ಸರ್ಕಾರಿ ನೌಕರರ ಸಂಘಕ್ಕೆ ದೇವೇಂದ್ರ ಪುನರಾಯ್ಕೆ

| Published : Dec 05 2024, 12:32 AM IST

ಸರ್ಕಾರಿ ನೌಕರರ ಸಂಘಕ್ಕೆ ದೇವೇಂದ್ರ ಪುನರಾಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಇದೇ ಮೊದಲ ಬಾರಿಗೆ ಕುತೂಹಲಕ್ಕೆ ಎಡೆ ಮಾಡಿದ್ದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆ ಶಾಂತ ರೀತಿಯಲ್ಲಿ ನಡೆದಿದ್ದು, ಜಿಲ್ಲಾಧ್ಯಕ್ಷರಾಗಿ ದೇವೇಂದ್ರ ಎರಡನೇ ಅವಧಿಗೆ ಪುನರಾಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಇದೇ ಮೊದಲ ಬಾರಿಗೆ ಕುತೂಹಲಕ್ಕೆ ಎಡೆ ಮಾಡಿದ್ದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆ ಶಾಂತ ರೀತಿಯಲ್ಲಿ ನಡೆದಿದ್ದು, ಜಿಲ್ಲಾಧ್ಯಕ್ಷರಾಗಿ ದೇವೇಂದ್ರ ಎರಡನೇ ಅವಧಿಗೆ ಪುನರಾಯ್ಕೆಯಾಗಿದ್ದಾರೆ.

ಜಿಲ್ಲಾಧ್ಯಕ್ಷ ಸ್ಥಾನಕ್ಕೆ ದೇವೇಂದ್ರ ಹಾಗೂ ಹೇಮಂತ್‌ಕುಮಾರ್‌ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಚಲಾವಣೆಗೊಂಡ 72 ಮತಗಳ ಪೈಕಿ ದೇವೇಂದ್ರ 46 ಮತಗಳನ್ನು ಪಡೆದು ಜಯಗಳಿಸಿದರು. ಹೇಮಂತ್‌ಕುಮಾರ್‌ 25 ಮತಗಳನ್ನು ಪಡೆದರು. ಒಂದು ಮತ ತಿರಸ್ಕೃತಗೊಂಡಿತ್ತು.

ರಾಜ್ಯ ಪರಿಷತ್‌ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಬಿ. ಚೇತನ್‌ 35 ಮತಗಳನ್ನು ಪಡೆದರೆ ಕೆ.ಸಿ. ಮಂಜುನಾಥ್‌ 37 ಮತಗಳನ್ನು ಪಡೆದು ಜಯಗಳಿಸಿದರು. ಖಜಾಂಚಿ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಕೃಷ್ಣಮೂರ್ತಿ ರಾಜ್ ಅರಸ್‌ ಅವರು 27 ಮತಗಳನ್ನು ಪಡೆದು ಕೊಂಡಿದ್ದರೆ ಪೂರ್ಣೇಶ್ 45 ಮತಗಳನ್ನು ಪಡೆದು ಜಯಗಳಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಅಧ್ಯಕ್ಷ ದೇವೇಂದ್ರ ಇದು ನನ್ನ ಗೆಲುವಲ್ಲ, ಇಡೀ ಜಿಲ್ಲೆಯ ಸರ್ಕಾರಿ ನೌಕರರ ಗೆಲುವು. ಇದನ್ನು ಎಲ್ಲಾ ನೌಕರರಿಗೆ, ನಿರ್ದೇಶಕ ಬಂಧುಗಳಿಗೆ ಅರ್ಪಣೆ ಮಾಡುತ್ತೇನೆ. ನನ್ನ ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆಗೆ ಮತದಾರರು ಆಶೀರ್ವಾದ ಮಾಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ದ್ವೇಷ ರಾಜಕಾರಣ ಅಲ್ಲ ಸ್ನೇಹ ರಾಜಕಾರಣಕ್ಕೆ ಒಲಿದ ವಿಜಯ ಎಂದು ಭಾವಿಸುತ್ತೇನೆ ಎಂದು ತಿಳಿಸಿದರು.

ಜಿಲ್ಲೆಯ ಕಡೂರು, ಮೂಡಿಗೆರೆ, ತರೀಕರೆ, ಅಜ್ಜಂಪುರ, ಕೊಪ್ಪ, ಶೃಂಗೇರಿ ಎಲ್ಲಾ ತಾಲೂಕು ಅಧ್ಯಕ್ಷರು, ಮಾಜಿ ಅಧ್ಯಕ್ಷರು, ನಮ್ಮ ಆಯ್ಕೆ ಮಾಡುವಲ್ಲಿ ಶ್ರಮಿಸಿದ್ದಾರೆ ಅವರಿಗೆ ಸದಾ ಚಿರಋಣಿಯಾಗಿರುತ್ತೇನೆ ಎಂದು ಹೇಳಿದರು. ಮುಂದೆ ನನ್ನ ಅಧಿಕಾರ ಅವಧಿಯಲ್ಲಿ ಈ ಚುನಾವಣಾ ಪೂರ್ವದಲ್ಲಿ ನಿರ್ದೇಶಕ ಬಂಧುಗಳಿಗೆ ಪ್ರಣಾಳಿಕೆಯಲ್ಲಿ ಘೋಷಿಸಿ ದಂತೆ, ಅದನ್ನು ಜಾರಿ ಮಾಡಲು ಶ್ರಮಿಸುತ್ತೇನೆ. ಹಂತ ಹಂತವಾಗಿ ಕೆಲಸಗಳನ್ನು ಮುಗಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.ಪ್ರೀತಿ, ಸ್ನೇಹಕ್ಕೆ ಒಲಿದ ಗೆಲುವು ಆಗಿದ್ದು, ರೆಸಾರ್ಟ್, ದ್ವೇಷದ ರಾಜಕಾರಣಕ್ಕಾಗಲೀ, ದೇವಸ್ಥಾನದಲ್ಲಿ ಪ್ರಮಾಣ ಮಾಡಿಸಿದ ಕ್ರಮವನ್ನು ಜಿಲ್ಲೆಯ ನಿರ್ದೇಶಕ ಬಂಧುಗಳು ವಿರೋಧಿಸಿದ್ದಾರೆ ಎಂದರು. ನನ್ನ ಈ ಗೆಲುವಿನ ಫಲಿತಾಂಶ ವಿರೋಧಿಗಳಿಗೆ ತಕ್ಕ ಪಾಠ ಕಲಿಸಿದೆ. ಚುನಾವಣಾಧಿಕಾರಿಯಾಗಿ ಬಸವರಾಜ್ ಮತ್ತು ತಂಡ ಪ್ರಾಮಾಣಿಕತೆ ಪಾರದರ್ಶಕತೆಯಿಂದ ಚುನಾವಣೆ ನಡೆಸಿದ್ದಾರೆ. ಅವರಿಗೆ ತುಂಬು ಹೃದಯದ ಧನ್ಯ ಅರ್ಪಿಸುತ್ತೇನೆ ಎಂದು ಹೇಳಿದರು. 4 ಕೆಸಿಕೆಎಂ 6ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಪುನಾರಾಯ್ಕೆಯಾದ ದೇವೇಂದ್ರ ಹಾಗೂ ಅವರ ತಂಡದವರು ಗೆಲುವಿನ ನಗೆ ಬೀರಿದರು.