ಭಕ್ತರ ಪ್ರೀತಿ ಬೆಲೆ ಕಟ್ಟಲಾಗದ ಆಸ್ತಿ: ಸಾಲೂರು ಶ್ರೀ

| Published : Nov 14 2024, 12:55 AM IST

ಸಾರಾಂಶ

ಭಕ್ತರು ತೋರುವ ಪ್ರೀತಿ ನಿಜಕ್ಕೂ ಪವಿತ್ರವಾದದ್ದು, ಅಂತಹ ಭಕ್ತರ ಪ್ರೀತಿ ಬೆಲೆಕಟ್ಟಲಾಗದ ಆಸ್ತಿ ಎಂದು ಸಾಲೂರು ಪೀಠಾಧ್ಯಕ್ಷರಾದ ಡಾ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು. ಕೊಳ್ಳೇಗಾಲದಲ್ಲಿ ಗೌರವ ಸಮರ್ಪಣಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಗೌರವ ಸಮರ್ಪಣಾ ಸಮಾರಂಭಗಳು ನಮ್ಮ ಜವಾಬ್ದಾರಿ ಹೆಚ್ಚಿಸುವ ಜೊತೆ ಇನ್ನಷ್ಟು ಸಮಾಜಮುಖಿ ಸೇವೆಗಳಿಗೆ ಸಹಕಾರ ನೀಡುತ್ತದೆ. ಇಂತಹ ಕಾರ್ಯಕ್ರಮಗಳ ಮೂಲಕ ಭಕ್ತರು ತೋರುವ ಪ್ರೀತಿ ನಿಜಕ್ಕೂ ಪವಿತ್ರವಾದದ್ದು, ಅಂತಹ ಭಕ್ತರ ಪ್ರೀತಿ ಬೆಲೆಕಟ್ಟಲಾಗದ ಆಸ್ತಿ ಎಂದು ಸಾಲೂರು ಪೀಠಾಧ್ಯಕ್ಷರಾದ ಡಾ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ತಾಲೂಕಿನ ಗುಂಡೇಗಲ ಗ್ರಾಮದ ಮಠದಲ್ಲಿ ಸದ್ಭಕ್ತರು ಆಯೋಜಿಸಿದ್ದ ಗೌರವ ಸಮರ್ಪಣಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಪಿ.ಎಚ್ ಡಿ ಪದವಿ ದೊರೆತದ್ದಕ್ಕೆ ಭಕ್ತ ಸಮೂಹ ತೋರುತ್ತಿರುವ ಪ್ರೀತಿ ವಿಶ್ವಾಸಕ್ಕೆ ನಾನು ಆಭಾರಿಯಾಗಿರುವೆ, ನನಗೆ ಹೃದಯತುಂಬಿ ಬಂದಿದೆ. ಮಠಗಳಿಗೆ ಭಕ್ತರೆ ಆಸ್ತಿ, ಅವರಂತಹ ಆಸ್ತಿಗಳನ್ನು ಉಳಿಸಿ ಅವರ ಪ್ರೀತಿ ಗಳಿಸಿ ಮಠದ ಅಭ್ಯುದಯಕ್ಕೆ ಮುಂದಾಗುವೆ, ‍‍‍‍‍‍ವೈಯಕ್ತಿಕವಾಗಿ ಪದವಿ ಸಂದಿದ್ದು ಸಂತಸದ ಜೊತೆ ಹೆಚ್ಚಿನ ಜವಾಬ್ದಾರಿ ದೊರೆತಂತಾಗಿದೆ ಎಂದರು. ಗುಂಡೇಗಾಲ ಮಠಕ್ಕೂ ಸಾಲೂರು ಮಠಕ್ಕೂ ಅವಿನಾಭಾವ ಸಂಬಂಧವಿದೆ. ಮುಂದಿನ ದಿನಗಳಲ್ಲೂ ಈ ಸಂಬಂಧ ಉಳಿಸಿ ಬೆಳೆಸಿಕೊಂಡು ಸಾಗುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತೇನೆ, ಮಹದೇಶ್ವರರ ಆಶೀರ್ವಾದದಿಂದ ಮಠದ ಪೀಠಾಧಿಪತಿ ಸ್ಥಾನ ದೊರೆತಿದ್ದು ಮಹದೇಶ್ವರರ ಸೇವೆ ಜೊತೆ ಜೊತೆಗೆ ಭಕ್ತ ಸಮೂಹಗಳ ಸೇವೆಗೂ ಆದ್ಯತೆ ನೀಡುವೆ ಎಂದು ಹೇಳಿದರು. ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರಸ್ವಾಮಿಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಕುಂದೂರು ಮಠದ ಶರತ್ಚಂದ್ರ ಸ್ವಾಮೀಜಿಗಳು ಜ್ಞಾನ ಭಂಡಾರ ಎಂದು ವ್ಯಾಖ್ಯಾನಿಸಿದರಲ್ಲದೆ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗೆ ಭಕ್ತ ಸಮೂಹ ತೋರುತ್ತಿರುವ ಪ್ರೀತಿ ಬೆಲೆಕಟ್ಟಲಾಗದ್ದು ಎಂದರು.

