102 ಕೇಜಿ ಚೀಲ ಹೊತ್ತು ಅಂಜನಾದ್ರಿ ಏರಿದ ಭಕ್ತ

| N/A | Published : Jul 23 2025, 01:45 AM IST / Updated: Jul 23 2025, 11:33 AM IST

Anjanadri Temple

ಸಾರಾಂಶ

102 ಕೆಜಿಯ ಜೋಳದ ಚೀಲ ಹೊತ್ತ 62 ವರ್ಷದ ಭಕ್ತರೊಬ್ಬರು 62 ನಿಮಿಷದಲ್ಲಿ ಅಂಜನಾದ್ರಿ ಬೆಟ್ಟದ 575 ಮೆಟ್ಟಿಲೇರಿ ಆಂಜನೇಯನ ದರ್ಶನ ಪಡೆದಿದ್ದಾರೆ.

ಕೊಪ್ಪಳ: 102 ಕೆಜಿಯ ಜೋಳದ ಚೀಲ ಹೊತ್ತ 62 ವರ್ಷದ ಭಕ್ತರೊಬ್ಬರು 62 ನಿಮಿಷದಲ್ಲಿ ಅಂಜನಾದ್ರಿ ಬೆಟ್ಟದ 575 ಮೆಟ್ಟಿಲೇರಿ ಆಂಜನೇಯನ ದರ್ಶನ ಪಡೆದಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುನ್ನೂರು ಗ್ರಾಮದ ನಿಂಗಪ್ಪ ಸವಣೂರು ವಿಶಿಷ್ಟ ರೀತಿಯಲ್ಲಿ ಭಕ್ತಿ ಮೆರೆದಿದ್ದಾರೆ. 

ಬಹುದಿನದಿಂದ ಅವರು ಜೋಳದ ಚೀಲ ಹೊತ್ತುಕೊಂಡು ಅಂಜನಾದ್ರಿ ಬೆಟ್ಟವೇರಿ ಆಂಜನೇಯನ ದರ್ಶನ ಪಡೆಯಬೇಕೆಂದು ಬೇಡಿಕೊಂಡಿದ್ದರು. ಅದರಂತೆ ಮಂಗಳವಾರ ಬೆಳಗ್ಗೆ 102 ಕೆಜಿ ಜೋಳದ ಚೀಲ ಹೊತ್ತ ನಿಂಗಪ್ಪ, ಸರಸರನೇ ಮೆಟ್ಟಿಲು ಏರಲು ಆರಂಭಿಸಿದರು. ಸುತ್ತಲಿನ ಭಕ್ತರು ಅವರ ಸಾಧನೆ ನೋಡಿ ಹುರಿದುಂಬಿಸಿದರು.

ನಡುವೆ ಅಲ್ಲಿ ಇಲ್ಲಿ ಸ್ವಲ್ಪ ನೀರು ಕುಡಿದರೂ ಬೆನ್ನ ಮೇಲಿನ ಚೀಲವನ್ನು ಕೆಳಗಿಳಸಲೇ ಇಲ್ಲ. ಬೆಟ್ಟವೇರುವಾಗ ಜೈಶ್ರೀರಾಮ ಎಂದು ನಿಂಗಪ್ಪ ಘೋಷಣೆ ಕೂಗುತ್ತಿದ್ದರೆ ಸುತ್ತಲಿದ್ದ ಜನರು ಜೈ ಆಂಜನೇಯ ಎಂದು ಘೋಷಿಸಿದರು. ಇವರು ಬೆಟ್ಟವೇರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ಇವರ ಸಾಧನೆಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ 

ಆಂಜನೇಯನ ಸೇವೆ ಬಹುದಿನಗಳಿಂದ ಆಂಜನೇಯ ಸ್ವಾಮಿ ಸೇವೆ ಮಾಡಬೇಕೆಂದು ಸಂಕಲ್ಪ ಮಾಡಿದ್ದೆ. ಈಗ ಪ್ರೇರಣೆಯಾಗಿದ್ದರಿಂದ 102 ಕೇಜಿ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಏರಿದ್ದೇನೆ.

ನಿಂಗಪ್ಪ, ಸವಣೂರು

Read more Articles on