ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಶಿವರಾತ್ರಿ ಹಬ್ಬದ ಪ್ರಯುಕ್ತ ವಿವಿಧ ಶಿವನ ದೇವಾಲಯಗಳಿಗೆ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನೀತಾರಾದರು.ಹನುಮಂತನಗರ ಶ್ರೀಆತ್ಮಲಿಂಗೇಶ್ವರ, ಚಿಕ್ಕರಸಿನಕೆರೆ ಶ್ರೀಕಾಲಭೈರವೇಶ್ವರ, ಅರೇಚಾಕನಹಳ್ಳಿ ಶ್ರೀಶಂಭುಲಿಂಗೇಶ್ವರ, ಅಣ್ಣೂರು ಶ್ರೀ ಬೊಮ್ಮಲಿಂಗೇಶ್ವರ, ಮಠದದೊಡ್ಡಿಯ ಶ್ರೀಹರಿಹರೇಶ್ವರ, ಮಠದಹೊನ್ನಾಯಕನಹಳ್ಳಿ ಮಂಟೇಸ್ವಾಮಿ, ಆಲಭುಜನಹಳ್ಳಿ ಶ್ರೀ ನಾಗಲಿಂಗೇಶ್ವರ, ಕೆ.ಶೆಟ್ಟಹಳ್ಳಿ ಶ್ರೀ ಬೊಮ್ಮಲಿಂಗೇಶ್ವರ, ಅರುವನಹಳ್ಳಿ ಶ್ರೀ ಬಿರೇಶ್ವರ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆಗಳು ನಡೆದವು.
ಶ್ರೀ ಆತ್ಮಲಿಂಗೇಶ್ವರ ದೇವಾಲದಲ್ಲಿ ವಿಶೇಷ ಪೂಜಾ ಕೈಂಕಾರ್ಯಗಳು ಸೇರಿದಂತೆ ಮಹಾ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಜರುಗಿದವು. ಫೆ.25 ರಂದು ಗಣಪತಿ ಹೋಮ ವಿಧಿ ವಿಧಾನಗಳಿಂದ ನಡೆದರೆ ಫೆ.26ರಂದು ಮಹಾರುದ್ರ ಹೋಮ ಜರುಗಿತು.ಈ ವೇಳೆ ಶ್ರೀ ಆತ್ಮಲಿಂಗೇಶ್ವರ ಧರ್ಮದರ್ಶಿ ಮಂಡಳಿ ಅಧ್ಯಕ್ಷ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಭಾರತೀ ಎಜುಕೇಷನ್ ಟ್ರಸ್ಟ್‌ನ ಕಾರ್ಯನಿರ್ವಾಹಕ ಟ್ರಸ್ಟಿ ಆಶಯ್ ಮಧು ನೇತೃತ್ವದಲ್ಲಿ ರುದ್ರಹೋಮ ಸೇರಿದಂತೆ ಹಲವು ಪೂಜಾ ಕಾರ್ಯಕ್ರಮಗಳು ಸಂಗವಾಗಿ ಜರುಗಿದವು. ಟ್ರಸ್ಟ್ ಕಾರ್ಯಧ್ಯಕ್ಷ ಬಿ. ಬಸವರಾಜು, ಕಾರ್ಯದರ್ಶಿಗಳಾದ ಬಿ.ಎಂ.ನಂಜೇಗೌಡ, ಸಿದ್ದೇಗೌಡ, ಟ್ರಸ್ಟಿಗಳಾದ ಬಸವೇಗೌಡ, ಮುದ್ದಯ್ಯ ಸೇರಿದಂತೆ ಇದ್ದರು.
ರಾತ್ರಿ ಜಾಗರಣೆ:ಶ್ರೀ ಆತ್ಮಲಿಂಗೇಶ್ವರ ದೇವಾಲಯದಲ್ಲಿ ಜಾಗರಣೆ ಬೆಳಗ್ಗೆ ಗಣಪತಿ ಪೂಜೆ, ಸ್ವಾಮಿಗೆ ಪಂಚಾಮೃತಾಭಿಷೇಕ ಮತ್ತುರುದ್ರಹೋಮ, ಮಹಾಮಂಗಳಾರತಿ ನಂತರ ಸಂಜೆಯಿಂದ ಬೆಳಗಿನ ಜಾವದವರೆಗೆ ಪೂಜೆಗಳು ನಡೆದವು.
ಪ್ರಜಾಪಿತ ಬಹ್ಮಕುಮಾರಿ ಆಶ್ರಮದ ಗೌರಿಯಕ್ಕ ಅವರಿಂದ ಪ್ರವಚನ, ಟಿ.ನರಸೀಪುರದ ಚನ್ನಾಜಮ್ಮ ತಂಡದಿಂದ ಸೋಬಾನೆ ಪದಗಳು, ಬೆಂಗಳೂರಿನ ಶ್ರೀ ದುರ್ಗಾ ಆರ್ಟ್ಸ್ ಅಕಾಡೆಮಿ ವತಿಯಿಂದ ಭರತನಾಟ್ಯ, ಮೈಸೂರಿನ ಸಂಜೀವಿನಿ ಭಜನಾ ಮಂಡಳಿಯಿಂದ ಭಜನೆ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ದೊಣ್ಣೆವರಸೆ, ದೊಡ್ಡರಸಿನಕೆರೆ ಶ್ರೀ ಕಾಲಭೈರವೇಶ್ವರ ಜನಪದ ಯುವಕ ಕಲಾ ತಂಡ. ಕರಡಕೆರೆ ಮಾರುತಿ ಯುವಕರ ಸಂಘ, ತಳಗವಾದಿ ಶ್ರೀ ಚೌಡೇಶ್ವರಿ ಕಲಾ ಸಂಘದಿಂದ ಕೋಲಾಟ ಮತ್ತು ಮುಟ್ಟನಹಳ್ಳಿ, ಕರಡಕೆರೆ, ಗೌಡಯ್ಯನದೊಡ್ಡಿ, ಅಖಂಡ ಭಜನೆ ಜೊತೆಗೆ ಭಕ್ತಿ ಪ್ರಧಾನ ಚಿತ್ರಗಳು ಪ್ರದರ್ಶನಗೊಂಡವು.ದೇವಾಲಯಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಭಾರತೀನಗರ ಪೊಲೀಸರು ಬೀಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದರು.