ಸಾರಾಂಶ
ತಾಳಿಕೋಟೆ: ಪಟ್ಟಣದ ಖಾಸ್ಗತೇಶ್ವರ ಜಾತ್ರೋತ್ಸವ ಪ್ರಯುಕ್ತ ವಿಶೇಷ ಪ್ರಸಾದ ಮಾಡಲಾಗಿತ್ತು. ಭಾನುವಾರ ಭಕ್ತರಿಗಾಗಿ ಪಾನಿಪುರಿ, ಸಿರಾ, ಖಡಕ್ ರೊಟ್ಟಿ ಅನ್ನ ಸಾಂಬಾರ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ತಾಳಿಕೋಟೆ: ಪಟ್ಟಣದ ಖಾಸ್ಗತೇಶ್ವರ ಜಾತ್ರೋತ್ಸವ ಪ್ರಯುಕ್ತ ವಿಶೇಷ ಪ್ರಸಾದ ಮಾಡಲಾಗಿತ್ತು. ಭಾನುವಾರ ಭಕ್ತರಿಗಾಗಿ ಪಾನಿಪುರಿ, ಸಿರಾ, ಖಡಕ್ ರೊಟ್ಟಿ ಅನ್ನ ಸಾಂಬಾರ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಸುಮಾರು ೯ ದಿನಗಳ ಕಾಲ ಜರುಗಲಿರುವ ಈ ಜಾತ್ರೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಶ್ರೀಮಠದಿಂದ ವಿಶೇಷ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿದೆ. ೫೦ ಸಾವಿರ ಹೂರಣದ ಹೋಳಿಗೆಯನ್ನು ಪ್ರಸಾದ ಮಾಡಲಾಗಿತ್ತು. ೧ ಲಕ್ಷ ಜಿಲೇಬಿ ತಯಾರಿಸಿ ಭಕ್ತಾಧಿಗಳಿಗೆ ನೀಡಲಾಗಿತ್ತು. ಈ ಬಾರಿ ೧ ಲಕ್ಷ ಪಾನಿಪುರಿ ತಯಾರಿಸುವುದರೊಂದಿಗೆ ಭಕ್ತರ ಅಪೇಕ್ಷೆಯಂತೆ ೧ ಲಕ್ಷ ಪಾನಪುರಿ ತಯಾರಿಸಿ ಭಕ್ತಾಧಿಗಳಿಗೆ ಸಿದ್ದಲಿಂಗಶ್ರೀಗಳು ಉಣಬಡಿಸಿದರು.ಜೊತೆಗೆ ಜಾತ್ರೋತ್ಸವದಲ್ಲಿ ಸಜ್ಜಕ, ತುಪ್ಪ, ಗೋದಿ ಹುಗ್ಗಿ, ಅನ್ನ ಸಾಂಬಾರು, ಸಿರಾ, ಬೋಂದಿ ಜೋಳದ ಹಾಗೂ ಸಜ್ಜಿ ರೊಟ್ಟಿ ವಿವಿಧ ತರಹದ ಪಲ್ಲೆ ವಿವಿಧ ಬಗೆಯ ಫಕ್ವಾನ ಭೋಜನ ವ್ಯವಸ್ಥೆ ನಡೆಯಲಿದೆ.