ಸಾರಾಂಶ
ಕನ್ನಡಪ್ರಭ ವಾರ್ತೆ ಚಡಚಣ ಸಾಲ ಸೌಲಭ್ಯ ಪಡೆದು ಆರ್ಥಿಕವಾಗಿ ಪ್ರಗತಿ ಹೊಂದಿ, ಬ್ಯಾಂಕ್‌ಗಳ ಅಭಿವೃದ್ಧಿಗೆ ದಾರಿಯಾಗಬೇಕು ಎಂದು ಕಾತ್ರಾಳ-ಬಾಲಗಾಂವ ಗುರುದೇವ ಆಶ್ರಮದ ಅಮೃತಾನಂದ ಸ್ವಾಮೀಜಿ ಹೇಳಿದರು. ಜಿಗಜೀವಣಗಿಯ ಗ್ರಾಮದ ಪಿಕೆಪಿಎಸ್ ಆವರಣದಲ್ಲಿ ವಿಡಿಸಿಸಿ ಬ್ಯಾಂಕ್‌ನ 51ನೇ ಶಾಖೆ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಸಹಕಾರ ಸಂಘಗಳು ಬೆಳವಣಿಗೆ ಹೊಂದಲು ಪರಸ್ಪರ ಸಹಕಾರ ಮುಖ್ಯ.
ಕನ್ನಡಪ್ರಭ ವಾರ್ತೆ ಚಡಚಣ
ಸಾಲ ಸೌಲಭ್ಯ ಪಡೆದು ಆರ್ಥಿಕವಾಗಿ ಪ್ರಗತಿ ಹೊಂದಿ, ಬ್ಯಾಂಕ್‌ಗಳ ಅಭಿವೃದ್ಧಿಗೆ ದಾರಿಯಾಗಬೇಕು ಎಂದು ಕಾತ್ರಾಳ-ಬಾಲಗಾಂವ ಗುರುದೇವ ಆಶ್ರಮದ ಅಮೃತಾನಂದ ಸ್ವಾಮೀಜಿ ಹೇಳಿದರು. ಜಿಗಜೀವಣಗಿಯ ಗ್ರಾಮದ ಪಿಕೆಪಿಎಸ್ ಆವರಣದಲ್ಲಿ ವಿಡಿಸಿಸಿ ಬ್ಯಾಂಕ್‌ನ 51ನೇ ಶಾಖೆ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಸಹಕಾರ ಸಂಘಗಳು ಬೆಳವಣಿಗೆ ಹೊಂದಲು ಪರಸ್ಪರ ಸಹಕಾರ ಮುಖ್ಯ. ಸಹಕಾರ ಬ್ಯಾಂಕ್‌ನಿಂದ ರೈತರು ಮತ್ತು ಗ್ರಾಹಕರು ಪಡೆದ ಸಾಲವನ್ನು ಸದ್ಬಳಕೆ ಮಾಡಿಕೊಂಡು ಸಾಲ ಮರುಪಾವತಿಸಿದಾಗ ಸಂಘಗಳು ಏಳ್ಗೆ ಹೊಂದಲು ಸಾಧ್ಯ. ಆದ್ದರಿಂದ, ಸಹಕಾರಿ ಬ್ಯಾಂಕ್ ಪರಸ್ಪರ ಸಹಕಾರ ಮನೋಭಾವದಿಂದ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.ವಿಜಯಪೂರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್ ಡಿ.