ಇದೇ ವೇಳೆ ಪಿ.ಎಚ್‌ಡಿ ಪುರಸ್ಕೖತ ಸರಗೂರು ಗ್ರಾಮದ ಬಿ.ದಯಾನಂದ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಂದೂರು ಸಂಸ್ಥಾನದ ಮಠಾಧ್ಯಕ್ಷ ಶರತ್ ಚಂದ್ರ ಸ್ವಾಮೀಜಿ, ಮುಡಿಗುಂಡ ವಿರಕ್ತ ಮಠಾಧ್ಯಕ್ಷ ಶ್ರೀಕಂಠಸ್ವಾಮೀಜಿ, ಗುಂಡೇಗಾಲ ಪಟ್ಟದ ಮಠಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮೀಜಿ, ಖ್ಯಾತ ವಕೀಲ ಶಶಿಬಿಂಬ, ಗ್ರಾಮದ ಉಮೇಶ್, ಮಂಜಣ್ಣ, ಬಸಪಪ್ಪ, ಬಸವರಾಜು, ಸೋಮಣ್ಣ, ಶಿವನಂಜಪ್ಪ (ಲೋಕ), ಮಲ್ಲೇಶಪ್ಪ ಸೇರಿಂತೆ ಅನೇಕ ಮುಖಂಡರು ಗಣ್ಯರು ಪಾಲ್ಗೊಂಡಿದ್ದರು. ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳಿಗೆ ಹಾರ, ತುರಾಯಿ ಹಾಕುವ ಮೂಲಕ ಭಕ್ತ ಸಮೂಹ ತೋರುತ್ತಿರುವ ಪ್ರೀತಿ ಬಣ್ಣಿಸಲಾಗದ್ದು ಇವೆಲ್ಲಕ್ಕಿಂತಲೂ ಭಕ್ತರ ಪ್ರೀತಿಯೇ ಶ್ರೇಷ್ಠ. ಮಠಗಳು ಶ್ರದ್ಧಾ-ಭಕ್ತಿ ತಾಣಗಳು, ಮಠಾಧಿಪತಿಗಳ ಸೇವೆ ಬಣ್ಣಿಸಲಾಗದ್ದು. ಮಾನವೀಯ ಸಂಬಂಧ ಬೆಸೆಯುವಲ್ಲಿ ಗುರುಗಳ ಸೇವೆ ಸ್ವಾರ್ಥವಿಲ್ಲದ್ದು, ಶರತ್‌ಚಂದ್ರ ಸ್ವಾಮೀಜಿ ಜ್ಞಾನ ಭಂಡಾರವಿದ್ದಂತೆ.

ಶಿವಸಿದ್ದೇಶ್ವರ ಸ್ವಾಮೀಜಿ, ಸಿದ್ದಗಂಗಾ ಮಠದ ಕಿರಿಯ ಪೂಜ್ಯರು