ಯುಜಿಡಿ ಮೂಲಕ ಉಭಯ ಪಟ್ಟಣಗಳ ಅಭಿವೃದ್ಧಿ: ಬಸವರಾಜ ಉಳ್ಳಾಗಡ್ಡಿ

| Published : Sep 25 2024, 12:54 AM IST

ಯುಜಿಡಿ ಮೂಲಕ ಉಭಯ ಪಟ್ಟಣಗಳ ಅಭಿವೃದ್ಧಿ: ಬಸವರಾಜ ಉಳ್ಳಾಗಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಈಗಾಗಲೇ ಪಟ್ಟಣ ಪಂಚಾಯಿತಿ ನೂತನ ಕಟ್ಟಡಕ್ಕೆ ೧.೫೦ ಕೋಟಿ ರೂ. ಮಂಜೂರಾಗಿದ್ದು, ಎಲ್ಲರೂ ಒಂದಾಗಿ ಗುಣಮಟ್ಟದಿಂದ ಕಟ್ಟಡವನ್ನು ನಿರ್ಮಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಶಾಸಕ ಬಸವರಾಜ ರಾಯರಡ್ಡಿಯವರು ಯುಜಿಡಿ ಯೋಜನೆ ಮೂಲಕ ಕುಕನೂರು, ಯಲಬುರ್ಗಾ ಪಟ್ಟಣಗಳ ಸಮಗ್ರ ಅಭಿವೃದ್ಧಿಗೆ ಮುಂದಾಗಿದ್ದಾರೆ ಎಂದು ತಾಲೂಕು ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಹೇಳಿದರು.

ಸ್ಥಳೀಯ ಪಟ್ಟಣ ಪಂಚಾಯಿತಿ ಆವರಣದಲ್ಲಿ ತಾಲೂಕು ಪೌರಸೇವಾ ನೌಕರರ ಸಂಘದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪಪಂ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿ ಸರ್ವ ಸದಸ್ಯರು ಪಕ್ಷ ಬೇಧ ಮರೆತು ಪಟ್ಟಣದ ಅಭಿವೃದ್ದಿಗೆ ಕೈ ಜೋಡಿಸಬೇಕು ಎಂದರು.

ಈಗಾಗಲೇ ಪಟ್ಟಣ ಪಂಚಾಯಿತಿ ನೂತನ ಕಟ್ಟಡಕ್ಕೆ ₹೧.೫೦ ಕೋಟಿ ಮಂಜೂರಾಗಿದ್ದು, ಎಲ್ಲರೂ ಒಂದಾಗಿ ಗುಣಮಟ್ಟದಿಂದ ಕಟ್ಟಡವನ್ನು ನಿರ್ಮಿಸಿಕೊಳ್ಳಬೇಕು. ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳ ರಸ್ತೆ ಹಾಗೂ ಚರಂಡಿಗಳು ಸ್ವಚ್ಛತೆಯಿಂದ ಸುಂದರವಾಗಿ ಕಾಣಲು ಪೌರಕಾರ್ಮಿಕರ ಸೇವೆ ಅವಿಸ್ಮರಣಿಯವಾಗಿದೆ. ಪ್ರತಿಯೊಬ್ಬ ಪೌರಕಾರ್ಮಿಕರು ಅತ್ಯಂತ ಶ್ರಮಜೀವಿಗಳು ತಮ್ಮ ವೃತ್ತಿಯಲ್ಲಿ ಕಠಿಣತೆ ಇದ್ದರೂ ಅದನ್ನು ಮೀರಿ ಶ್ರದ್ಧೆ, ಪ್ರಾಮಾಣಿಕತೆಯಿಂದ ಕಾರ್ಯ ನಿರ್ವೆಹಿಸುತ್ತಿರುವುದು ಶ್ಲಾಘನೀಯವಾಗಿದೆ.

ಪಪಂ ಮುಖ್ಯಾಧಿಕಾರಿ ನಾಗೇಶ ಮಾತನಾಡಿ, ಇನ್ನು ೧೦ ಪೌರಕಾರ್ಮಿಕರ ಕೊರತೆಯ ನಡುವೆಯೂ ಈಗಿರುವ ಕೇವಲ ೨೫ ಜನ ಕಾರ್ಮಿಕರು ಕಠಿಣ ಶ್ರಮದ ಮೂಲಕ ದಿನವಿಡೀ ಪಟ್ಟಣದ ಸ್ವಚ್ಛತೆಯನ್ನು ಕಾಪಾಡುವ ಕಾರ್ಯ ಮೆಚ್ಚುವಂಥದ್ದು. ಕಾರ್ಮಿಕರಿಗೆ ಸರ್ಕಾರ ಪರಿಕರ, ಬೋನಸ್, ಉಚಿತ ಸಮವಸ್ತ್ರ, ಬೆಳಗ್ಗೆ ಉಪಾಹಾರ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಪೌರ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದರು.

ಪಪಂ ಮಾಜಿ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಮಾತನಾಡಿದರು. ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ ಸಭೆ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಪಪಂ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಬೇಲೇರಿ, ಪಪಂ ಸದಸ್ಯರಾದ ರೇವಣೆಪ್ಪ ಹಿರೇಕುರಬರ, ರಿಯಾಜ್ ಖಾಜಿ, ಬಸವಲಿಂಗಪ್ಪ ಕೊತ್ತಲ, ಹನುಮಂತ ಭಜಂತ್ರಿ, ಸಿದ್ದಪ್ಪ ಕಟ್ಟಿಮನಿ, ಇಕ್ಬಾಲ್‌ಸಾಬ ವಣಗೇರಿ, ಚಂದ್ರು ಓಜನಹಳ್ಳಿ, ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಛಲವಾದಿ, ಶರಣಮ್ಮ ಪೂಜಾರ ಇದ್ದರು. ನಾರಾಯಣ ಗಂಗಾಖೇಡ ಪ್ರಾರ್ಥಿಸಿದರು. ಸುಮಾ ಸ್ವಾಗತಿಸಿ, ಎಂಜಿನಿಯರ್‌ ಉಮೇಶ ಬೇಲಿ ನಿರೂಪಿಸಿದರು.

೨೪ವೈಎಲ್‌ಬಿ೧: ಯಲಬುರ್ಗಾದ ಪಪಂ ಆವರಣದಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.