ವಿಜ್ಞಾನದಿಂದ ದೇಶದ ಅಭಿವೃದ್ಧಿ ಸಾಧ್ಯ: ಡಾ.ಎ.ಎಸ್.ಕಿರಣಕುಮಾರ್‌

| Published : Jan 13 2024, 01:32 AM IST

ಸಾರಾಂಶ

ವಿಜ್ಞಾನ, ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಂಡರೆ ದೇಶದ ಆರ್ಥಿಕ ಸ್ಥಿತಿ ಅಭಿವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಬೆಂಗಳೂರು ಜವಾಹರಲಾಲ್ ನೆಹರು ತಾರಾಲಯ ಅಸೋಸಿಯೇಷನ್ ಸೈನ್ಸ್ ಎಜುಕೇಷನ್ ಅಧ್ಯಕ್ಷ ಡಾ. ಎ. ಎಸ್. ಕಿರಣಕುಮಾರ್ ತಿಳಿಸಿದರು. ಆಲೂರಲಲಿ ನಡೆದ ವಿಜ್ಞಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

ನೆಹರು ತಾರಾಲಯದ ಅಸೋಸಿಯೇಷನ್ ಸೈನ್ಸ್ ಎಜುಕೇಷನ್ ಅಧ್ಯಕ್ಷ । ವಿಜ್ಞಾನ ಪ್ರದರ್ಶನ ಕಾರ್ಯಕ್ರಮ ಕನ್ನಡಪ್ರಭ ವಾರ್ತೆ ಆಲೂರು

ವಿಜ್ಞಾನ, ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಂಡರೆ ದೇಶದ ಆರ್ಥಿಕ ಸ್ಥಿತಿ ಅಭಿವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ. ಯುವಜನರು ಇದೂವರೆಗೂ ಬಳಸಿಕೊಳ್ಳದ ವಿಜ್ಞಾನ, ತಂತ್ರಜ್ಞಾನವನ್ನು ಬಳಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು ಎಂದು ಬೆಂಗಳೂರು ಜವಾಹರಲಾಲ್ ನೆಹರು ತಾರಾಲಯ ಅಸೋಸಿಯೇಷನ್ ಸೈನ್ಸ್ ಎಜುಕೇಷನ್ ಅಧ್ಯಕ್ಷ ಡಾ. ಎ. ಎಸ್. ಕಿರಣಕುಮಾರ್ ತಿಳಿಸಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಜವಾಹರಲಾಲ್ ನೆಹರು ತಾರಾಲಯ ಅಸೋಸಿಯೇಷನ್ ಸೈನ್ಸ್ ಎಜುಕೇಷನ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿಜ್ಞಾನ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಜ್ಞಾನ, ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಂಡರೆ ದೇಶದ ಆರ್ಥಿಕ ಸ್ಥಿತಿ ಅಭಿವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಬೆಂಗಳೂರು ಜವಾಹರಲಾಲ್ ನೆಹರು ತಾರಾಲಯ ಅಸೋಸಿಯೇಷನ್ ಸೈನ್ಸ್ ಎಜುಕೇಷನ್ ಅಧ್ಯಕ್ಷ ಡಾ. ಎ. ಎಸ್. ಕಿರಣಕುಮಾರ್ ತಿಳಿಸಿದರು. ಆಲೂರಲಲಿ ನಡೆದ ವಿಜ್ಞಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಇಂದು ಮಕ್ಕಳು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುವ ಸಾಮರ್ಥ್ಯ ನಮಗಿಲ್ಲದಿದ್ದರೂ, ಉತ್ತರ ಸಿಗುವ ಅವಕಾಶ ಕಲ್ಪಿಸಬೇಕು. ಉತ್ತರ ಸಿಗದಿದ್ದರೂ ತಮ್ಮ ವೈಯಕ್ತಿಕ ಶಕ್ತಿಯಿಂದ ಉತ್ತರ ಪಡೆಯಬಲ್ಲವರು ಸಾಮರ್ಥ್ಯ ಹೊಂದಿರುತ್ತಾರೆ. ಸಿ.ವಿ. ರಾಮನ್, ಮೇರಿಕ್ಯೂರಿ ವಿಜ್ಞಾನ, ತಂತ್ರಜ್ಞಾನ ಲೋಕದಲ್ಲಿ ಸೃಷ್ಟಿಸಿದ ಚಲನೆ ಇಂದು ಚಂದ್ರಯಾನದವರೆಗೆ ಹರಡಿ ಇಡೀ ವಿಶ್ವದ ಗಮನ ಸೆಳೆದಿದೆ. ಈಗಾಗಲೇ ನಾವು ಬಾಹ್ಯಾಕಾಶಕ್ಕೆ ಚಂದ್ರನ ಮೇಲೆ ಹೋಗಿದ್ದೀವಿ. ನಮ್ಮ ಸರ್ಕಾರ ಕೇವಲ ಮನುಷ್ಯನನ್ನು ಭೂಮಿಯಿಂದ ಹೊರಗೆ ಕರೆದುಕೊಂಡು ಹೋಗಿ ಸುತ್ತಿಸುವುದು ಮಾತ್ರವಲ್ಲ. ಚಂದ್ರನಲ್ಲಿ ಮನುಷ್ಯ ಇಳಿದು ಬದುಕಲು ಬೇಕಾದ ಅವಶ್ಯಕ ಸಂಶೋಧನೆಗಳು ಆಗಬೇಕಾಗಿದೆ. ಮುಂದಿನ ಪೀಳಿಗೆಗೆ ಯುವ ವಿದ್ಯಾರ್ಥಿಗಳು ತಮ್ಮ ಪ್ರಾಬಲ್ಯದ ಮೂಲಕ ವಿಜ್ಞಾನ, ತಂತ್ರಜ್ಞಾನದಲ್ಲಿ ಹೊರ ಹೊಮ್ಮಬೇಕು’ ಎಂದರು.

