ಸಾರಾಂಶ
ಯಾವುದೇ ಕೆಲಸವಾಗಲಿ ಸಮರ್ಪಣಾ ಮನೋಭಾವದಿಂದ ಮಾಡಿದಾಗ ಯಶಸ್ಸು ಹೇಗೆ ನಿಶ್ಚಿತವೂ, ಹಾಗೇ ವಿಜ್ಞಾನ-ತಂತ್ರಜ್ಞಾನದಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಹಾವೇರಿ ಜಿಲ್ಲೆ ತರಬೇತಿ ಸಂಸ್ಥೆಯ ಉಪನಿರ್ದೇಶಕ (ಅಭಿವೃದ್ಧಿ) ಗಿರೀಶ ಪದಕಿ ಹೇಳಿದರು.
ಶಿಗ್ಗಾಂವಿ: ಯಾವುದೇ ಕೆಲಸವಾಗಲಿ ಸಮರ್ಪಣಾ ಮನೋಭಾವದಿಂದ ಮಾಡಿದಾಗ ಯಶಸ್ಸು ಹೇಗೆ ನಿಶ್ಚಿತವೂ, ಹಾಗೇ ವಿಜ್ಞಾನ-ತಂತ್ರಜ್ಞಾನದಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಹಾವೇರಿ ಜಿಲ್ಲೆ ತರಬೇತಿ ಸಂಸ್ಥೆಯ ಉಪನಿರ್ದೇಶಕ (ಅಭಿವೃದ್ಧಿ) ಗಿರೀಶ ಪದಕಿ ಹೇಳಿದರು.ತಾಲೂಕಿನ ತಿಮ್ಮಾಪುರದ ಎಂಎಸ್ ಸೈನ್ಸ್ಆ್ಯಂಡ್ ಟೆಕ್ನಾಲಾಜಿ ಪಾರ್ಕ್‌ನಲ್ಲಿ ತಮ್ಮ ಸಂಸ್ಥೆಯು ‘ಅಟಲ್ ಟಿಂಕ್‌ರಿಂಗ್ ಲ್ಯಾಬ್’ಸಬಲೀಕರಣ ವಿಷಯಕ್ಕೆ ಸಂಬಂಧಿಸಿ ಮಾರ್ಗದರ್ಶಿ ಶಿಕ್ಷಕರಿಗಾಗಿ ಆಯೋಜಿಸಿದ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬಗ್ಗೆ ಆಸಕ್ತಿ ಹೆಚ್ಚಿಸಲು ಕೇಂದ್ರ ಸರಕಾರ ಸಾಂಪ್ರದಾಯಿಕವಾಗಿ ‘ಅಟಲ್ ಟಿಂಕ್‌ರಿಂಗ್ ಲ್ಯಾಬ್’ಗಳನ್ನು ಎಲ್ಲ ರಾಜ್ಯಗಳಿಗೆ ಕೊಡ ಮಾಡಿದೆ. ಇವುಗಳ ಸಬಲೀಕರಣದಿಂದ ಶಿಕ್ಷಣ ಕ್ಷೇತ್ರ ಸಮೃದ್ಧಿಗೊಳಿಸಲು ಸಹಕಾರಿ ಆಗುತ್ತದೆ ಎಂದರು.ವಿಜ್ಞಾನ ಮತ್ತು ತಂತ್ರಜ್ಞಾನಗಳ ಬಗ್ಗೆ ಸಮಗ್ರ ಮಾಹಿತಿ ನೀಡುತ್ತಿರುವ ಎಂಎಸ್ ಸೈನ್ಸ್ ಸೈನ್ಸ್ಆ್ಯಂಡ್ ಟೆಕ್ನಾಲಜಿ
ಪಾರ್ಕ್‌ನಲ್ಲಿ ಈ ವಿಶೇಷ ಕಾರ್ಯಾಗಾರ ಆಯೋಜಿಸಲಾಗಿದ್ದು, ಶಿಬಿರಾರ್ಥಿಗಳು ಇದರ ಪ್ರಯೋಜನ ಪಡೆದು, ತಾವು ಪಡೆದ ಅನುಭವವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯಬೇಕು ಎಂದು ಸೂಚಿಸಿದರು.ಶಿಗ್ಗಾಂವಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಂಯೋಜಕ ಬಸಪ್ಪ ಹಿರೇಮಠ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತು ವಿದ್ಯಾರ್ಥಿಗಳಲ್ಲಿ ಆಸಕ್ತಿ ಹೆಚ್ಚಿಸಿದರೆ, ಅವರಿಂದ ವಿಜ್ಞಾನ ಕ್ಷೇತ್ರಕ್ಕೆ ಅನುಪಮ ಕೊಡುಗೆ ಕೊಡಿಸಬಹುದು. ಆದ್ದರಿಂದ ಶಿಬಿರಾರ್ಥಿಗಳು ಕಾರ್ಯಾಗಾರವನ್ನು ಸದ್ವಿನಿಯೋಗಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.ಪಾರ್ಕ್‌ನ ತಾಂತ್ರಿಕ ಸಲಹೆಗಾರ ಟಿ.ಕೆ. ಮಧು ಅವರು ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು. ವಿಜ್ಞಾನ ಶಿಕ್ಷಕ ರಾಜೀವ ಹರನಗಿರಿ ಹಾಗೂ ಶಿಗ್ಗಾಂವಿ ತಾಲೂಕು ಎಟಿಎಲ್ ನೋಡಲ್ ಅಧಿಕಾರಿ ಬಿ.ಕೆ. ಶ್ರೀನಿವಾಸ ಉಪಸ್ಥಿತರಿದ್ದರು.ಹಾವೇರಿ ಜಿಲ್ಲೆಯ ೩೫ ಮಾರ್ಗದರ್ಶಿ ಶಿಕ್ಷಕರು ಭಾಗವಹಿಸಿರುವರು.