ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಸಂಪೂರ್ಣವಾಗಿ ನಿಂತಿವೆ: ವಿಜಯೇಂದ್ರ

| Published : May 02 2024, 12:18 AM IST / Updated: May 02 2024, 12:19 AM IST

ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಸಂಪೂರ್ಣವಾಗಿ ನಿಂತಿವೆ: ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ಗ್ಯಾರಂಟಿ ನೀಡುವ ನೆಪದಲ್ಲಿ ವಿದ್ಯುತ್ ದರ, ಬಸ್ ದರವನ್ನು ದುಪ್ಪಟ್ಟು ಮಾಡಿ ರಾಜ್ಯದ ಜನರ ಕಿವಿಗೆ ಹೂವು ಇಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜೇಯೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ರಾಜ್ಯ ಸರ್ಕಾರ ಗ್ಯಾರಂಟಿ ನೀಡುವ ನೆಪದಲ್ಲಿ ವಿದ್ಯುತ್ ದರ, ಬಸ್ ದರವನ್ನು ದುಪ್ಪಟ್ಟು ಮಾಡಿ ರಾಜ್ಯದ ಜನರ ಕಿವಿಗೆ ಹೂವು ಇಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜೇಯೇಂದ್ರ ಹೇಳಿದರು.

ಪಟ್ಟಣದ ಕಡೆಚೂರ ಮೈದಾನದಲ್ಲಿ ಬಿಜೆಪಿ ಲೊಕಸಭೆ ಅಭ್ಯರ್ಥಿ ಡಾ. ಉಮೇಶ ಜಾಧವ ಅವರ ಪರವಾಗಿ ಮತಯಾಚನೆಗಾಗಿ ಆಗಮಿಸಿದ್ದ ಅವರು ಬಹಿರಂಗ ಸಭೆಯನ್ನು ಉದ್ದೆಶಿಸಿ ಮಾತನಾಡಿ, ರಾಜ್ಯದಲ್ಲಿ ಯಾವತ್ತು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆಯೊ ಆಗ ಬರಗಾಲ ಬರುತ್ತದೆ. ಈಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಸುಮಾರು ೮೦೦ ಜನ ರೈತರು ಸಾಲಭಾದೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರಿಗೆ ಪರಿಹಾರ ನೀಡಬೇಕೆಂದು ಅನಿಸುತ್ತಿಲ್ಲ ಎಂದು ಟೀಕಿಸಿದರು.

ಗ್ಯಾರಂಟಿ ಜಾರಿಗೊಳಿಸುವ ನೆಪದಲ್ಲಿ ರಾಜ್ಯದ ಅಭಿವೃದ್ಧಿಗೆಂದು ಇರುವ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರೈತರ ಪಂಪ್‌ಸೆಟ್‌ ಹಾಕಿಸಿಕೊಳ್ಳುವುದು, ಪಹಣಿ ಪಡೆಯುವುದು, ಛಾಪಾ ಕಾಗದ, ಹೊಲಗಳ ರಿಜಿಸ್ಟ್ರೇಶನ್ ಸೇರಿದಂತೆ ಹಲವಾರು ಸೌಲಭ್ಯ ಪಡೆಯಲು ಈಗ ದುಪ್ಪಟ್ಟು ಹಣ ಕೊಡುವ ಅನಿವಾರ್ಯತೆ ಉಂಟಾಗಿದೆ. ಅಲ್ಲದೇ ೬೦ ಕೊಟಿ ಸಾಲವನ್ನು ಮಾಡಿ ಅದನ್ನು ಜನ ಸಾಮಾನ್ಯರ ಮೇಲೆ ಹಾಕುತ್ತಿದ್ದಾರೆ ಎಂದು ಆರೊಪಿಸಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರವಧಿಯಲ್ಲಿ ಯಡಿಯೂರಪ್ಪ ನವರು ಕಡು ಬಡವರ ಹೆಣ್ಣುಮಕ್ಕಳಿಗೆ ಅನುಕೂಲವಾಗುವ ಕಿಸಾನ್ ಸಮ್ಮಾನ್, ಭಾಗ್ಯಲಕ್ಷ್ಮಿ ಯೊಜನೆಯನ್ನು ಬಂದ್ ಮಾಡುವದರ ಮೂಲಕ ರೈತಾಪಿ ವರ್ಗ ಹಾಗೂ ಬಡ ಹೆಣ್ಣುಮಕ್ಕಳಿಗೆ ಸೌಲಭ್ಯದಿಂದ ವಂಚಿತರಾಗಿಸಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯ ಬಿ.ಜಿ ಪಾಟೀಲ್, ಮಾಜಿ ಸಚಿವರ ಬಾಬುರಾವ ಚವ್ವಾಣ, ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೆವಾಡಿ, ಚಂದ್ರಶೇಖರ ಅವಂಟಿ ಮಾತನಾಡಿದರು.