ಸಾರಾಂಶ
ಪುನರ್ ನಿರ್ಮಿತ ಇತಿಹಾಸ ಪ್ರಸಿದ್ಧ ಶ್ರೀಮಹಾಲಕ್ಷ್ಮಿ,ಶ್ರೀ ಜನಾರ್ಧನ ಸ್ವಾಮಿ ದೇವಾಲಯ ಪ್ರವೇಶೋತ್ಸವ
ಕನ್ನಡಪ್ರಭ ವಾರ್ತೆ, ಕಡೂರುತಾಲೂಕಿನ ಐತಿಹಾಸಿಕ ಕೆರೆಸಂತೆಯ ಸುತ್ತಲಿನ ಪ್ರದೇಶಗಳನ್ನು ಪ್ರವಾಸಿ ತಾಣವಾಗಿ ಮಾಡಲು ಮುಂದಾಗುತ್ತೇನೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು. ತಾಲೂಕಿನ ಕೆರೆಸಂತೆ ಪುನರ್ ನಿರ್ಮಿತ ಇತಿಹಾಸ ಪ್ರಸಿದ್ಧವಾದ ಶ್ರೀಮಹಾಲಕ್ಷ್ಮಿ,ಶ್ರೀ ಜನಾರ್ಧನ ಸ್ವಾಮಿ ದೇವಾಲಯಗಳ ಪ್ರವೇಶೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಲೂಕಿನ ಕೆರೆಸಂತೆ ಗ್ರಾಮದ ಪ್ರಾಚೀನ ದೇವಾಲಯಗಳನ್ನು ರಾಜ್ಯ ಪುರಾತತ್ವ ಇಲಾಖೆ ನವೀಕರಿಸಿದೆ. ಈ ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ತಾವು 2 ಕೋಟಿ ರು. ಗೂ ಹೆಚ್ಚು ಅನುದಾನ ನೀಡುವ ಮೂಲಕ ಪುರಾತನ ಕಲ್ಯಾಣಿಗಳು ಸುಸಜ್ಜಿತ ರಸ್ತೆ ನಿರ್ಮಾಣ, ಕೊಳವೆಬಾವಿ ಜೊತೆ ಅನೇಕ ವರ್ಷಗಳಿಂದ ದೇವಾಲಯಗಳ ಸುತ್ತ ಇರುವ ಜಾಲಿ ಗಿಡ ಗಂಟೆಗಳನ್ನು ತೆಗೆದು ಸ್ವಚ್ಛ ಮಾಡಿಸಿ, ಇಲ್ಲಿನ ಎರಡು ಕಲ್ಯಾಣಿ ಗಳನ್ನು ಪುನರುತ್ಥಾನಗೊಳಿಸುವ ಕಾರ್ಯ ಮಾಡಿರುವುದು ತಮಗೆ ತೃಪ್ತಿ ತಂದಿದೆ ಎಂದರು.
ಕರಿಬಡ್ಡೆ ಶ್ರೀನಿವಾಸ್ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ತಮಗೂ ಕೂಡ ಶ್ರೀ ಮಹಾಲಕ್ಷ್ಮಿ ಅಮ್ಮನವರು ಮನೆ ದೇವರಾಗಿದ್ದು, ಐತಿಹಾಸಿಕ ಪ್ರದೇಶವಾದ ಇಲ್ಲಿ ತಾಲೂಕಿನ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ ಮಾಡುವ ಚಿಂತನೆ ಇದೆ ಎಂದರು. ಪಂಚ ಗ್ಯಾರಂಟಿಗಳ ಅನುಷ್ಠಾನ ಸಮಿತಿ ರಾಜ್ಯ ಅಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, ಈ ಐತಿಹಾಸಿಕ ಕೆರೆಸಂತೆ ಅಭಿವೃದ್ಧಿಗೆ ಶಾಸಕ ಕೆ.ಎಸ್ ಆನಂದ್ ಮತ್ತು ಕರಿಬಡ್ಡೆ ಶ್ರೀನಿವಾಸ್ ಶ್ರಮಿಸುತ್ತಿರುವುದು ಶ್ಲಾಘನೀಯ ನಾನು ಕೂಡ ನನ್ನ ಇತಿಮಿತಿಯಲ್ಲಿ ದೇವಾಲಯದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು. ದೇವಸ್ಥಾನ ಸಮಿತಿ ಅಧ್ಯಕ್ಷ ಕರಿಬಡ್ಡೆ ಶ್ರೀನಿವಾಸ್, ಗೋವಿಂದರಾಜು,ಪುರಸಭೆ ಸದಸ್ಯ ತೋಟದಮನೆ ಮೋಹನ್, ಕೆರೆಸಂತೆ ಸೋಮಶೇಖರ್,ಹೇಮರಾಜು, ಟೊಮೇಟೋ ಗೌಡ, ರವಿನಾಯ್ಕ, ದೇವಾಲಯ ಸಮಿತಿ ನಿರ್ದೇಶಕ ಎಸ್.ಕೆ. ಮಲ್ಲಿಕಾರ್ಜುನ್, ಸತೀಶ ನಾಯ್ಕ, ಕರಿಬಡ್ಡೆರಾಜು, ಧನುಷ್, ಚೇತನ್, ರುದ್ರೇಗೌಡ ಮತ್ತಿತರರು ಇದ್ದರು -- ಬಾಕ್ಸ್ ಸುದ್ದಿಗೆ-- ಇಂದು ದಿನ ಬೆಳಗಾದರೆ ಟಿವಿ, ಪತ್ರಿಕೆ ಗಳನ್ನು ನೋಡಿದರೆ ಒಳ್ಳೆಯ ವಿಚಾರಗಳಿಗಿಂತ ಕೆಟ್ಟ ವಿಚಾರಗಳೇ ಹೆಚ್ಚಾಗಿ ಇರುತ್ತವೆ ಎಂದು ಮಾಜಿ ಸಚಿವ ಎಚ್.ಎಂ. ರೇವಣ್ಣ ಆತಂಕ ವ್ಯಕ್ತಪಡಿಸಿದರು. ಪ್ರಸಕ್ತ ವಿದ್ಯಾಮಾನಗಳ ಹಿನ್ನಲೆಯಲ್ಲಿ ಮಾತನಾಡಿ, ಆ ಮೂಲಕ ಮಾನಸಿಕ ನೆಮ್ಮದಿ ಸಿಗಬೇಕಾದರೆ ದೇವಾಲಯಗಳ ದೇವತಾ ಕಾರ್ಯಗಳಲ್ಲಿ ಭಾಗವಹಿಸಿದಲ್ಲಿ ಮಾನಸಿಕ ನೆಮ್ಮದಿ ಸಿಗಲು ಸಾಧ್ಯ ಎಂದರು. 14ಕೆಕೆಡಿಯು2.ಕಡೂರು ತಾಲೂಕಿನ ಕೆರೆಸಂತೆಯ ಪುನರ್ ನಿರ್ಮಿತ ಇತಿಹಾಸ ಪ್ರಸಿದ್ಧವಾದ ಶ್ರೀಮಹಾಲಕ್ಷ್ಮಿ,ಶ್ರೀ ಜನಾರ್ಧನ ಸ್ವಾಮಿ ದೇವಾಲಯಗಳ ಧಾರ್ಮಿಕ ಕಾರ್ಯಕ್ರಮವನ್ನು ಶಾಸಕ ಕೆ.ಎಸ್, ಆನಂದ್ ಉದ್ಘಾಟಿಸಿದರು. ಮಾಜಿ ಸಚಿವ ಎಚ್.ಎಂ.ರೇವಣ್ಣ ಇದ್ದರು.