚಿಸವ ಅಗತ್ಯವಿದೆ. ಬದಲಾದ ಪರಿಸ್ಥಿತಿಯಲ್ಲಿ ಸಾಹಿತ್ಯ ಗಿರಾಕಿಗಳಿಗಾಗಿ ಬರೆಯುವ ವಸ್ತುವಾಗಿರುವುದು ಹಾಸ್ಯಾಸ್ಪದವಾಗಿದೆ ಎಂದು ಕೇದ ವ್ಯಕ್ತಪಡಿಸಿದರು.
ವಚನ ಸಾಹಿತ್ಯಕ್ಕಿಂತ ಮತ್ತೊಂದು ಪರಿಣಾಮಕಾರಿ ಸಾಹಿತ್ಯವಿಲ್ಲ. ೧೨ನೇ ಶತಮಾನದಲ್ಲಿ ಬಸವಾದಿ ಶರಣರು ಜನರನ್ನು ಸನ್ಮಾರ್ಗದಲ್ಲಿ ನಡೆಸಲು ಅರ್ಥಪೂರ್ಣ ವಚನಗಳನ್ನು ರಚಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅವುಗಳನ್ನು ಆವಲೋಕಿಸಿ ಜೀವನದಲ್ಲಿ ಅಳವಡಿಸಿಕೊಂಡರೆ ಸಾಕು ಜೀವನ ಸಾರ್ಥಕವಾಗುತ್ತದೆ ಎಂದರು.ಅನ್ನಪೂರ್ಣ ಕ್ರಿಯೆಷನ್ಸ್ ಅಧ್ಯಕ್ಷ ಸಿರಿಗೇರಿ ರ್ರಿಸ್ವಾಮಿ ಕಾರ್ಯಕ್ರಮ ಕುರಿತು ಪ್ತಾಸ್ತಾವಿಕವಾಗಿ ಮಾತನಾಡಿ, ಸಿನೆಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅಗಾದ ಹೆಸರು ಮಾಡಿದ ನಾಗತಿಹಳ್ಳಿ ಚಂದ್ರಶೇಖರ್ ಅವರು ಒಂದು ಪುಟ್ಟ ಗ್ರಾಮದಲ್ಲಿ ಜನಿನಿಸಿ ನಾಡಿನಲ್ಲಿ ಹೆಸರು ಮಾಡಿದವರು. ಅವರು ಹುಟ್ಟಿದ ಗ್ರಾಮದಲ್ಲಿ ಪ್ರತಿ ವರ್ಷ ಯುಗಾದಿಯಲ್ಲಿ ಐದು ದಿನಗಳ ಕಾರ್ಯಕ್ರಮ ಆಯೋಜಿಸಿ ಗ್ರಾಮದ ಜನರಿಗೆ ಬೇಕಾಗುವ ಆರೋಗ್ಯ, ಕೃಷಿ, ಸಾಹಿತ್ಯ ಶಿಬಿರಗಳನ್ನು ಆಯೋಜಿಸುತ್ತಾರೆ. ನಾಡಿನಲ್ಲಿ ಹೆಸರು ಮಾಡಿದ ಎಂದರು.
ಮುದುಕನ ಗೌಡ.ಪ್ರಭುಸ್ವಾಮಿಗಳು ಸಿದ್ದನಗೌಡ, ಹಳ್ಳಿಬಸವರಾಜ, ಬಿ.ಶಿವಮ್ಮ ರುದ್ರಪ್ಪ, ಹನುಮಂತಪ್ಪ, ಚಂದ್ರಪ್ಪ, ವಿರೂಪಾಕ್ಷಪ್ಪ, ಮಾಯಪ್ಪ, ಲಿಂಗಪ್ಪ, ರಾಜಕುಮಾರ, ಗಂಟೆ ನಾಗರಾಜ, ಮುದ್ದುವೀರಮ್ಮ ಇದ್ದರು.ಕುರುಗೋಡು೩ ಸಮೀಪದ ದಾಸಾಪುರ ಗ್ರಾಮದಲ್ಲಿ ಅನ್ನಪೂರ್ಣ ಕ್ರಿಯೇಷನ್ಸ್ ಆಯೋಜಿಸಿದ್ದ ಸಾಹಿತ್ಯ ಮತ್ತು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿದರು.