ಸಾರಾಂಶ
ಹಬ್ಬದ ಪೂರ್ವದ ಮಂಗಳವಾರ, ವಿವಿಧ ಆಕೃತಿ ಮತ್ತು ಬಣ್ಣಗಳಲ್ಲಿದ್ದ ಸುಂದರ ಗಣಪತಿ ಮೂರ್ತಿಗಳನ್ನು ಜನರು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಗಣೇಶ ಹಬ್ಬಕ್ಕೆ ನಗರ ಸಹ ಸಜ್ಜಾಗಿದ್ದು, ಗಣಪತಿ ಪ್ರತಿಷ್ಠಾಪನೆಯ ದಿನದಿಂದ ಆರಂಭವಾಗಿ ವಿಸರ್ಜನೆ ವರೆಗೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿನ ಹಬ್ಬದ ಸಡಗರ ಹೆಚ್ಚಿಸಿದೆ.ಹಬ್ಬದ ಪೂರ್ವದ ಮಂಗಳವಾರ, ವಿವಿಧ ಆಕೃತಿ ಮತ್ತು ಬಣ್ಣಗಳಲ್ಲಿದ್ದ ಸುಂದರ ಗಣಪತಿ ಮೂರ್ತಿಗಳನ್ನು ಜನರು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳಿಗಿಂತ ಮಣ್ಣಿನ ಗಣಪತಿಯನ್ನು ಆರಿಸುವ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಇದು ಪರಿಸರದ ಕುರಿತ ಭಕ್ತರ ಜಾಗೃತಿಯನ್ನು ಪ್ರತಿಬಿಂಬಿಸುತ್ತಿದೆ.ಹಬ್ಬದ ಸಂದರ್ಭದಲ್ಲಿ ಅಗತ್ಯ ವಸ್ತುಗಳು ಹಾಗೂ ಪೂಜೆ ಸಾಮಗ್ರಿಗಳ ಬೆಲೆಗಳು ಗಗನಕ್ಕೇರಿದ್ದರೂ ಜನತೆ ಖರೀದಿಯಲ್ಲಿ ತೊಡಗಿದ್ದ ದೃಶ್ಯ ಕಂಡುಬಂತು. ಬಿ.ಎಚ್.ರಸ್ತೆ, ಪೇಟೆಬೀದಿ ಮತ್ತು ಮಾರುಕಟ್ಟೆ ಪ್ರದೇಶಗಳಲ್ಲಿ ವ್ಯಾಪಾರ ಜೋರಾಗಿದ್ದು, ವ್ಯಾಪಾರಸ್ಥರು ಭರ್ಜರಿಯಾಗಿ ಮಾರಾಟ ಮಾಡುತ್ತಿದ್ದರು.ಪರಿಸರಸ್ನೇಹಿ ಮೂರ್ತಿ:ಈ ಬಾರಿಯ ಗಣೇಶ ಹಬ್ಬದಲ್ಲಿ ಮಣ್ಣಿನ ಮೂರ್ತಿಗಳ ಬಳಕೆಯೊಂದಿಗೆ ಪರಿಸರ ಸಂರಕ್ಷಣೆಗೂ ಆದ್ಯತೆ ನೀಡಲಾಗುತ್ತಿದೆ. ಭಕ್ತರು ಈ ನಿಟ್ಟಿನಲ್ಲಿ ಹೆಚ್ಚು ಒಲವು ತೋರಿದ್ದಾರೆ.