ಭಕ್ತರು ಪ್ರವಚನ ಸಾರ ತಿಳಿಯಬೇಕು: ವಿರಕ್ತ ಮಠದ ಶ್ರೀ

| Published : Aug 25 2025, 01:00 AM IST

ಭಕ್ತರು ಪ್ರವಚನ ಸಾರ ತಿಳಿಯಬೇಕು: ವಿರಕ್ತ ಮಠದ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರಾವಣ ಮಾಸದ ಒಂದು ತಿಂಗಳ ಪರ್ಯಂತ ಪುರಾಣ-ಪ್ರವಚಗಳನ್ನು ಕೇಳಿದ ಚನ್ನಗಿರಿ ಪಟ್ಟಣದ ಭಕ್ತರು ಈ ಮಾಸದಲ್ಲಿ ಕೇಳಿದ ಪ್ರವಚನದ ಒಂದಿಷ್ಟು ಅಂಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಸಮಾಜದಲ್ಲಿ ಆದರ್ಶವ್ಯಕ್ತಿಗಳಾಗಿ ಜೀವಿಸಲಿದ್ದೀರಿ ಎಂದು ಇಲ್ಲಿನ ಶ್ರೀ ಹಾಲಸ್ವಾಮಿ ವಿರಕ್ತ ಮಠದ ಶ್ರೀ ಡಾ.ಬಸವಜಯಚಂದ್ರ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನಗಿರಿ

ಶ್ರಾವಣ ಮಾಸದ ಒಂದು ತಿಂಗಳ ಪರ್ಯಂತ ಪುರಾಣ-ಪ್ರವಚಗಳನ್ನು ಕೇಳಿದ ಚನ್ನಗಿರಿ ಪಟ್ಟಣದ ಭಕ್ತರು ಈ ಮಾಸದಲ್ಲಿ ಕೇಳಿದ ಪ್ರವಚನದ ಒಂದಿಷ್ಟು ಅಂಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಸಮಾಜದಲ್ಲಿ ಆದರ್ಶವ್ಯಕ್ತಿಗಳಾಗಿ ಜೀವಿಸಲಿದ್ದೀರಿ ಎಂದು ಇಲ್ಲಿನ ಶ್ರೀ ಹಾಲಸ್ವಾಮಿ ವಿರಕ್ತ ಮಠದ ಶ್ರೀ ಡಾ.ಬಸವಜಯಚಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀ ಹಾಲಸ್ವಾಮಿ ಸಮುದಾಯ ಭವನದಲ್ಲಿ ಶನಿವಾರ ಅವಿರಳ ಜ್ಞಾನಿ ಶ್ರೀ ಉಳವಿ ಚನ್ನಬಸವೇಶ್ವರರ ಮಹಾಪುರಾಣ, ವಚನಾಮೃತ ಬೋಧನೆಯ ಮಂಗಲ ಕಾರ್ಯಕ್ರಮದ ನೇತೃತ್ವವನ್ನು ವಹಿಸಿ ಮಾತನಾಡಿ, ಮಠಗಳಿಗೆ ಭಕ್ತರ ಒಡನಾಟ ನಿರಂತರವಾಗಿ ಇಟ್ಟುಕೊಳ್ಳಬೇಕಾಗಿದ್ದು ಗುರು ಶಿಷ್ಯರ ಸಂಬಂಧ ನಿಕಠವಾಗಿರಬೇಕು ಎಂದು ತಿಳಿಸುತ್ತ ಮನುಷ್ಯ ತನ್ನ ಜೀವನವನ್ನು ಸುಂದರ ಮಾಡಿಕೊಳ್ಳಬೇಕಾದರೆ ತನ್ನಲ್ಲಿರುವುದನ್ನು ಕೊಡುವ ಅಭ್ಯಾಸವನ್ನು ಮೈಗೂಡಿಸಿಕೊಂಡಾಗ ತನ್ನ ಜೀವನವನ್ನು ಸುಂದರವಾಗಿಸಿಕೊಳ್ಳಬಹುದು ಎಂದರು.

ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಇಲ್ಲಿನ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ವಹಿಸಿ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಧರ್ಮ ಮತ್ತು ಸಂಸ್ಕಾರ ಅಡಕವಾಗಿದ್ದು ಅದರಲ್ಲೂ ನಮ್ಮ ಕರ್ನಾಟಕ ರಾಜ್ಯದಲ್ಲಿ ಜ್ಞಾನ ದಾಸೋಹ, ಅನ್ನ ದಾಸೋಹಕ್ಕೆ ಮಠಗಳ ಕೊಡುಗೆ ಅಪಾರವಾಗಿದೆ ಎಂದರು.

ಮಠಗಳು ಮಾನವನ ಕಲ್ಯಾಣಕ್ಕಾಗಿಯೇ ಇದ್ದು ಜೀವನದಲ್ಲಿ ನೊಂದು ಬಂದ ಜನರಿಗೆ ಭರವಸೆಯನ್ನು ತುಂಬುವ ಕೆಲಸವನ್ನು ಮಠ ಮಾನ್ಯಗಳು ಮಾಡುತ್ತೀರುವ ಬಗ್ಗೆ ವಿವರಿಸಿದರು.

ಶ್ರಾವಣ ಮಾಸದ ಒಂದು ತಿಂಗಳಕಾಲ ಪ್ರವಚನವನ್ನು ಬೋಧಿಸಿದ ಪುಟ್ಟರಾಜ ಗವಾಯಿಗಳ ಶಿಷ್ಯರಾದ ಮಹಾಂತೇಶ ಶಾಸ್ತ್ರಿಗಳು ಭಕ್ತಾಧಿಗಳಿಗೆ ಪುರಾಣ ಪ್ರವಚನವನ್ನು ಬೋಧನೆ ಮಾಡಿದರು ಇವರು ಬರೆದ ಶ್ರೀ ಶರಣ ಬಸವಾರ್ಯ ತಾತನವರ ಲೀಲಾಮೃತ ಪುರಾಣ ಎಂಬ ಗ್ರಂಥವನ್ನು ಶ್ರೀಗಳವರು ಬಿಡುಗಡೆ ಮಾಡಿದರು.

ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಶ್ರೀ ಗುರು ಆಸ್ಫತ್ರೆಯ ಡಾ.ಎಂ.ಬಿ.ಗಂಗಾಧರ, ಬೆಂಗಳೂರಿನ ಗುತ್ತಿಗೆದಾರ ಎಂ.ಡಿ.ಮಹಾಬಲೇಶ್ವರ, ಹೊಸಕೋಟೆ ಎಂ.ಬಿ.ಮಂಜುನಾಥ್, ಕೊಳದಮಠದ ಮ್ಯಾನೇಜರ್ ಟಿ.ಎಸ್.ಹರ್ಷ, ವೀರ ಶೈವ ಸಮಾಜದ ಮಾಜಿ ಅಧ್ಯಕ್ಷ ಸಾಗರದಶಿವಲಿಂಗಪ್ಪ, ರಾಜಶೇಖರಯ್ಯ, ಜವಳಿ ಮಹೇಶ್, ಪುರಸಭೆಯ ಮಾಜಿ ಅಧ್ಯಕ್ಷ ಪಿ,ಆರ್,ಮಂಜುನಾಥ್, ರಜತಾದ್ರಿ ಹಾಲೇಶ್, ಜ್ಯೋತಿ ಕೊಟ್ರೇಶ್ ಕೋರಿ, ರೂಪಮುರುಡೇಶ್, ಎಲ್.ಎಂ.ರೇಣುಕಾ, ಎಲ್.ಎಂ.ಉಮಾಪತಿ, ಚಿಕ್ಕೊಲಿಕೆರೆ ಸಂಗಮೇಶ್, ಎಚ್.ಬಿ.ರುದ್ರಯ್ಯ, ಚಂದ್ರಯ್ಯ, ಸಂಗಯ್ಯ, ನಾಗೇಂದ್ರಯ್ಯ ಭಕ್ತಾದಿಗಳು ಭಾಗವಹಿಸಿದ್ದರು.