ಸಂಘ-ಸಂಸ್ಥೆಗಳ ಕಾರ್ಯದಿಂದ ಸಮಾಜದ ಶ್ರೇಯೋಭಿವೃದ್ಧಿ

| Published : Dec 27 2024, 12:47 AM IST

ಸಾರಾಂಶ

ವಿವಿಧ ಸಂಘ ಸಂಸ್ಥೆಗಳಂತೆ ಬಾಗಲಕೋಟೆಯ ತಾಲೂಕು ನೌಕರರ ಕ್ಷೇಮಾಭಿವೃದ್ಧಿ ಸಂಘವು ಪ್ರತಿಭೆಗಳನ್ನು ಸಾಧಕರನ್ನು ಗುರುತಿಸಿ ಸನ್ಮಾನಿಸಿ ಪ್ರೋತ್ಸಾಹ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಂಘ-ಸಂಸ್ಥೆಗಳ ಸಾಮಾಜಿಕ ಕಾರ್ಯಗಳಿಂದ ಸಮುದಾಯದ ಶ್ರೇಯೋಭಿವೃದ್ಧಿ ಸಾಧ್ಯ ಎಂದು ಗದ್ದನಗಿರಿ ಮಳೆರಾಜೇಂದ್ರಸ್ವಾಮಿ ಮಠದ ಭಾಸ್ಕರ ಮಹಾಸ್ವಾಮೀಜಿ ಹೇಳಿದರು.

ವಿದ್ಯಾಗಿರಿ ಶ್ರೀ ಕಾಳಿಕಾಂಬಾದೇವಿ ದೇವಸ್ಥಾನದ ಸಭಾಭವನದಲ್ಲಿ ನಡೆದ ಬಾಗಲಕೋಟೆ ತಾಲೂಕು ಶ್ರೀ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ 2025ರ ದಿನದರ್ಶಿಕೆ ಬಿಡುಗಡೆ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಮಾಜದಲ್ಲಿ ವಿವಿಧ ಸಂಘ ಸಂಸ್ಥೆಗಳಂತೆ ಬಾಗಲಕೋಟೆಯ ತಾಲೂಕು ನೌಕರರ ಕ್ಷೇಮಾಭಿವೃದ್ಧಿ ಸಂಘವು ಪ್ರತಿಭೆಗಳನ್ನು ಸಾಧಕರನ್ನು ಗುರುತಿಸಿ ಸನ್ಮಾನಿಸಿ ಪ್ರೋತ್ಸಾಹಿಸುವುದರ ಜೊತೆಗೆ ಸಮುದಾಯದ ಧಾರ್ಮಿಕ ಪರಂಪರೆ ಜಾಗೃತಿಯಿಂದ ಮುಂದುವರೆಸುವ ಕಾರ್ಯ ಮಾಡುತ್ತಿದೆ. ಸಂಘದಿಂದ ಮುಂದಿನ ವರ್ಷದ ಏಪ್ರಿಲ್‌ನಲ್ಲಿ ಉಚಿತ ಸಾಮೂಹಿಕ ಉಪನಯ ಹಮ್ಮಿಕೊಂಡಿರುವುದು ಶ್ಲಾಘನೀಯ ಅದು ಯಶಸ್ವಿಯಾಗಲಿ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸದಾಶಿವ ಬಡಿಗೇರ ಮಾತನಾಡಿ, ಸಮುದಾಯ ಸಂಘಟನಾತ್ಮಕವಾಗಿ ಸರ್ಕಾರಿ ಸೌಲಭ್ಯ ಪಡೆಯುಬೇಕು ಎಂದರು.

ಸಾನ್ನಿಧ್ಯ ವಹಿಸಿದ ನಾಲತವಾಡದ ಬ್ರಹ್ಮಾಂಡಭೇರಿ ಮಠದ ಸುದೀಂದ್ರ ಮಹಾಸ್ವಾಮೀಜಿ ಮಾತನಾಡಿ, ವಿಶ್ವಕರ್ಮ ಸಮಾಜ ಅತ್ಯಂತ ಪ್ರತಿಭಾವಂತ ಸಮಾಜವಾಗಿದೆ. ಪ್ರತಿಭೆಗಳಿಗೆ ಕೊರತೆಯಿಲ್ಲಾ. ಇಂದು ಎಲ್ಲ ಕ್ಷೇತ್ರದಲ್ಲಿ ವಿಶ್ವಕರ್ಮ ಸಮಾಜದ ಸಾಧಕರು ಇದ್ದಾರೆ. ಅವರೆಲ್ಲರೂ ಮುಂದಿನ ಯುವಶಕ್ತಿಗೆ ಪ್ರೇರಣೆ, ವಿಶ್ವಕರ್ಮ ನೌಕರರ ಸಂಘ ಶಿಸ್ತು ಬದ್ಧ ಮಾದರಿ ಸಂಘವಾಗಿದೆ ಎಂದರು.

ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ದೇವೇಂದ್ರ ಅಗಳತಕಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ವರ್ಷ ಏಪ್ರಿಲ್‌ನಲ್ಲಿ ಉಚಿತ ಉಪನಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಎಲ್ಲರೂ ಅದರ ಸದುಪಯೋಗ ತೆಗೆದು ಕೊಳ್ಳಬೇಕು ಎಂದರು.ನಾಗರಾಜ ಕಮ್ಮಾರ, ಸಂಘ ನಡೆದು ಬಂದ ದಾರಿ ಮತ್ತು ಸಂಘದ ಅಡಿಯಲ್ಲಿ ನಡೆದ ಸಮಾಜಸೇವೆಗಳ ಬಗ್ಗೆ ತಿಳಿಸಿದರು. ಭಾರತೀಯ ಸ್ಟೇಟ್ ಬ್ಯಾಂಕ್‌ ಬಾಗಲಕೋಟೆ ಶಾಖೆಯ ಮುಖ್ಯ ವ್ಯವಸ್ಥಾಪಕರಾದ ಮಹಾಲಕ್ಷ್ಮೀ ತೋಟಗಂಟಿ, ವಿದ್ಯಾಗಿರಿ ವಿಶ್ವಕರ್ಮ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ವಸಂತರಾವ ಕಮ್ಮಾರ ವೇದಿಕೆಯಲ್ಲಿದ್ದರು.

ಪ್ರತಿಭಾ ಪುರಸ್ಕಾರ, ಸನ್ಮಾನ:

ನಿವೃತ್ತಿ ಹೊಂದಿದ ನೌಕರರಾದ ವೀರೇಂದ್ರ ಪತ್ತಾರ, ಚಿದಾನಂದ ಪತ್ತಾರ, ಉಳಿಯಪ್ಪ ಬಡಿಗೇರ, ಯಂಕಣ್ಣ ಬಡಿಗೇರ ಹಾಗೂ ವಿಶೇಷ ಸನ್ಮಾನಿತರಾದ ರಾಘವೇಂದ್ರ ಕಮ್ಮಾರ, ಮಹೇಶ ಪತ್ತಾರ, ವಿನೋದಕುಮಾರ ಸೋನಾರ, ಅಶ್ವೀನಿ ಬಡಿಗೇರ, ನಾಗರಾಜ ಕಮ್ಮಾರ, ನಿರ್ಮಲಾ ಪತ್ತಾರ, ಶಾಂತಾ ಪತ್ತಾರ, ಭಾಸ್ಕರ ಕಮ್ಮಾರ, ಜಯಂತ ಬರಗಿ, ಮಂಜುಳಾ ಪತ್ತಾರ, ಲೀಲಾವತಿ ಬಡಿಗೇರ, ಪ್ರೀಯಾ ಪತ್ತಾರಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಬಸವರಾಜ ಬರಗಿ, ಪ್ರಕಾಶ ಪತ್ತಾರ, ಜಗನ್ನಾಥ ಪತ್ತಾರ, ಮಹೇಶ ಕುಮಾರ ಪತ್ತಾರ, ಎ.ಸದಾಶಿವ, ಡಾ.ಭೀಮಪ್ಪ ಬಡಿಗೇರ, ರಘುನಾಥ ಕಮ್ಮಾರ, ರಾಘವೇಂದ್ರ ಕಮ್ಮಾರ, ಮಹಾದೇವ ಪತ್ತಾರ, ಅಪ್ಪಾಸಾಬ ಬಡಿಗೇರ, ಡಾ.ವಿಜಯಲಕ್ಷ್ಮೀ ಪತ್ತಾರ, ಕಾಳಪ್ಪ ಬಡಿಗೇರ, ಪ್ರಶಾಂತ ಕರಡಿಗುಡ್ಡ ರುಕ್ಮಣ್ಣ ಪಂಚಾಳ ಸೇರಿ ಅನೇಕರಿದ್ದರು.