ಶಾಸಕ ಸಿಮೆಂಟ್ ಮಂಜು ಮಾತನಾಡಿ, ‘ನಮ್ಮ ಭಾರತ ದೇಶವನ್ನು ಹಾವಾಡಿಗರ ದೇಶ ಎಂದು ವ್ಯಂಗವಾಡುತ್ತಿದ್ದರು. ಮೆಲ್ಲನೆ ತಿಂದರೂ ಮುಳ್ಳನ್ನೂ ತಿನ್ನಬಹುದು ಎಂಬ ಗಾದೆಯಂತೆ, ನಮ್ಮ ದೇಶದ ವಿಜ್ಞಾನಿಗಳು ಪ್ರತಿಯೊಂದನ್ನು ಅವಲೋಕಿಸಿ ತಮ್ಮ ಕಾರ್ಯಾಧಕ್ಷತೆಯಲ್ಲಿ ಸಫಲತೆ ಕಾಣುತ್ತಾರೆ’ ಎಂದರು.

ಜವಾಹರಲಾಲ್ ನೆಹರು ತಾರಾಲಯ ನಿರ್ದೇಶಕ ಡಾ. ಬಿ. ಆರ್. ಗುರುಪ್ರಸಾದ್, ಮಾತನಾಡಿ, ವಿಜ್ಞಾನ ಪ್ರದರ್ಶನ ವಿದ್ಯಾರ್ಥಿಗಳಲ್ಲಿರುವ ಸೂಕ್ತ ಪ್ರತಿಬೆಯನ್ನು ಅರಳಿಸುತ್ತದೆ. ವಿಜ್ಞಾನ ಜನಪ್ರಿಯಗೊಳಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ ಎಂದರು.

ಸಂಸ್ಥೆಯ ಡಾ. ಆನಂದ್, ಲಕ್ಷ್ಮಿ, ಶರಣ್ಯ, ಲೋಕೇಶ್, ಸಂದೇಗೌಡ ಪಾಟೀಲ್ ವಿಜ್ಞಾನ ವಸ್ತುಪ್ರದರ್ಶನ ಏರ್ಪಡಿಸಿದ್ದರು. ಸಮಾರಂಭದಲ್ಲಿ ಕಿರಣ್‌ಕುಮಾರ್ ಸಹೋದರಿ ಡಾ. ನಯನತಾರ, ಶಿಕ್ಷಣ ಇಲಾಖೆ ಉಪನಿರ್ದೇಶಕಿ (ಅಭಿವೃದ್ಧಿ) ಎಚ್ ಕೆ. ಪುಷ್ಪಲತಾ, ಕ್ಷೇತ್ರ ಶಿಕ್ಷಣಾಧಿಕಾರಿ ಎ. ಜೆ.ಕೃಷ್ಣೇಗೌಡ, ಬಿ.ಆರ್.ಸಿ. ರವಿ ಉಪಸ್ಥಿತರಿದ್ದರು.

ಫೋಟೋ: ಆಲೂರಿನಲ್ಲಿ ಏರ್ಪಡಿಸಲಾಗಿದ್ದ ವಿಜ್ಞಾನ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಜವಾಹರಲಾಲ್ ನೆಹರು ತಾರಾಲಯ ಅಸೋಸಿಯೇಷನ್ ಸೈನ್ಸ್ ಎಜುಕೇಷನ್ ಅಧ್ಯಕ್ಷ ಡಾ. ಎ. ಎಸ್. ಕಿರಣಕುಮಾರ್ ಮಾತನಾಡಿದರು. ಶಾಸಕ ಸಿಮೆಂಟ್ ಮಂಜು, ಡಾ. ನಯನತಾರ, ಹೆಚ್ ಕೆ. ಪುಷ್ಪಲತಾ , ಕ್ಷೇತ್ರ ಶಿಕ್ಷಣಾಧಿಕಾರಿ ಎ. ಜೆ. ಕೃಷ್ಣೇಗೌಡ ಇದ್ದರು.