ಕನ್ನಡಪ್ರಭ ವಾರ್ತೆ ಮಡಿಕೇರಿ

ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಭೌಗೋಳಿಕವಾಗಿ ಬಹಳ ದೊಡ್ಡ ಕ್ಷೇತ್ರವಾಗಿದ್ದು, ನಾಣಚ್ಚಿಯಿಂದ ಕರಿಕೆವರೆಗೆ 150 ಕಿ.ಮೀ. ವಿಸ್ತೀರ್ಣವಿದೆ. ಎಲ್ಲ ಕಡೆ, ಗ್ರಾಮೀಣ ಭಾಗದಲ್ಲೂ ವಿವಿಧ ಅಭಿವೃದ್ಧಿ ಕಾಮಗಾರಿಗಳು ಆಗುತ್ತಿವೆ. ಈಗಾಗಲೇ ರಸ್ತೆ, ವಿದ್ಯುಚ್ಛಕ್ತಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಇನ್ನಷ್ಟು ಆಗಬೇಕಿದ್ದು, ಎಲ್ಲರ ಸಹಕಾರ ಅಗತ್ಯ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.

ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ-ನಾಲ್ಕೇರಿ ರಸ್ತೆಯ ಲಕ್ಶ್ಮಣ ತೀರ್ಥ ನದಿ ಸಮೀಪ 2 ಕಿ.ಮೀ. ಅಂತರದ ಕಾಂಕ್ರೀಟ್ ರಸ್ತೆ ನಿರ್ಮಾಣ ಮತ್ತು ವಿಸ್ತರಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಕಳೆದ 20 ವರ್ಷಗಳಿಂದಲೂ ಬಹಳಷ್ಟು ಕಾಮಗಾರಿ ಆಗದೆ ಉಳಿದಿವೆ. ಆ ಬಗ್ಗೆ ನಾನು ರಾಜಕೀಯವಾಗಿ ದೂರುವುದಿಲ್ಲ. ಆದರೆ ಜನರು ನನಗೆ ಅಧಿಕಾರ ನೀಡಿ ಮೂರು ವರ್ಷ ಆಗಿದೆ. ಇನ್ನಷ್ಟು ಕೆಲಸ ಆಗಬೇಕಿದೆ. ಎಲ್ಲರ ಪ್ರೀತಿ ವಿಶ್ವಾಸದಿಂದ ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡುತ್ತೇವೆ. ಅಭಿವೃದ್ಧಿ ಕೆಲಸ ನಿರಂತರವಾಗಿ ನಡೆಯುತ್ತಿರುತ್ತವೆ. ಇವತ್ತಿಗೆ ಅಭಿವೃದ್ಧಿ ಕೆಲಸ ಮುಗಿಯಿತು, ನಾಳೆಯಿಂದ ಏನೂ ಇಲ್ಲ ಎನ್ನುವಂತೆ ಇಲ್ಲ. ಜನರು ಸಹ ಅಭಿವೃದ್ಧಿ ಕೆಲಸಗಳನ್ನು ಕೇಳುತ್ತಾ ಇರುತ್ತಾರೆ. ಅದಕ್ಕೆ ಸ್ಪಂದಿಸಿ, ನಾವು ಸಹ ಕೆಲಸಗಳನ್ನು ಮಾಡಲು ಸದಾ ಸಿದ್ದ ಎಂದು ಹೇಳಿದರು.

ಈ ಸಂದರ್ಭ ಪೊನ್ನಂಪೇಟೆ ಕೊಡವ ಸಮಾಜದ ಮಾಜಿ ಅಧ್ಯಕ್ಷ ಸುಳ್ಳಿಮಾಡ ಗೋಪಾಲ್ ತಿಮ್ಮಯ್ಯ, ಮಾಚಿಮಾಡ ಮನು, ಮಲ್ಲಪನೆರ ಸುಧೀರ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಬ್ಲಾಕ್ ಕಾಂಗ್ರೆಸ್ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ನಾಲ್ಕೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ತೀತಿರ ಕಟ್ಟಿ ಕಾರ್ಯಪ್ಪ, ಕೆ. ಬಾಡಗ ವಲಯ ಅಧ್ಯಕ್ಷ ಚಿಮ್ಮಣಮಾಡ ರವಿ ನರೇಂದ್ರ, ತೀತಿರ ಪ್ರಭು ಸುಬ್ಬಯ್ಯ, ಪೆಮ್ಮಂಡ ರಾಜಾ ಕುಶಾಲಪ್ಪ, ಮಚ್ಚಮಾಡ ಉದಯ, ಮದ್ರೀರ ವಿಷ್ಣು,ಅಪ್ಪಚ್ಚoಗಡ ಮೋಟಯ್ಯ, ಚೊಟ್ಟೆಯಂಡಮಾಡ ಉದಯ, ಅಜ್ಜಿಕುಟ್ಟಿರ ಗಿರೀಶ್, ಪಮ್ಮು, ಪೊನ್ನು, ಚೆಪ್ಪುಡೀರ ಬೋಪಣ್ಣ,ಮುಕ್ಕಾಟೀರ ಪ್ರವೀಣ್, ಚೆಪ್ಪು ಡೀರ ಕರುಣ್ ಇದ್ದರು.