ಬಿರಾದಾರ ಪ್ರಸ್ತಾವಿಕವಾಗಿ ಮಾತನಾಡಿ, ಬ್ಯಾಂಕ್ ಕೃಷಿಗೆ ಆದ್ಯತೆ ನೀಡಿ, ವಿವಿಧ ಉದ್ದೇಶಗಳಿಗಾಗಿ ಸಾಲ ನೀಡುತ್ತಿದೆ. ಒಟ್ಟು ಠೇವಣಿ ₹ 3496 ಕೋಟಿಗಳಷ್ಟಿದ್ದರೇ, ₹ 3111ಕೋಟಿ ಸಾಲ ನೀಡಿದೆ. ಇದರಲ್ಲಿ ರೈತರಿಗೆ ₹ 1333 ಕೋಟಿ ಕೃಷಿ ಸಾಲ ನೀಡಿದ್ದು, ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಅಳವಡಿಸಲಾಗಿದೆ. ವಾಣಿಜ್ಯ ಬ್ಯಾಂಕ್‌ಗಳಂತೆ ಗ್ರಾಹಕರಿಗೆ ತ್ವರಿತ ಸೇವೆ ನೀಡುತ್ತಿದೆ ಎಂದು ಹೇಳಿದರು.ವಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ ಮಾತನಾಡಿ, ಈ ಬ್ಯಾಂಕ್ ಕಳೆದ 105 ವರ್ಷಗಳಿಂದ ರೈತಸ್ನೇಹಿಯಾಗಿ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ. ಪ್ರತಿವರ್ಷ ಲಾಭದಲ್ಲಿದೆ. 2023-24ನೇ ಸಾಲಿನಲ್ಲಿ ₹ 20.23 ಕೋಟಿ ಲಾಭಗಳಿಸಿದ್ದು, ಇದು ಇತಿಹಾಸದಲ್ಲಿಯೇ ಗರಿಷ್ಠ ಲಾಭವಾಗಿದೆ ಎಂಬ ಮಾಹಿತಿ ನೀಡಿದರು.ಬ್ಯಾಂಕ್ ನಿರ್ದೇಶಕರಾದ ಸುರೇಶ ಬಿರಾದಾರ, ಕಲ್ಲನಗೌಡ ಪಾಟೀಲ, ಅರವಿಂದ ಪೂಜಾರಿ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕರು ಹಾಗೂ ಇಂಡಿ ಟಿಎಪಿಸಿಎಂಎಸ್ ಅಧ್ಯಕ್ಷ ಭೀಮರಾಯ ಗುಡ್ಡದ, ಜಿಗಜೀವಣಗಿ ಗ್ರಾಪಂ ಅಧ್ಯಕ್ಷ ವಿಠಲ ಬಿರಾದಾರ, ಆರ್.ಎಂ.ಬಣಗಾರ, ಭೀಮರಾಯ ಮಾವಿನಮರ, ಉಪಾಧ್ಯಕ್ಷ ಶ್ರಿಶೈಲ ಬಿರಾದಾರ, ದೇವರ ನಿಂಬರಗಿ, ಪಿಕೆಪಿಎಸ್ ಅಧ್ಯಕ್ಷ ನಬಿಸಾಬ ಬಂಡರಕವಟೆ, ಇಂಚಗೇರಿ ಪಿಕೆಪಿಎಸ್ ಅಧ್ಯಕ್ಷ ಮಲ್ಲಣ್ಣ ಸಾಲಿ, ಅಮಸಿದ್ಧ ಬಳಗಾನೂರ, ಬಾಬು ಚವ್ಹಾಣ, ಹಣಮಂತ ಬಳಗಾನೂರ, ಮಹಾದೇವ ಬಿರಾದಾರ, ಗಂಗಪ್ಪ ನಿಂಗೊಂಡ, ಗಂಗಪ್ಪ ವಾಲಿಕಾರ, ದತ್ತು ಕುಲಕರ್ಣಿ, ಸುಭಾಷ ಮೋರೆ, ನಾನಾಸಾಬ ಸುರ್ವೆ, ಬಂದು ಹೆಗಡೆ, ಅಶೋಕ ಕರ್ಲಮಳ, ಪಿಕೆಪಿಎಸ್ ಸಿಇಒ ಶ್ರಿಶೈಲ ಝಳಕಿ ಸೇರಿದಂತೆ ಹಲವರು ಹಾಜರಿದ್ದರು.