ಸಾರಾಂಶ
ಶಾಂತವೀರ ದೇಶಿಕರು ಹಾಗೂ ಅನ್ನದಾನೇಶ್ವರ ಶಾಖಾ ಮಠದ ಹೆಸರಿನಲ್ಲಿದ್ದ ೩೬ ಎಕರೆ ಭೂಮಿಯನ್ನು ಕೆಲ ಖಾಸಗಿ ವ್ಯಕ್ತಿಗಳು ಶ್ರೀಗಳಿಗೆ ಹಣ ಕೊಟ್ಟು ಭೂಮಿಯನ್ನು ಸಾಗುವಳಿ ಮಾಡುತ್ತಿದ್ದಾರೆ. ಅದನ್ನು ಭಕ್ತರು ತಡೆದು ಯಾವುದೇ ಕಾರಣಕ್ಕೂ ಮಠದ ಆಸ್ತಿಯನ್ನು ಪರಭಾರೆ ಮಾಡಲು ಬಿಡುವುದಿಲ್ಲ.
ಯಲಬುರ್ಗಾ:
ತಾಲೂಕಿನ ಸಂಗನಾಳ ಗ್ರಾಮದ ಸರ್ವೇ ನಂ. ೪೭೭ ಸೀಮಾದಲ್ಲಿರುವ ಹಾಲಕೇರಿ ಅನ್ನದಾನೇಶ್ವರ ಮಠಕ್ಕೆ ಸೇರಿದ ೩೬ ಎಕರೆ ಜಮೀನನ್ನು ಖಾಸಗಿ ವ್ಯಕ್ತಿಗಳು ಸಾಗುವಳಿ ಮಾಡುತ್ತಿರುವುದನ್ನು ವಿರೋಧಿಸಿ ಹಾಲಕೇರಿ ಅನ್ನದಾನೇಶ್ವರ ಶಾಖಾ ಮಠದ ಶ್ರೀವಿಶ್ವೇಶ್ವರ ದೇವರು ನೇತೃತ್ವದಲ್ಲಿ ಭಕ್ತರು ಪ್ರತಿಭಟನೆ ನಡೆಸಿದರು.ಗ್ರಾಮದ ಶಾಂತವೀರ ದೇಶಿಕರು ಹಾಗೂ ಅನ್ನದಾನೇಶ್ವರ ಶಾಖಾ ಮಠದ ಹೆಸರಿನಲ್ಲಿದ್ದ ೩೬ ಎಕರೆ ಭೂಮಿಯನ್ನು ಕೆಲ ಖಾಸಗಿ ವ್ಯಕ್ತಿಗಳು ಶ್ರೀಗಳಿಗೆ ಹಣ ಕೊಟ್ಟು ಭೂಮಿಯನ್ನು ಸಾಗುವಳಿ ಮಾಡುತ್ತಿದ್ದಾರೆ. ಅದನ್ನು ಭಕ್ತರು ತಡೆದು ಯಾವುದೇ ಕಾರಣಕ್ಕೂ ಮಠದ ಆಸ್ತಿಯನ್ನು ಪರಭಾರೆ ಮಾಡಲು ಬಿಡುವುದಿಲ್ಲ. ಈಗಾಗಲೇ ಮಠದಿಂದ ದೇಶಿಕರನ್ನು ಹೊರಹಾಕಿದ್ದು ಅವರು ಕೆಲವರಿಗೆ ಹಣದ ಆಸೆಗಾಗಿ ಭೂಮಿ ಮಾರಾಟ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಜಮೀನಿನ ಮೂಲ ಆಸ್ತಿ ಮಠಕ್ಕೆ ಸೇರಿದ್ದು ಯಾವುದೇ ಕಾರಣಕ್ಕೂ ನಾವು ಜಮೀನನ್ನು ಬಿಟ್ಟು ಕೊಡುವುದಿಲ್ಲ. ಈಗಾಗಲೇ ನ್ಯಾಯಾಲದಿಂದ ಮಧ್ಯಂತರ ತಡೆಯಾಜ್ಞೆ ತಂದಿದ್ದೇವೆ. ಆದರೂ ಖಾಸಗಿ ವ್ಯಕ್ತಿಗಳು ಭೂಮಿಯನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ೩೦೦ಕ್ಕೂ ಹೆಚ್ಚು ಗ್ರಾಮಸ್ಥರು ಸೇರಿ ೮೦ ಟ್ರ‍್ಯಾಕ್ಟರ್‌ನಿಂದ ಭೂಮಿ ಸಮತಟ್ಟು ಮಾಡಲಾಗಿದೆ. ಖಾಸಗಿ ವ್ಯಕ್ತಿಗಳು ತೊಂದರೆ ಕೊಟ್ಟರೆ ಅದಕ್ಕೆ ಭಕ್ತರೇ ಉತ್ತರ ಕೊಡಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆಯಲ್ಲಿ ನೂರಾರು ಭಕ್ತರು, ಗ್ರಾಮಸ್ಥರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))