ಯಂಟಗಾನಹಳ್ಳಿ ಟೋಲ್‌- ದೊಡ್ಡಕರೆನಹಳ್ಳಿ ರಸ್ತೆ ಅಭಿವೃದ್ಧಿ

| Published : May 27 2024, 01:10 AM IST

ಸಾರಾಂಶ

ದಾಬಸ್‌ಪೇಟೆ: ತಾಲೂಕಿನ ಯಂಟಗಾನಹಳ್ಳಿ ಟೋಲ್‌ನಿಂದ ದೊಡ್ಡಕರೆನಹಳ್ಳಿ ಗ್ರಾಮದವರೆಗಿನ ರಸ್ತೆ ಒತ್ತುವರಿ ಸಮಸ್ಯೆ ಹಾಗೂ ಅಭಿವೃದ್ಧಿಗೆ ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.

ದಾಬಸ್‌ಪೇಟೆ: ತಾಲೂಕಿನ ಯಂಟಗಾನಹಳ್ಳಿ ಟೋಲ್‌ನಿಂದ ದೊಡ್ಡಕರೆನಹಳ್ಳಿ ಗ್ರಾಮದವರೆಗಿನ ರಸ್ತೆ ಒತ್ತುವರಿ ಸಮಸ್ಯೆ ಹಾಗೂ ಅಭಿವೃದ್ಧಿಗೆ ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.

20 ವರ್ಷಗಳಿಂದ ಸಮಸ್ಯೆಯಾಗಿಯೇ ಉಳಿದಿದ್ದ ನೆಲಮಂಗಲ ತಾಲೂಕಿನ ದೊಡ್ಡಕರೇನಹಳ್ಳಿವರೆಗಿನ ರಸ್ತೆ ಅಭಿವೃದ್ಧಿಯನ್ನು ಶಾಸಕ ಎನ್.ಶ್ರೀನಿವಾಸ್‌ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ 2 ಕೋಟಿ ಅನುದಾನ ಕೊಟ್ಟು ಮಾದರಿ ಗ್ರಾಮಕ್ಕೆ ಬಲ ನೀಡಿದ್ದಾರೆ ಎಂದು ಯುವ ಮುಖಂಡ ಚಿಕ್ಕಹನುಮೇಗೌಡ ಹೇಳಿದರು.

ದೊಡ್ಡಕರೇನಹಳ್ಳಿ ಗ್ರಾಮಸ್ಥರು ಗೃಹಕಚೇರಿಯಲ್ಲಿ ಶಾಸಕ ಶ್ರೀನಿವಾಸ್‌ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ, ಶಾಸಕರ ಋಣ ನಮ್ಮ ಮೇಲಿರುತ್ತದೆ. ಅದನ್ನು ತೀರಿಸಲು ನಮ್ಮಿಂದ ಸಾಧ್ಯವಿಲ್ಲ. ಆದರೆ, ನಾವು ಮಾತ್ರ ಅವರು ರಾಜಕೀಯದಲ್ಲಿರುವವರೆಗೂ ಅವರನ್ನು ಬೆಂಬಲಿಸುತ್ತೇವೆ. ಈ ರಸ್ತೆ ಅಭಿವೃದ್ಧಿಗೆ 20 ವರ್ಷಗಳಿಂದ ಅನೇಕ ಎಫ್‌ಐಆರ್, ಕೇಸ್‌ಗಳು, ಬಡಾವಣೆ ಮಾಲೀಕರ ಧಮ್ಕಿಗಳನ್ನು ಎದುರಿಸಿ ಪೊಲೀಸ್ ಠಾಣೆಗೆ ಅಲೆಯುವಂತಾಗಿತ್ತು. ಅಂದು ಯಾರ ಗಮನಕ್ಕೆ ತಂದರೂ ಸಹಾಯ ಮಾಡದೆ ನಿರ್ಲಕ್ಷ್ಯ ಮಾಡಿದರು. ಆದರೆ ಚುನಾವಣೆ ಸಮಯದಲ್ಲಿ ಗ್ರಾಮಸ್ಥರು ಮನವಿ ಮಾಡಿದಾಗ ಭರವಸೆ ನೀಡಿದ್ದ ಶಾಸಕ ಶ್ರೀನಿವಾಸ್‌ ಗೆದ್ದ ಕೆಲವೇ ದಿನದಲ್ಲಿ ಒತ್ತುವರಿ ಸಮಸ್ಯೆ ಬಗೆಹರಿಸಿದರು. 2 ಕೋಟಿ ವೆಚ್ಚದಲ್ಲಿ ರಸ್ತೆಗೆ ಗುಣಮಟ್ಟದ ಕಾಂಕ್ರೀಟ್ ಹಾಗೂ ಡಾಂಬರೀಕರಣ ಮಾಡಿಸಿ ಬಹುವರ್ಷಗಳ ನಮ್ಮ ಕನಸನ್ನು ಸಾಕಾರಗೊಳಿಸಿದರು. ಅಷ್ಟೇ ಅಲ್ಲದೆ, ದೊಡ್ಡಕರೇನಹಳ್ಳಿ ಗ್ರಾಮದಲ್ಲಿ ಉದ್ಯಾನವನ, ಕುಡಿಯುವ ನೀರು ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿ ಮಾದರಿ ಗ್ರಾಮವನ್ನಾಗಿಸಲು ಸಹಕಾರ ನೀಡಿದ್ದು ಅವರಿಗೆ ಗ್ರಾಮದ ಜನರು ಅಭಿನಂದನೆ ಸಲ್ಲಿಸಿದ್ದೇವೆ ಎಂದರು.

ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ಗ್ರಾಮಸ್ಥರು ಅಭಿನಂದನೆ ಸಲ್ಲಿಸುವ ಅವಶ್ಯಕತೆ ಇಲ್ಲ. ನನ್ನ ಕರ್ತವ್ಯ ಮಾಡುತ್ತಿದ್ದೇನೆ. ಕ್ಷೇತ್ರದ ಅಭಿವೃದ್ಧಿ ನನ್ನ ಮೊದಲ ಆದ್ಯತೆಯಾಗಿದ್ದು ಈಗಗಾಲೇ ಕ್ಷೇತ್ರದಲ್ಲಿ ಒಂದು ಸಾವಿರ ಕೋಟಿಗೂ ಹೆಚ್ಚು ಅನುದಾನದ ಕಾಮಗಾರಿ ಕೆಲಸಗಳು ನಡೆಯುತ್ತಿದೆ. ಗ್ರಾಮಸ್ಥರ ಸಂಕಷ್ಟವನ್ನು ಕಣ್ಣಾರೆ ಕಂಡು ಭರವಸೆ ನೀಡಿದ್ದೇನು ಅದರಂತೆ ಕೊಟ್ಟ ಮಾತಿನಂತೆ ರಸ್ತೆ ಅಭಿವೃದ್ಧಿ ಮಾಡಿದ್ದೇನೆ ಎಂದರು.

ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಸಿ.ಆರ್ ಗೌಡ್ರು, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಟಿ.ನಾಗರಾಜು, ಎನ್‌ಪಿಎ ಅಧ್ಯಕ್ಷ ನಾರಾಯಣಗೌಡ, ಬೂದಿಹಾಳ್ ಗ್ರಾ.ಪಂ.ಮಾಜಿ ಅಧ್ಯಕ್ಷ ಎಂ.ಕೆ ನಾಗರಾಜು, ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಪ್ರದೀಪ್, ಮಾಜಿ ಅಧ್ಯಕ್ಷ ಹೇಮಂತ್‌ಕುಮಾರ್, ಬಿಎಂಟಿಸಿ ಮಾಜಿ ನಿರ್ದೇಶಕ ಮಿಲ್ಟ್ರೀ ಮೂರ್ತಿ, ಪುರಸಭೆ ಮಾಜಿ ಅಧ್ಯಕ್ಷ ಪಿಳ್ಳಪ್ಪ, ಕೆ.ಕೃಷ್ಣಪ್ಪ, ಯೂತ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣಗೌಡ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಭೀಮರಾಜು, ಪಟಾಕಿ ಕುಮಾರ್, ಉಮೇಶ್ ಸೇರಿದಂತೆ ಗ್ರಾಮದ ಮುಖಂಡರು, ಗ್ರಾಮಸ್ಥರು ಮತ್ತಿತರರಿದ್ದರು.ಪೋಟೋ 11 : ದೊಡ್ಡಕರೇನಹಳ್ಳಿ ಗ್ರಾಮಸ್ಥರು ಶಾಸಕ ಶ್ರೀನಿವಾಸ್‌ಗೆ ಅಭಿನಂದನೆ ಸಲ್ಲಿಸಿದರು.ಪೋಟೋ 12 :

ಯಂಟಗಾನಹಳ್ಳಿ ಟೋಲ್‌ನಿಂದ ದೊಡ್ಡಕರೇನಹಳ್ಳಿ ಗ್ರಾಮದ ರಸ್ತೆ ಅಭಿವೃದ್ಧಿ.