ವಿಜೃಂಭಣೆಯ ಸಂತೆಮಾಸ್ತಮ್ಮನವರ ಕೊಂಡ ಮಹೋತ್ಸವ

| Published : Feb 24 2024, 02:31 AM IST

ಸಾರಾಂಶ

ರ ಕಪಿಲಾ ನದಿಗೆ ತೆರಳಿ ಪೂರ್ಣ ಕುಂಬ ಕಳಸದೊಂದಿಗೆ ಶಿವಪಾರ್ವತಿ ಬೆಳ್ಳಿ ಉತ್ಸವ ಮೂರ್ತಿಗೆ ವಿಷೇಶ ಪೂಜೆ ನಡೆಸಿ ಮಂಗಳವಾದ್ಯ, ಸತ್ತಿಗೆ, ವೀರಗಾಸೆ ಜೊತೆಯಲ್ಲಿ ಮೆರವಣಿಗೆ ನಡೆಸಿ ನಂತರ ದೇವಾಲಯದ ಸುತ್ತ ಪ್ರದಕ್ಷೀಣೆ ಹಾಕಿ ತಾಯಿಗೆ ಬೆಳ್ಳಿ ಮುಖವಾಡ ಧರಿಸಿ ವಿಶೇಷ ಪೂಜೆ ನಡೆಸಿ ಮಹಾಮಂಗಳಾರತಿ ಮಾಡಿ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಸರಗೂರು

ಪಟ್ಟಣದಲ್ಲಿ ಸಂತೆಮಾಸ್ತಮ್ಮನವರ ಕೊಂಡ ಮಹೋತ್ಸವವು ಅದ್ದೂರಿಯಾಗಿ ನೆರವೇರಿತು. ಹಲವಾರು ಭಕ್ತರು ಕೆಂಡದ ಮೇಲೆ ನಡೆದು ತಾಯಿಗೆ ಭಕ್ತಿ ಸಮರ್ಪಿಸಿದರು.

ಶ್ರೀ ಸಂತೆಮಾಸ್ತಮ್ಮನವರ ಕೊಂಡ ಮಹೋತ್ಸವ ಅಂಗವಾಗಿ ದೇವಾಲಯವನ್ನು ತಳಿರು ತೋರಣ, ರಂಗೋಲಿ ಬಿಡಿಸಿ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ದೇವಾಲಯದಲ್ಲಿ ಬೆಳಗಿನ ಜಾವದಿಂದ ಹೋಮ ಹವನ ನಡೆಸಿ ಗಣಪತಿ ಹೋಮ ಪುಣ್ಯಾಹ, ಕಳಸ ಪ್ರತಿಷ್ಠಾಪನೆ, ನವಗ್ರಹ ಹೋಮ, ದುರ್ಗಹೋಮ, ಕುಂಕುಮಾರ್ಚನೆ ಪೂಜಾ ಕೈಂಕರ್ಯಗಳು ಜರುಗಿದವು.

ನಂತರ ಕಪಿಲಾ ನದಿಗೆ ತೆರಳಿ ಪೂರ್ಣ ಕುಂಬ ಕಳಸದೊಂದಿಗೆ ಶಿವಪಾರ್ವತಿ ಬೆಳ್ಳಿ ಉತ್ಸವ ಮೂರ್ತಿಗೆ ವಿಷೇಶ ಪೂಜೆ ನಡೆಸಿ ಮಂಗಳವಾದ್ಯ, ಸತ್ತಿಗೆ, ವೀರಗಾಸೆ ಜೊತೆಯಲ್ಲಿ ಮೆರವಣಿಗೆ ನಡೆಸಿ ನಂತರ ದೇವಾಲಯದ ಸುತ್ತ ಪ್ರದಕ್ಷೀಣೆ ಹಾಕಿ ತಾಯಿಗೆ ಬೆಳ್ಳಿ ಮುಖವಾಡ ಧರಿಸಿ ವಿಶೇಷ ಪೂಜೆ ನಡೆಸಿ ಮಹಾಮಂಗಳಾರತಿ ಮಾಡಿ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.

ಹೆಣ್ಣು ಮಕ್ಕಳು ಹೊಸ ಬಟ್ಟೆ ಧರಿಸಿ 101 ಕಳಸ ಹೊತ್ತು ದೇವಾಲಯದ ಸುತ್ತ ಪ್ರದಕ್ಷಕಿಣೆ ಹಾಕಿ ಹರಕೆ ತೀರಿಸಿದರು. ಹರಕೆ ಹೊತ್ತ ಭಕ್ತರು ಈಡಿಗಾಯಿ ಸೇವೆ ನಡೆಸಿದರೆ. ನೂರಾರು ಯುವಕರು ಕೆಂಡದ ಮೇಲೆ ನಡೆದು ಭಕ್ತಿ ಸಮರ್ಪಿಸಿದರು,

ಪೂಜಾ ಕೈಕಾರ್ಯವನ್ನು ಪ್ರಧಾನ ಅರ್ಚಕರಾದ ವಿನಯ್ ಗುರೂಜಿ, ಮಹದೇವಪ್ಪ, ರವಿಶಾಸ್ರ್ತೀ, ಸುಬ್ಬಣ್ಣ, ವಿರುಪಾಕ್ಷ, ನೆರೆವೇರಿಸಿದರು, ದೇವಾಯದ ಟ್ರಸ್ಟ್ ಮುಖ್ಯಸ್ಥರು, ಎಲ್ಲ ಸಮುದಾಯದ ಯಜಮಾನರು ಭಕ್ತಾದಿಗಳು ಭಾಗಿಯಾಗಿದ್ದರು, ಎಲ್ಲ ಭಕ್ತಾದಿಗಳಿಗೂ ಪ್ರಸಾದ ನಡೆಯಿತು.