ವಿರೋಧಿಗಳ ಟೀಕೆಗೆ ಅಭಿವೃದ್ಧಿ ಕಾರ್ಯಗಳೇ ಉತ್ತರ

| Published : May 17 2025, 01:29 AM IST

ಸಾರಾಂಶ

ಇಲ್ಲಿನ ಗುರುಭವನ ದಶಕಗಳ ಕಾಲದಿಂದ ನೆನೆಗುದಿಗೆ ಬಿದಿತ್ತು. ತಾವು ಶಾಸಕರಾಗಿ ಬಂದ ಮೇಲೆ ಅನುದಾನಕ್ಕೆ ಕಾಯದೆ ತಾಲೂಕಿನ ಶಿಕ್ಷಕರು, ಸರ್ಕಾರಿ ಅಧಿಕಾರಿಗಳೂಡನೆ ಚರ್ಚಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕಾಮಗಾರಿಗೆ ಶಿಕ್ಷಕರು, ಸರ್ಕಾರಿ ನೌಕರರು ಒಟ್ಟು ಮೂರು ದಿನಗಳ ವೇತನ ನೆರವು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಾಲೂರು

ನೂರಾರು ಅಭಿವೃದ್ಧಿ ಕೆಲಸ ನಡೆಯುತ್ತಿದ್ದರೂ ವಿರೋಧ ಪಕ್ಷಗಳು ಟೀಕೆ ಮಾಡುವುದನ್ನು ಬಿಡುವುದಿಲ್ಲ. ಅವುಗಳ ಟೀಕೆಗೆ ಅಭಿವೃದ್ಧಿ ಕಾಮಗಾರಿಗಳ ಮೂಲಕ ಉತ್ತರ ನೀಡುವುದಾಗಿ ಶಾಸಕ ಕೆ.ವೈ.ನಂಜೇಗೌಡ ಹೇಳಿದರು. ಅವರು ಪಟ್ಟಣದಲ್ಲಿ ಅಂದಾಜು 5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಗುರು ಭವನ ಕಟ್ಟಡ ಕಾಮಗಾರಿಯನ್ನು ವಿಕ್ಷೀಸಿದ ನಂತರ ಪತ್ರಕರ್ತರೂಡನೆ ಮಾತನಾಡಿ, ಇಲ್ಲಿನ ಗುರುಭವನ ದಶಕಗಳ ಕಾಲದಿಂದ ನೆನೆಗುದಿಗೆ ಬಿದಿತ್ತು. ತಾವು ಶಾಸಕರಾಗಿ ಬಂದ ಮೇಲೆ ಅನುದಾನಕ್ಕೆ ಕಾಯದೆ ತಾಲೂಕಿನ ಶಿಕ್ಷಕರು, ಸರ್ಕಾರಿ ಅಧಿಕಾರಿಗಳೂಡನೆ ಚರ್ಚಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ಶಿಕ್ಷಕರು, ನೌಕರರರ ನೆರವು

ಈ ಹಿಂದೆ ಶಿಕ್ಷಕರು ನೀಡಿದ್ದ ಒಂದು ದಿನದ ಸಂಬಳದಿಂದ ಪಾಯ ಹಾಕಲು ಸಾಧ್ಯವಾಗಿತ್ತು. ಈಗ ಶಿಕ್ಷಕರು ಮತ್ತೇ ಎರಡು ದಿನದ ಸಂಬಳ, ಸರ್ಕಾರಿ ನೌಕರರ ಒಂದು ದಿನದ ಸಂಬಳ ನೀಡಿದ್ದಾರೆ. ತಾಪಂನಿಂದ 25 ಲಕ್ಷ, ಪುರಸಭೆ 10 ಲಕ್ಷ ಹಾಗೂ ತಾಲೂಕಿನ 28 ಪಂಚಾಯ್ತಿಗಳಿಂದ 62 ಲಕ್ಷ ಸಂಗ್ರಹಿಸಲಾಗಿದ್ದು, ಪಕ್ಷಾತೀತವಾಗಿ ಸಹಕಾರ ನೀಡಿದ್ದು,ಎಲ್ಲರಿಗೂ ನಾನು ಅಬಾರಿಯಾಗಿದ್ದೇನೆ ಎಂದರು.

ಬಸ್‌ನಿಲ್ದಾಣ ಕಾಮಗಾರಿ

ಸುಮಾರು 20 ಕೋಟಿ ರು.ಗಳ ಇಲ್ಲಿನ ಬಸ್‌ ನಿಲ್ದಾಣ ಕಾಮಗಾರಿ ಟೆಂಡರ್‌ ನೀಡಲಾಗಿದೆ. ಇಲ್ಲಿನ ದೊಡ್ಡ ಕೆರೆಯನ್ನು 35 ಕೋಟಿ ವೆಚ್ಚದಲ್ಲಿ ಆಧುನೀಕರಿಸಲು ನಿರ್ಧರಿಸಲಾಗಿದ್ದ ಕಾಮಗಾರಿಯ ವೆಚ್ಚ 50 ಕೋಟಿ ಮುಟ್ಟುವ ಸಂಭವ ಇದ್ದು,ಬೆಂಗಳೂರಿನಲ್ಲಿ ಇರದ ರೀತಿಯಲ್ಲಿ ಇಲ್ಲಿನ ದೊಡ್ಡ ಕೆರೆ ಅಭಿವೃದ್ಧಿಗೊಳ್ಳಲಿದೆ ಎಂದರು.

ತಹಸೀಲ್ದಾರ್‌ ರೂಪ,ತಾ.ಪಂ.ಕಾರ್ಯನಿವರ್ಹಣಾಧಿಕಾರಿ ಕೃಷ್ಣಪ್ಪ ,ಬಿಇಓ ಚಂದ್ರಕಲಾ,ಪುರಸಭೆ ಅಧ್ಯಕ್ಷ ವಿಜಯಲಕ್ಷ್ಮಿ,ಉಪಾಧ್ಯಕ್ಷೆ ವಿಜಯಲಕ್ಷ್ಮಿ ಕೃಷ್ಣಪ್ಪ,ಆಸ್ವತ್ರೆ ವೈದ್ಯಾಧಿಕಾರಿ ಡಾ.ವಸಂತ್‌ ಕುಮಾರ್‌,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುನೇಗೌಡ,ಇನ್ಸ್‌ ಪೆಕ್ಟರ್‌ ವಸಂತ್‌ ,ಶಿಕ್ಷಕರ ಸಂಘದ ವೆಂಕಟಸ್ವಾಮಿ,ಷಣ್ಮುಖಯ್ಯ ,ಪುರಸಭೆ ಸದಸ್ಯ ಬುಲೆಟ್‌ ವೆಂಕಟೇಶ್‌,ನವೀನ್‌ ಇನ್ನಿತರರು ಇದ್ದರು.