ಸಾರಾಂಶ
ಬೀದರ್ ದಕ್ಷಿಣ ಕ್ಷೇತ್ರದ ನಿರ್ಣಾ ಗ್ರಾಮದಲ್ಲಿ ನಿರ್ಣಾ ಗ್ರಾಮದ ರಸ್ತೆಯಿಂದ ಬುತ್ತಿ ಬಸವೇಶ್ವರ ದೇವಸ್ಥಾನದ ವರೆಗೆ ರಸ್ತೆ ಕಾಮಗಾರಿಗೆ ಶಾಸಕ ಡಾ. ಬೆಲ್ದಾಳೆ ಚಾಲನೆ ನೀಡಿದರು.
ಬೀದರ್:
ಕ್ಷೇತ್ರದ ಅಭಿವೃದ್ಧಿಗಾಗಿ ರಸ್ತೆ, ಒಳಚರಂಡಿ, ವಿದ್ಯುತ್, ಕುಡಿಯುವ ನೀರು, ಶಿಕ್ಷಣ ಸೇರಿ ಇತರೆ ಮೂಲಸೌಕರ್ಯಗಳನ್ನು ಒದಗಿಸುವುದು ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನವು ನಿರಂತರವಾಗಿ ಮಾಡುತ್ತಿದ್ದೇನೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.ಬೀದರ್ ದಕ್ಷಿಣ ಕ್ಷೇತ್ರದ ನಿರ್ಣಾ ಗ್ರಾಮದಲ್ಲಿ ನಿರ್ಣಾ ಗ್ರಾಮದ ರಸ್ತೆಯಿಂದ ಬುತ್ತಿ ಬಸವೇಶ್ವರ ದೇವಸ್ಥಾನದ ವರೆಗೆ ಸುಮಾರು ₹1 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಈ ಭಾಗದ ಆರಾಧ್ಯ ದೇವರಾದ ಬುತ್ತಿ ಬಸವೇಶ್ವರ ದೇವಸ್ಥಾನಕ್ಕೆ ಕಳೆದ ಅನೇಕ ದಿನಗಳಿಂದ ದೇವಸ್ಥಾನದಿಂದ ಗ್ರಾಮದ ರಸ್ತೆ ಸಂಪೂರ್ಣ ಹದಗೆಟ್ಟಿತ್ತು. ಇದರಿಂದ ಜಾತ್ರೆ ಹಾಗೂ ನಿತ್ಯ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಪರದಾಡುವಂತಾಗಿತ್ತು.ಈ ಬಗ್ಗೆ ಹಲವಾರು ಬಾರಿ ಸ್ಥಳೀಯರು ಮನವಿ ಮಾಡಿದ್ದರು. ಇದೀಗ ನನಗೆ ಎಲ್ಲರೂ ಮತ ನೀಡಿ ನನಗೆ ಅಧಿಕಾರ ನೀಡಿದ್ದಾರೆ. ಹೀಗಾಗಿ ರಸ್ತೆ ಕಾಮಗಾರಿಗೆ ಇಂದು ಚಾಲನೆ ನೀಡಿದ್ದೇನೆ ಗ್ರಾಮೀಣ ಭಾಗದ ಅಭಿವೃದ್ಧಿಗೆ ರಸ್ತೆಗಳೆ ಬಹಳ ಮುಖ್ಯವಾಗಿರುತ್ತದೆ. ಹೀಗಾಗಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿರುವುದರಿಂದ ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಗುತ್ತಿಗೆದಾರರು ಕಾಮಗಾರಿ ಉತ್ತಮವಾಗಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಈ ವೇಳೆ ಗ್ರಾ.ಪಂ ಅಧ್ಯಕ್ಷೆ ಗೀತಾ ಮಂಜುನಾಥ್ ಜೋಗಣಿ, ಉಪಾಧ್ಯಕ್ಷ ಸಂಜುಕುಮಾರ ಕಿರಣ್, ಮುಖಂಡರಾದ ಶಂಕರಾವ ಬನ್ನಳ್ಳಿ, ಶ್ರೀನಿವಾಸ್ ಪತ್ತಾರ, ಚನ್ನಬಸಪ್ಪ ಸೋಪಣ್ಣ, ಮಾಣಿಕಪ್ಪ ಖಾಶೆಂಪುರ, ರವಿ ಸ್ವಾಮಿ, ಶಿವರಾಜಪ್ಪ ಜಯಶೆಟ್ಟಿ, ರಾಜು ಪಸಾರ, ವೀರಶೆಟ್ಟಿ ಭದ್ರಪ್ಪನೋರ, ಶಿವಕುಮಾರ ಮೈಲೂರ, ರಾಜಕುಮಾರ ತೆಳೆಮನಿ ಮತ್ತಿತರರು ಇದ್ದರು.