ರಾಮನಗರ ಜಿಲ್ಲೆಯಲ್ಲಿ ಭಕ್ತರ ಶಿವನಾಮಸ್ಮರಣೆ

| Published : Mar 09 2024, 01:34 AM IST

ಸಾರಾಂಶ

ರಾಮನಗರ: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶುಕ್ರವಾರ ಜಿಲ್ಲೆಯ ಎಲ್ಲೆಡೆ ಭಕ್ತರು ಶಿವನ ನಾಮಸ್ಮರಣೆ ಮಾಡಿದರು.ಮಹಾಶಿವರಾತ್ರಿ ಪ್ರಯುಕ್ತ ಶೈವಾಗಮನ ಪದ್ಧತಿಯ ದೇವಾಲಯಲ್ಲಿ ವಿಶೇಷ ಅಲಂಕಾರ ಹಾಗೂ ಪೂಜೆ ನೆರವೇರಿತು.

ರಾಮನಗರ: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶುಕ್ರವಾರ ಜಿಲ್ಲೆಯ ಎಲ್ಲೆಡೆ ಭಕ್ತರು ಶಿವನ ನಾಮಸ್ಮರಣೆ ಮಾಡಿದರು.

ಮಹಾಶಿವರಾತ್ರಿ ಪ್ರಯುಕ್ತ ಶೈವಾಗಮನ ಪದ್ಧತಿಯ ದೇವಾಲಯಲ್ಲಿ ವಿಶೇಷ ಅಲಂಕಾರ ಹಾಗೂ ಪೂಜೆ ನೆರವೇರಿತು.

ಹಿಂದೂ ಪುರಾಣಗಳ ಪ್ರಕಾರ ಶಿವ ಅಭಿಷೇಕ ಪ್ರಿಯ. ಹಾಗಾಗಿ ಶಿವರಾತ್ರಿಯ ಪ್ರಯುಕ್ತ ಈಶ್ವರನಿಗೆ ತ್ರಿಕಾಲ ಪೂಜೆ ಮಾಡಲಾಗಿದೆ. ಜಲ ಹಾಗೂ ಹಾಲಿನ ಅಭಿಷೇಕ ಮಾಡಲಾಯಿತು. ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಮಹಾದೇವನಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ಬೆಳಗಿನ ಜಾವ ಪೂಜೆಯು ಬ್ರಾಹ್ಮಿ ಮೂಹೂರ್ತದಲ್ಲಿ ಶಿವನಿಗೆ ಮಹಾರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳನ್ನು ಶಿವಮಂತ್ರವನ್ನು ಪಠಿಸಲಾಯಿತು. ಮಹಾಮಂಗಳಾರತಿಯೊಂದಿಗೆ ಮೊದಲ ಜಾವದ ಪೂಜೆ ಮುಕ್ತಾಯ ಕಂಡಿತು.

ಜಿಲ್ಲೆಯ ಬಹುತೇಕ ಭಕ್ತರು ಬೆಳಗಿನ ಜಾವದಲ್ಲಿ ಮನೆಯಲ್ಲಿ ಪೂಜೆ ನೆರವೇರಿಸಿದ ನಂತರ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದರು. ಇನ್ನು ದೇವಾಲಯದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಕಾರಣ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದುಕೊಂಡರು.

ಭಕ್ತರಿಂದ ಉಪವಾಸ:

ಮಹಾಶಿವರಾತ್ರಿಯಲ್ಲಿ ದೇವರ ಕೃಪೆಗೆ ಪಾತ್ರರಾಗಲು ಹರನ ಭಕ್ತರು ಉಪವಾಸ ಮಾಡುವುದು ವಾಡಿಕೆ. ಹಾಗಾಗಿ ಶುಕ್ರವಾರ ಜನತೆ ಉಪವಾಸವಿದ್ದು, ವ್ರತಾಚರಣೆ ಮಾಡಿದ್ದಾರೆ. ಈ ವೇಳೆ ಕೆಲವರು ಫಲಾಹಾರಗಳನ್ನಷ್ಟೆ ಸೇವಿಸಿ ಶಿವರಾತ್ರಿ ಮುಗಿದ ಬಳಿಕ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ರಾತ್ರಿ ಜಾಗರಣೆ :

ಶಿವರಾತ್ರಿಯ ಪ್ರಯುಕ್ತ ಉಪವಾಸದಂತೆ, ರಾತ್ರಿ ವೇಳೆ ಜಾಗರಣೆ ಮಾಡುವುದು ವಾಡಿಕೆ. ಹಾಗಾಗಿ ಶುಕ್ರವಾರ ರಾತ್ರಿಯ ದೇವರ ಜಪ ತಪವನ್ನು ಮಾಡಿದ್ದಾರೆ. ಕೆಲ ದೇವಾಲಯದ ಆವರಣದಲ್ಲಿ ಜಾಗರಣೆ ಪ್ರಯುಕ್ತ ಭಕ್ತಿ ಪ್ರದಾನ ನಾಟಕ ಪ್ರದರ್ಶನ ಮಾಡಲಾಯಿತು. ಒಟ್ಟಾರೆ ಶುಕ್ರವಾರ ಜಿಲ್ಲಾದ್ಯಂತ ಶಿವ ನಾಮಸ್ಮರಣೆ ಶ್ರದ್ಧಾಭಕ್ತಿಯಿಂದ ಸಾಗಿತು.

ರಾಮನಗರ ತಾಲೂಕಿನ ಇತಿಹಾಸ ಪ್ರಸಿದ್ಧ ಅರ್ಕೇಶ್ವರಸ್ವಾಮಿ, ಮಲ್ಲೇಶರಸ್ವಾಮಿ, ಸೇರಿದಂತೆ ಶಕ್ತಿ ದೇವಾಲಯದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ರಾಮನಗರ ಶ್ರೀ ಶನೈಶ್ವರ ಸ್ವಾಮಿಗೆ ಶಿವರಾತ್ರಿ ಪ್ರಯುಕ್ತ ಕರಗ ಮಹೋತ್ಸವ ಆಚರಣೆ ಮಾಡಲಾಯಿತು. ಶುಕ್ರವಾರ ಮಡಿ ನೀರು ಕರಗ ನೆರವೇರಿಸಲಾಯಿತು. ರಾತ್ರಿ ಹೂವಿನ ಕರಗ ನಡೆಯಿತು.

ವೀರಭದ್ರ ಸ್ವಾಮಿ, ಸೋಮನಾಥ ಸ್ವಾಮಿ, ರಂಗನಾಥ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಇನ್ನು ಅದೇ ರೀತಿ ಚನ್ನಪಟ್ಟಣದ ಶಕ್ತಿ ದೇವತೆ ದೇವಾಲಯಗಳು ಸೇರಿದಂತೆ ಪ್ರಸಿದ್ಧ ಕೆಂಗಲ್ ಆಂಜನೇಯಸ್ವಾಮಿ, ಸೇರಿದಂತೆ ವಿವಿಧ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಲಾಗಿತ್ತು. ಜತೆಗೆ, ರೀತಿ ಕನಕಪುರದ ಕಬ್ಬಾಳಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ನೆಡಸಲಾಗಿತ್ತು.8ಕೆಆರ್ ಎಂಎನ್ 7.ಜೆಪಿಜಿ

ಶಿವರಾತ್ರಿ ಪ್ರಯುಕ್ತ ರಾಮನಗರದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಿರುವುದು.