ಭಕ್ತರು ತರಳಬಾಳು ಮಠಕ್ಕೆ ಕೆಡುಕಾಗದಂತೆ ವರ್ತಿಸಬೇಕು

| Published : Sep 17 2024, 01:01 AM IST

ಭಕ್ತರು ತರಳಬಾಳು ಮಠಕ್ಕೆ ಕೆಡುಕಾಗದಂತೆ ವರ್ತಿಸಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಹಿರಿಯ ಜಗದ್ಗುರುಗಳ ಆದೇಶ ಮೀರುವ ವರ್ತನೆಗಳು ಸಿರಿಗೆರೆ ಮಠದ ಪರಂಪರೆಯಲ್ಲಿ ಇಲ್ಲ. ಅಂಥ ಮಠದ ಪರಂಪರೆಗೆ ಕೆಡುಕು ಬಾರದಂತೆ ಭಕ್ತರು ನಡೆದುಕೊಳ್ಳಬೇಕು ಎಂದು ತರಳಬಾಳು ಪೀಠದ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನುಡಿದಿದ್ದಾರೆ.

- ಯಲವಟ್ಟಿಯಲ್ಲಿ ತರಳಬಾಳು ಪೀಠದ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ- - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಹಿರಿಯ ಜಗದ್ಗುರುಗಳ ಆದೇಶ ಮೀರುವ ವರ್ತನೆಗಳು ಸಿರಿಗೆರೆ ಮಠದ ಪರಂಪರೆಯಲ್ಲಿ ಇಲ್ಲ. ಅಂಥ ಮಠದ ಪರಂಪರೆಗೆ ಕೆಡುಕು ಬಾರದಂತೆ ಭಕ್ತರು ನಡೆದುಕೊಳ್ಳಬೇಕು ಎಂದು ತರಳಬಾಳು ಪೀಠದ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಇಲ್ಲಿಗೆ ಸಮೀಪದ ಯಲವಟ್ಟಿ ಗ್ರಾಮದಲ್ಲಿ ಭಕ್ತರು ಹಾಗೂ ತಾಲೂಕು ಸಾಧು ವೀರಶೈವ ಸಮಾಜ ಏರ್ಪಡಿಸಿದ್ದ ಸಿರಿಗೆರೆಯ ಲಿಂ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ೩೨ನೇ ಶ್ರದ್ಧಾಂಜಲಿ ಸಮಾರಂಭದ ದಾಸೋಹಕ್ಕೆ ಭಕ್ತಿ (ಅಕ್ಕಿ) ಸಮರ್ಪಣಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ದಾವಣಗೆರೆಯಲ್ಲಿ ನಮ್ಮ ವಿರುದ್ಧ ನಡೆದ ಸಭೆಯಿಂದ ಮನನೊಂದ ಭಕ್ತರು ತಾವಾಗಿಯೇ ಸಿರಿಗೆರೆ ಮಠಕ್ಕೆ ಆಗಮಿಸಿ ಬೆಂಬಲ ನೀಡಿದ್ದಾರೆ. ನಮಗೆ ಇದುವರೆಗೂ ಪಾದ ಕಾಣಿಕೆ ₹8 ಕೋಟಿ ಬಂದಿದೆ. ಚಿಕಿತ್ಸಾ ವೆಚ್ಚದ ಬಾಬ್ತು ₹೨೫ ಲಕ್ಷಗಳನ್ನು ನಾವೇ ಬಲವಂತವಾಗಿ ಡಾ. ಶರಣ ಪಾಟೀಲ್ ಅವರಿಗೆ ನೀಡಿದ್ದೇವೆ. ಅದನ್ನೇ ಕೆಲವರು ತಪ್ಪು ಭಾವಿಸಿ, ಅಪಪ್ರಚಾರ ಮಾಡಿದ್ದಾರೆ ಎಂದರು.

ಮುಖಂಡ ಹನಗವಾಡಿ ವೀರೇಶ್, ಸಮಾಜದ ಅಧ್ಯಕ್ಷ ಮಹದೇವಪ್ಪ ಗೌಡ, ಶಿವಣ್ಣ, ರಾಜಪ್ಪ, ಶಿವಾನಂದಪ್ಪ, ರತ್ನಮ್ಮ, ಗೌಡರ ಮಂಜುನಾಥ್, ವನಜಾಕ್ಷಮ್ಮ. ಗದ್ದಿಗೇಶ್, ಷಣ್ಮುಖ, ಸುಮತಿ, ರಾಜೇಶ್, ಶಿವಕುಮಾರ್, ಸಿರಿಗೆರೆ ರಾಜಣ್ಣ, ಕುಮಾರ್, ಓಂಕಾರಪ್ಪ, ಬಸವರಾಜಪ್ಪ, ಡಿ.ಚನ್ನಬಸಪ್ಪ, ಡಿ.ಮಹೇಂದ್ರಪ್ಪ ಹಾಗೂ ಸಾವಿರಾರು ಭಕ್ತರು ಭಾಗವಹಿಸಿದ್ದರು.

ಮಹಿಳೆಯರು ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ ನೀಡಿದರು. ಯುವಕರು ಬೈಕ್ ರ್‍ಯಾಲಿ ಮೂಲಕ ಭಕ್ತಿಯಿಂದ ಬರಮಾಡಿಕೊಂಡರು,

- - -

ಬಾಕ್ಸ್‌

* ದುಶ್ಚಟಗಳಿಂದ ದೂರವಿರಿ: ಹರೀಶ್‌

ಶಾಸಕ ಬಿ.ಪಿ. ಹರೀಶ್ ಮಾತನಾಡಿ ನಮ್ಮ ಸುಸಂಸ್ಕೃತ ಸಮಾಜ ಕಟ್ಟುವಲ್ಲಿ ಹರಿಯ ಗುರುಗಳ ಪಾತ್ರ ಮಹತ್ವದ್ದಾಗಿದೆ. ಪ್ರಸ್ತುತ ಗುರುಗಳು ಮದ್ಯಪಾನ ವಿರೋಧಿ ಆಂದೋಲನಕ್ಕೆ ಕರೆ ನೀಡಿದ್ದರು. ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದನೆ ನೀಡದ ಕಾರಣ ಪ್ರಸ್ತುತ ಯುವಜನಾಂಗ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಇದು ವಿಷಾದದ ಸಂಗತಿಯಾಗಿದೆ. ಯುವಕರೇ ಸ್ವತಃ ಮದ್ಯಪಾನದಿಂದ ದೂರ ಉಳಿಯಬೇಕಿದೆ ಎಂದರು.

- - - -೧೬ಎಂಬಿಆರ್೧: