ಕುಮಾರಿ ಮಾನ್ಯಾ ಪ್ರಕಾಶ ಹೆಗಡೆ ಕಲ್ಲಾರೆಮನೆ ಬೆಂಗಳೂರು ಅವರು ಭಕ್ತಿ ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದರು.
ಸಿದ್ದಾಪುರ: ತಾಲೂಕಿನ ಭುವನಗಿರಿಯ ಭುವನೇಶ್ವರಿ ದೇಗುಲದಲ್ಲಿ ದುರ್ಗಾಷ್ಟಮಿಯಂದು ಸ್ವರಗಂಗಾ ಭಜನಾ ಮಂಡಳಿಯವರ ಭಜನೆ ಕಾರ್ಯಕ್ರಮ ಜರುಗಿತು.
ಜಗದಾದಿ ದೇವನೆ, ಶ್ರೀಧರರಂಥ, ಜನನಿ ವೈಷ್ಣವಿ, ಅಂಬಾ ಭವಾನಿ, ಇದೇ ರಾಮ ನಾಮ, ರಕ್ಷಿಸು ದಯದಿ, ಶಾರದೆ ಸಂಗೀತ ವಿಶಾರದೆ ಮುಂತಾದ ಹಾಡುಗಳನ್ನು ಪ್ರಿಯಾಂಕಾ ಹೆಗಡೆ ಕಾಶಿಗದ್ದೆ, ಭಾರತಿ ಭಟ್ಟ, ನಾಗವೇಣಿ ಭಟ್ಟ, ಶೋಭಾ ಭಟ್ಟ ಮುತ್ತಿಗೆ, ವಿನುತಾ ಅಸವಳ್ಳಿ, ಲಲಿತಾ ಕಾಶಿಗದ್ದೆ, ಆಶಾ ಅಸವಳ್ಳಿ, ರಾಜೇಶ್ವರಿ ಡೊಂಬೆಕೈ ಇವರು ಭಕ್ತಿಪೂರ್ವಕವಾಗಿ ಹಾಡಿದರು. ಇವರಿಗೆ ಜೈರಾಮ ಭಟ್ಟ ಹೆಗ್ಗಾರಳ್ಳಿ ಹಾರ್ಮೋನಿಯಂನಲ್ಲಿ, ಪ್ರಕಾಶ ಹೆಗಡೆ ಕಲ್ಲಾರೆಮನೆ ಬಾನ್ಸುರಿಯಲ್ಲಿ ಹಾಗೂ ನಿತಿನ್ ಹೆಗಡೆ ಕಲಗದ್ದೆ ತಬಲಾದಲ್ಲಿ ಸಹಕರಿಸಿದರು.ನಂತರ ಕುಮಾರಿ ಮಾನ್ಯಾ ಪ್ರಕಾಶ ಹೆಗಡೆ ಕಲ್ಲಾರೆಮನೆ ಬೆಂಗಳೂರು ಅವರು ಭಕ್ತಿ ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದರು. ಅವರು ರಾಗ ಹಂಸಧ್ವನಿಯಲ್ಲಿ ಏಕದಂತಂ ಗಜಾನನಂ ಎಂಬ ಹಾಡಿನೊಂದಿಗೆ ಪ್ರಾರಂಭಿಸಿ, ಶಾರದೆ ಜಯ, ಲಕ್ಷ್ಮೀ ಬಾರಮ್ಮ, ನೀಡೂ ಶಿವ ನೀಡದಿರೂ ಶಿವ, ನೀನೇ ಅನಾಥ ಬಂಧು, ಬಾರೇ ಭಾಗ್ಯದ ನಿಧಿಯೇ, ಬಂದನೇನೇ ರಾಮ ಬಂದನೇನೇ, ಮುಂತಾದ ಹಾಡುಗಳನ್ನು ಭಕ್ತಿ ಮತ್ತು ಮಾಧುರ್ಯದಿಂದ ಹಾಡಿದರು. ರಾಗ ಭೈರವಿಯಲ್ಲಿ ಮೂಡಿಬಂದ ಜಯದುರ್ಗೆ ದುರ್ಗತಿ ಪರಿಹಾರಿಣಿ ಎಂಬ ಹಾಡಿನೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ನಿತಿನ್ ಹೆಗಡೆ ಕಲಗದ್ದೆ ತಬಲಾದಲ್ಲಿ, ಸಂಗೀತ ಕಲಾವಿದೆ ದೀಪಾ ಪ್ರಕಾಶ ಹೆಗಡೆ ಹಾರ್ಮೋನಿಯಂನಲ್ಲಿ, ಪ್ರಕಾಶ ಹೆಗಡೆ ಕಲ್ಲಾರೆಮನೆ ಕೊಳಲಿನಲ್ಲಿ ಸಹಕರಿಸಿದರು. ಸುಷಿರ ಸಂಗೀತ ಪರಿವಾರದ ಸಂಚಾಲಕ ನಾರಾಯಣ ಹೆಗಡೆ ಕಲ್ಲಾರೆಮನೆ ಹಾಗೂ ದೇವಸ್ಥಾನದ ಆಡಳಿತ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.ಪರಮೇಶ್ವರ ಹೆಗಡೆ ಭಾನ್ಕುಳಿ ಧನ್ಯವಾದ ಸಮರ್ಪಿಸಿದರು. ಭುವನೇಶ್ವರಿ ದೇವಾಲಯ ಹಾಗೂ ಸುಷಿರ ಸಂಗೀತ ಪರಿವಾರದ ಸಂಯೋಜನೆಯಲ್ಲಿ ಕಾರ್ಯಕ್ರಮ ನಡೆಯಿತು.