ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರುಕಳೆದ ವರ್ಷ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸ್ಮರಣಾರ್ಥ ಘೋಷಿಸಲಾಗಿದ್ದ ‘ಸುರಕ್ಷಾ 75’ ಹೆಸರಿನಲ್ಲಿ 75 ಜಂಕ್ಷನ್‌ಗಳ ಅಭಿವೃದ್ಧಿ ಯೋಜನೆಯನ್ನು ಅನುಷ್ಠಾನಗೊಳಿಸಲು ಬಿಬಿಎಂಪಿ ವಿವರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುತ್ತಿದೆ.ಬಿಬಿಎಂಪಿ ವ್ಯಾಪ್ತಿಯ ಪ್ರಮುಖ 75 ಜಂಕ್ಷನ್‌ಗಳನ್ನು ಅಭಿವೃದ್ಧಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡು ಜತೆಗೆ, ಜಂಕ್ಷನ್‌ಗಳನ್ನು ಸುಂದರವಾಗಿಸಲು 2023-24ನೇ ಸಾಲಿನ ಬಜೆಟ್‌ನಲ್ಲಿ ಸುರಕ್ಷಾ 75 ಯೋಜನೆ ಘೋಷಿಸಲಾಗಿತ್ತು. ಅಲ್ಲದೆ, ಯೋಜನೆ ಕುರಿತ ಬೆಳವಣಿಗೆಯನ್ನು ಸಾರ್ವಜನಿಕರಿಗೆ ತಿಳಿಸಲು ಸುರಕ್ಷಾ 75 ಹೆಸರಿನ ವೆಬ್‌ಸೈಟನ್ನು ಆರಂಭಿಸಲಾಗಿತ್ತು. ಆದರೆ, ಯೋಜನೆ ಜಾರಿಗೆ ಮಾತ್ರ ಬಿಬಿಎಂಪಿ ಮನಸ್ಸು ಮಾಡಿರಲಿಲ್ಲ. ಇದೀಗ ವರ್ಷದ ಹಿಂದೆ ಘೋಷಿಸಲಾಗಿದ್ದ ಯೋಜನೆ ಅನುಷ್ಠಾನಕ್ಕೆ ಡಿಪಿಆರ್ ಸಿದ್ಧಪಡಿಸಲು, ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.ಈ ಯೋಜನೆ ಅಡಿಯಲ್ಲಿ ಪ್ರಮುಖವಾಗಿ ಜಂಕ್ಷನ್‌ಗಳನ್ನು ಸೇರುವ ರಸ್ತೆ, ಪಾದಚಾರಿ ಮಾರ್ಗಗಳ ಅಭಿವೃದ್ಧಿ, ಸಿಗ್ನಲ್‌ಗಳನ್ನು ಮೇಲ್ದರ್ಜೆಗೇರಿಸುವುದು, ಬಸ್ ನಿಲುಗಡೆ, ಬಸ್ ಬೇ, ವಾಹನ ನಿಲುಗಡೆ ವ್ಯವಸ್ಥೆ ಸೇರಿದಂತೆ ಇನ್ನಿತರ ಕ್ರಮ ಕೈಗೊಳ್ಳಲಾಗುತ್ತದೆ. ಅದಕ್ಕಾಗಿ ಡಿಪಿಆರ್‌ನಲ್ಲಿ ಜಂಕ್ಷನ್ ಸೇರುವ ರಸ್ತೆಗಳ ವಿವರ, ಪಾದಚಾರಿ ಮಾರ್ಗಗಳ ಪರಿಸ್ಥಿತಿ, ವಾಹನಗಳ ಸಂಚಾರದ ಸಂಖ್ಯೆ ಸೇರಿದಂತೆ ಇನ್ನಿತರ ಮಾಹಿತಿ ಆರಿಸಿ ಜಂಕ್ಷನ್ ಅಭಿವೃದ್ಧಿ ಕುರಿತು ವಿವರವನ್ನು ನೀಡಬೇಕು ಎಂದು ಟೆಂಡರ್ ಪಡೆಯುವ ಸಂಸ್ಥೆಗೆ ಬಿಬಿಎಂಪಿ ಸೂಚಿಸಲಾಗಿದೆ. ಈ ಯೋಜನೆಗೆ ಬಿಬಿಎಂಪಿ ₹100 ಕೋಟಿಗೂ ಹೆಚ್ಚಿನ ಹಣ ವ್ಯಯಿಸಲು ನಿರ್ಧರಿಸಿದೆ.----ಯಾವ ವಲಯದಲ್ಲಿ ಎಷ್ಟು ಜಂಕ್ಷನ್‌ಗಳ ಅಭಿವೃದ್ಧಿವಲಯಜಂಕ್ಷನ್‌ಗಳ ಸಂಖ್ಯೆಪೂರ್ವ13ದಕ್ಷಿಣ12ಪಶ್ಚಿಮ11ಮಹದೇವಪುರ12ಯಲಹಂಕ8ರಾಜರಾಜೇಶ್ವರಿನಗರ7ಬೊಮ್ಮನಹಳ್ಳಿ8ದಾಸರಹಳ್ಳಿ4ಒಟ್ಟು75