ಭಕ್ತರೇ ಮಠಗಳಿಗೆ ಜೀವಾಳ: ಬಸನಗೌಡ ಪಾಟೀಲ್

| Published : Mar 12 2024, 02:06 AM IST

ಸಾರಾಂಶ

ಸುರಪುರ ತಾಲೂಕಿನ ಕೆಂಭಾವಿ ಸಮೀಪದ ಮುದನೂರ ಗ್ರಾಮದ ಕೋರಿಸಿದ್ದೇಶ್ವರ ಶಾಖಾ ಮಠದಲ್ಲಿ ಮಹಾಶಿವರಾತ್ರಿ ಅಂಗವಾಗಿ ನಡೆದ ಶಿವಪೂಜೆ ಹಾಗೂ ಪೂಜ್ಯರ ಪಾದಪೂಜೆ ಕಾರ್ಯಕ್ರಮವನ್ನು ಜಿ.ಪಂ. ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ್ ಯಡಿಯಾಪುರ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಸುರಪುರ

ಭಕ್ತರೇ ಮಠಗಳಿಗೆ ಜೀವಾಳ. ಕಂಠಿ ಮಠ ಈ ಭಾಗದಲ್ಲಿ ಉತ್ತಮ ಹೆಸರು ಹೊಂದಿದೆ. ಕರ್ನಾಟಕವಲ್ಲದೆ ಬೇರೆ ರಾಜ್ಯಗಳಲ್ಲೂ ಈ ಮಠದ ಅನೇಕ ಭಕ್ತರಿದ್ದಾರೆ ಎಂದು ಜಿಪಂ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ್ ಯಡಿಯಾಪುರ ಹೇಳಿದರು.

ತಾಲೂಕಿನ ಕೆಂಭಾವಿ ಪಟ್ಟಣ ಸಮೀಪದ ಮುದನೂರ ಗ್ರಾಮದ ಕೋರಿಸಿದ್ದೇಶ್ವರ ಶಾಖಾ ಮಠದಲ್ಲಿ ಮಹಾಶಿವರಾತ್ರಿ ಅಂಗವಾಗಿ ನಡೆದ ಶಿವಪೂಜೆ ಹಾಗೂ ಪಾದಪೂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಂಠಿ ನೀ ಗ್ಯಾರಂಟಿ ಎನ್ನುವಂತೆ ಪೂಜ್ಯರು ಆಶೀರ್ವದಿಸಿದ ಎಲ್ಲ ಕೆಲಸಗಳು ಯಾವುದೇ ತೊಂದರೆಯಿಲ್ಲದೆ ಸುಗಮವಾಗಿ ಜರಗುತ್ತವೆ. ಅದಕ್ಕೆ ಅನೇಕ ಭಕ್ತರ ಜೀವನದಲ್ಲಿ ನಡೆದ ದೃಷ್ಟಾಂತಗಳೆ ಸಾಕ್ಷಿಯಾಗಿವೆ. ಶಿವರಾತ್ರಿ ಮಹಾದಿನದಂದು ಪೂಜ್ಯರ ಆಶೀರ್ವಾದ ದೊರಕಿರುವುದು ಮಹಾಪುಣ್ಯ ಎಂದರು.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎಚ್.ಸಿ. ಪಾಟೀಲ್ ಮಾತನಾಡಿ, ಅಧಿಕಾರ ಶಾಶ್ವತವಲ್ಲ, ನಾವು ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸಗಳು ಶಾಶ್ವತವಾಗಿರುತ್ತವೆ. ಶ್ರೀಮಠದ ಪೂಜ್ಯರ ಆಶೀರ್ವಾದದಿಂದ ಅನೇಕ ಅಭಿವೃದ್ಧಿ ಕೆಲಸ ಮಾಡಲಾಗಿದೆ. ಪೂಜ್ಯರ ಶ್ರೀರಕ್ಷೆ ನಾಡಿನ ಎಲ್ಲ ಜನರ ಮೇಲಿರಲಿ ಎಂದು ಆಶಿಸಿದರು.

ಕೊಪ್ಪಳದ ಭಕ್ತರಿಂದ ಪಾದಪೂಜೆ ನೆರವೇರಿಸಿಕೊಂಡು ಮಾತನಾಡಿದ ಚೆನ್ನ ಸಿದ್ದಮಲ್ಲಿಕಾರ್ಜುನ ಶಿವಾಚಾರ್ಯರು, ಮನುಷ್ಯನಿಗೆ ಶರಣರ ಸಂಗದಲ್ಲಿ ಶಾಂತಿ, ನೆಮ್ಮದಿ ದೊರಕುತ್ತದೆ. ಉಪವಾಸ ಮಾಡುವುದರಿಂದ ದೈಹಿಕದ ಜೊತೆಗೆ ಮಾನಸಿಕವಾಗಿಯೂ ಮನಸ್ಸು ಸದೃಢವಾಗುತ್ತದೆ ಎಂದು ನುಡಿದರು.

ಮುಖಂಡ ರುದ್ರಣ್ಣ ಮರಕಟ್, ಪಿಎಸ್‌ಐ ರಾಜಶೇಖರ ರಾಠೋಡ, ಚೆನ್ನಯ್ಯಸ್ವಾಮಿ ಹಿರೇಮಠ, ಬಸನಗೌಡ ಮಾಲಿಪಾಟೀಲ್, ಮಹಾಂತಯ್ಯಸ್ವಾಮಿ ಸುರಗಿಮಠ, ಶಿವರಾಜ ಖಾನಗೌಡರ, ಹರೀಶ ಕಳಾಂಕರ, ಪ್ರಾಶುಂಪಾಲೆ ಸುಮಂಗಲಾ ಶಿವನಗೌಡ ಬೆನಾಳ, ಹಣಮಂತ್ರಾಯ ಮರಕಟ್, ಸುಬ್ಬರಾಯ ಕಾಚಾಪುರ, ಗೌಡಪ್ಪಗೌಡ ರಸ್ತಾಪುರ, ಹಣಮಂತ್ರಾಯ ರಸ್ತಾಪುರ, ಮಲ್ಲಯ್ಯಸ್ವಾಮಿ ಡೊಣುರಮಠ, ಪ್ರಕಾಶ ಆರವಾಡಿ, ಬಾಜರಾವ ಆರೆವಾಡಿ ಸೇರಿದಂತೆ ಅನೇಕ ಭಕ್ತಾಧಿಗಳಿದ್ದರು.

ಕಾರ್ಯಕ್ರಮ ನಂತರ ಭಕ್ತಾಧಿಗಳು ಸೇರಿದಂತೆ ಪೂಜ್ಯರು ಉಪವಾಸ ಅಂತ್ಯಗೊಳಿಸಿದರು. ನಂತರ ಜಾಗರಣೆ ಅಂಗವಾಗಿ ಸಂಗೀತ ಕಾರ್ಯಕ್ರಮ ಜರುಗಿದವು.