ಚಿಕ್ಕಕೋಲಿಗ-ದೊಡ್ಡಕೋಲಿಗ ರಸ್ತೆ ಅಭಿವೃದ್ಧಿ ರೈತರಿಗೆ ಅನುಕೂಲ

| Published : Jan 19 2025, 02:19 AM IST

ಚಿಕ್ಕಕೋಲಿಗ-ದೊಡ್ಡಕೋಲಿಗ ರಸ್ತೆ ಅಭಿವೃದ್ಧಿ ರೈತರಿಗೆ ಅನುಕೂಲ
Share this Article
  • FB
  • TW
  • Linkdin
  • Email

ಸಾರಾಂಶ

ಸೂಲಿಬೆಲೆ: ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಯಿಂದ ರೈತಾಪಿ ವರ್ಗದ ಜನತೆಗೆ ಸಹಕಾರಿಯಾಗಲಿದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಸೂಲಿಬೆಲೆ

ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಯಿಂದ ರೈತಾಪಿ ವರ್ಗದ ಜನತೆಗೆ ಸಹಕಾರಿಯಾಗಲಿದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ ಹೇಳಿದರು.

ಸೂಲಿಬೆಲೆ ಹೋಬಳಿ ಕಂಬಳೀಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ಚಿಕ್ಕಕೋಲಿಗ-ದೊಡ್ಡಕೋಲಿಗ ಸಂಪರ್ಕ ರಸ್ತೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

15 ವರ್ಷಗಳಿಂದ ರಸ್ತೆ ನಿರ್ಮಾಣ ಮಾಡಲು ಸಾಧ್ಯವಾಗದೆ ನೆನಗುಂದಿಗೆಗೆ ಬಿದಿದ್ದ ಸಮಸ್ಯೆಯನ್ನು ಗ್ರಾಮಸ್ಥರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಂಡಿದ್ದು, ಕಚ್ಚಾಪಕ್ಕಾ ರಸ್ತೆ ನಿರ್ಮಾಣವನ್ನು ಮೊದಲು ಹಂತದಲ್ಲಿ ನೆರವೇರಿಸಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ಶಾಸಕರ ಅನುದಾನದಲ್ಲಿ ಡಾಂಬರೀಕರಣ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎಂದರು.

ಗ್ರಾಮಪಂಚಾಯಿತಿ ವತಿಯಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಅನುದಾನದಲ್ಲಿ ರೈತಾಪಿ ವರ್ಗದ ಅನುಕೂಲವನ್ನು ದೃಷ್ಟಿಯಲ್ಲಿಟ್ಟುಕೊಂಡು ಕಚ್ಚಾಪಕ್ಕಾ ರಸ್ತೆ ನಿರ್ಮಾಣ ಮಾಡಿಕೊಂಡು ಸ್ಥಳೀಯ ಶಾಸಕರಾದ ಶರತ್‌ ಬಚ್ಚೇಗೌಡರ ಅನುದಾನದಲ್ಲಿ ಡಾಂಬರ್ ರಸ್ತೆ ನಿರ್ಮಾಣ ಮಾಡಲಾಗುವುದು. ಇದರಿಂದ ಚಿಕ್ಕಕೋಲಿಗ ಮತ್ತು ದೊಡ್ಡಕೋಲಿಗ ಗ್ರಾಮದ ರೈತರಿಗೆ ಅನುಕೂಲವಾಗಲಿದೆ ಎಂದರು.

ಗ್ರಾ.ಪಂ. ಸದಸ್ಯರಾದ ಶಿವಕುಮಾರ್, ಡೇರಿ ಅಧ್ಯಕ್ಷ ರಾಜಣ್ಣ, ಕೃಷ್ಣಪ್ಪ, ರಾಜಗೋಪಾಲ್, ಚಿಕ್ಕಕೋಲಿಗದ ಶ್ರೀನಿವಾಸ್, ರಮೇಶ್, ಅಶ್ವತ್‌ನಾರಾಯಣ್, ಕೆಂಪೇಗೌಡ, ಜಯರಾಮ್, ಕಂಬಳೀಪುರ ಗ್ರಾ.ಪಂ. ಮಾಜಿ ಅಧ್ಯಕ್ಷ ಮುತ್ಸಂದ್ರ ಆನಂದಪ್ಪ, ಹಸಿಗಾಳ ಜಗದೀಶ್, ಚಿಕ್ಕಹರಳಗೆರೆ ಜಗದೀಶ್, ಮಾರುತಿ, ಮಹೇಶ್ ಇತರರು ಇದ್ದರು.

ಚಿತ್ರ; ೧೮ ಸೂಲಿಬೆಲೆ ೪ ಜೆಪಿಜೆ ನಲ್ಲಿದೆ