ರಾಜ್ಯದಲ್ಲಿ ಆರಂಭವಾದ ಸಹಕಾರ ಚಳವಳಿ ದೇಶಾದ್ಯಂತ ಬಹಳ ವಿಸ್ತಾರವಾಗಿ ಬೆಳೆದಿದೆ. ಎಲ್ಲಾ ರಂಗದಲ್ಲಿಯೂ ಸಹ ಸಹಕಾರ ಕ್ಷೇತ್ರದ ಪ್ರಬಲವಾಗುತ್ತಿದೆ. ರೈತರು, ಮಧ್ಯಮ ವರ್ಗದವರು, ಕೂಲಿಕಾರ್ಮಿಕರು ಸೇರಿ ಎಲ್ಲಾ ಸ್ತರದ ಜನರು ಸಹಕಾರ ಕ್ಷೇತ್ರದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಜೊತೆಗೂಡುತ್ತಿದ್ದಾರೆ. ಹೀಗಾಗಿ ಸಹಕಾರ ಕ್ಷೇತ್ರವನ್ನು ಇನ್ನು ಪರಿಣಾಮಕಾರಿಯಾಗಿ ಬೆಳೆಸುವ ಮೂಲಕ ಜಿಲ್ಲೆಯನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯಲು ಎಲ್ಲರೂ ಶ್ರಮಿಸೋಣ ಎಂದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸಹಕಾರ ತತ್ವ ಹಾಗೂ ಪರಸ್ಪರ ಸಹಕಾರದಿಂದ ದೇಶದ ಎಲ್ಲಾ ವಲಯಗಳಲ್ಲಿಯೂ ಅಭಿವೃದ್ಧಿ ಸಾಧಿಸಲು ಹೆಚ್ಚಿನ ಅವಕಾಶಗಳು ಇವೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರು ಆದ ಚಾಮುಲ್ ನಿರ್ದೇಶಕ ಎಚ್.ಎಸ್. ನಂಜುಂಡಪ್ರಸಾದ್ ತಿಳಿಸಿದರು.

ನಗರದ ಬಸವ ಮನೆ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಹಾಮಂಡಲ ನಿ. ಬೆಂಗಳೂರು, ಜಿಲ್ಲಾ ಸಹಕಾರ ಯೂನಿಯನ್ , ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘ ಹಾಗೂ ಸಹಕಾರ ಇಲಾಖೆಯ ಸಹಯೋಗದಲ್ಲಿ ೭೩ ನೇ ಸಹಕಾರ ಸಪ್ತಾಹ- ೨೦೨೬ ಸಹಕಾರ ಸಂಸ್ಥೆಗಳ ಬೆಳವಣಿಗೆಯಲ್ಲಿ ಉತ್ತಮ ಪರಿಸರ, ತಂತ್ರಜ್ಞಾನ, ಕೌಶಲ್ಯಾಧಾರಿತ , ವೃತ್ತಿಪರ ಸೇವೆ ಕುರಿತು ಎರಡನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಆರಂಭವಾದ ಸಹಕಾರ ಚಳವಳಿ ದೇಶಾದ್ಯಂತ ಬಹಳ ವಿಸ್ತಾರವಾಗಿ ಬೆಳೆದಿದೆ. ಎಲ್ಲಾ ರಂಗದಲ್ಲಿಯೂ ಸಹ ಸಹಕಾರ ಕ್ಷೇತ್ರದ ಪ್ರಬಲವಾಗುತ್ತಿದೆ. ರೈತರು, ಮಧ್ಯಮ ವರ್ಗದವರು, ಕೂಲಿಕಾರ್ಮಿಕರು ಸೇರಿ ಎಲ್ಲಾ ಸ್ತರದ ಜನರು ಸಹಕಾರ ಕ್ಷೇತ್ರದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಜೊತೆಗೂಡುತ್ತಿದ್ದಾರೆ. ಹೀಗಾಗಿ ಸಹಕಾರ ಕ್ಷೇತ್ರವನ್ನು ಇನ್ನು ಪರಿಣಾಮಕಾರಿಯಾಗಿ ಬೆಳೆಸುವ ಮೂಲಕ ಜಿಲ್ಲೆಯನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯಲು ಎಲ್ಲರೂ ಶ್ರಮಿಸೋಣ ಎಂದರು.

ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘ ಬಹಳ ಕಡಿಮೆ ಅವಧಿಯಲ್ಲಿ ಹೆಚ್ಚು ಸಾಧನೆಯನ್ನು ಮಾಡಿದೆ. ಸ್ವಂತ ಕಟ್ಟಡ, ಸುಸಜ್ಜಿತ ಸಭಾಂಗಣ ಸೇರಿ ಸಂಘದ ಸದಸ್ಯರ ಅವಶ್ಯಕತೆ ಅನುಗುಣವಾಗಿ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ಕೋಟ್ಯಾಂತರ ರುಪಾಯಿ ವಹಿವಾಟು ಮಾಡಿರುವುದು ಸಂತಸ ಉಂಟು ಮಾಡಿದೆ. ಇನ್ನು ಸಾಮಾಜಿಕ ಸೇವಾ ಕಾರ್ಯದಲ್ಲಿ ಸಹ ತೊಡಗಿಸಿಕೊಂಡಿರುವುದು ಹೆಮ್ಮೆ. ಸಂಘದ ೨೫ನೇ ವರ್ಷದ ರಜತ ಮಹೋತ್ಸವ ಆಚರಣೆ ಮಾಡುತ್ತಿರುವ ಸಂಘಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ನಂಜುಂಡಪ್ರಸಾದ್ ತಿಳಿಸಿದರು.

ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಎಚ್.ಎಂ. ಬಸವಣ್ಣ ಸನ್ಮಾನ ಸ್ವೀಕರಿಸಿ ಮಾತನಾಡಿ, ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರವು ಬಹಳ ವಿಸ್ತಾರವಾಗಿ ಬೆಳೆಯುತ್ತಿದೆ. ಬಸವೇಶ್ವರ ಪತ್ತಿನ ಸಹಕಾರ ಸಂಘವು ಈ ಹಾದಿಯಲ್ಲಿ ಸಾಗುತ್ತದೆ. ಕೇವಲ ₹೫ ನಲ್ಲಿ ೨೦ ಲೀಟರ್ ಶುದ್ಧ ಕುಡಿಯುವ ನೀರು ಕಲ್ಪಿಸುವುದು, ಮಹಾಪುರುಷರ ಜಯಂತಿಯಂದು ಉಚಿತವಾಗಿ ನೀರು ನೀಡುವ ಅವರ ಸೇವಾ ಕಾರ್ಯಗಳು ಇನ್ನು ಹೆಚ್ಚು ನಡೆಯಲಿವೆ ಎಂದು ಶುಭ ಕೋರಿದರು.

ಸಾಧನ ಸಂಸ್ಥೆಯ ನಿರ್ದೇಶಕ ಜೆ.ಡಿ. ಸುರೇಶ್ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಮಾಹಿತಿ ತಂತ್ರಜ್ಞಾನ , ಡಿಜಿಟಲೈಜೇಷನ್ ಮಾಡಿಕೊಂಡರೆ ಹೆಚ್ಚಿನ ಅನುಕೂಲ. ಮಾಹಿತಿ ತಂತ್ರಜ್ಞಾನ ಬಹಳ ವೇಗವಾಗಿ ಸಾಗುತ್ತದೆ. ಬೆರಳ ತುದಿಯಲ್ಲಿಯೇ ಎಲ್ಲವನ್ನು ಕಲ್ಪಿಸಿಕೊಳ್ಳುವ ಸಾಧನಗಳು ಈಗ ನಮ್ಮ ಮುಂದೆ ಇವೆ. ಸಹಕಾರ ಕ್ಷೇತ್ರದ ಬೆಳವಣಿಗೆಯಲ್ಲಿ ಮಾಹಿತಿ ತಂತ್ರಜ್ಞಾನ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ. ಗೌರಿಶಂಕರ್ ಅಧ್ಯಕ್ಷತೆ ವಹಿಸಿದ್ದರು. ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಎಚ್. ಎಂ. ಬಸವಣ್ಣ, ಜಿಲ್ಲಾ ಸಹಕಾರ ಯುನಿಯನ್ ನಿರ್ದೇಶಕರಾದ ಮಲೆಯೂರು ನಾಗರಾಜು, ಅಮಚವಾಡಿ ನಾಗಸುಂದರ, ದಾಕ್ಷಾಯಿಣಿ, ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ, ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘ ಉಪಾಧ್ಯಕ್ಷ ಕುಮಾರಸ್ವಾಮಿ, ಸಂಗಮ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಮುದ್ದಬಸವಣ್ಣ, ನಿರ್ದೇಶಕರಾದ ನಾಗೇಂದ್ರ, ರಾಜಶೇಖರ್, ದೊರೆಸ್ವಾಮಿ, ನಾಗರಾಜಪ್ಪ, ನಾಗಮಣಿ, ಯುನಿಯನ್ ಸಿಇಓ ಮನುಜ, ಮ್ಯಾನೇಜರ್ ಮಲ್ಲಿಕಾರ್ಜುನ್, ಸಂಘದ ಸಿಇಓ ನಂಜುಂಡಸ್ವಾಮಿ, ಆಕಾಶ್, ಹಿರಿಯ ಸಹಕಾರಿಗಳಾದ ಡಿ.ಎನ್. ಮಹದೇವಪ್ಪ, ಸುಂದ್ರಪ್ಪ, ನಾಗರಾಜು, ಅರ್ಕಪ್ಪ, ಹೊನ್ನಪ್ಪ, ನಾಗರಾಜು, ಲಿಂಗರಾಜಮೂರ್ತಿ, ಬಸವರಾಜಪ್ಪ, ನಿರ್ಮಲಾ, ಕಾಂತರಾಜು, ಶಾಂತಪ್ಪ, ಮೊದಲಾದವರು ಇದ್ದರು.