ಸಾಹಿತಿ ಬಾರಾಸು ನೇತೃತ್ವದಲ್ಲಿ ನಡೆದ ನಮ್ಮೂರ ಹಬ್ಬ ನಾಟಕ ಪ್ರದರ್ಶಿಸಿದರು. ಕುರುಹಿನಶೆಟ್ಟಿ ಭಜನಾ ಮಂಡಳಿ ಗಾಯಕರಾದ ನರಸಿಂಹಮೂರ್ತಿ (ಶಾಸ್ತ್ರಿ), ಧನಂಜಯ, ಗುರುರಾಜ್, ನಾಗರಾಜ್, ವಿಜಯ ಕುಮಾರ್, ಗಿರಿಜಾವತಿ, ಪ್ರಮೀಳಾ, ಧನಲಕ್ಷ್ಮೀ, ನಾಗವೇಣಿ, ಭಾಗ್ಯ ಹಾಗೂ ಭಾರತಿ ಅವರ ಗಾಯನಕ್ಕೆ ಸುಮಧುರವಾಗಿ ಹಾರ್ಮೋನಿಯಂ ನುಡಿಸಿದ ಚನ್ನಕೇಶವ ಹಾಗೂ ಸುಶ್ರಾವ್ಯವಾಗಿ ತಬಲ ನುಡಿಸಿದ ಓಂಪ್ರಕಾಶ್ ಅವರ ಕೈಚಳಕಕ್ಕೆ ತನ್ಮಯತೆಯಿಂದ ಕುಳಿತ ಸಭಿಕರು ದೇವರ ನಾಮಗಳು ಹಾಗೂ ಕೀರ್ತನೆಗಳ ಸ್ವಾದವನ್ನು ಅನುಭವಿಸಿ ಪ್ರಶಂಸಿಸಿದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ಗಣಪತಿ ಪೆಂಡಾಲಿನಲ್ಲಿ ನಡೆಯುತ್ತಿರುವ 69 ನೇ ಗಣೇಶೋತ್ಸವದಲ್ಲಿ ಸೆಪ್ಟೆಂಬರ್ ೧೪ರಿಂದ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ್ನಣೆ ಗಳಿಸುತ್ತಿದ್ದು, ಮಂಗಳವಾರ ಸಂಜೆ ಕುರುಹಿನಶೆಟ್ಟಿ ಭಜನಾ ಮಂಡಳಿ ಸದಸ್ಯರು ಹಾಡಿದ ದೇವರ ನಾಮಗಳು ಹಾಗೂ ಕೀರ್ತನೆಗಳ ಗಾಯನ ಸಭಿಕರ ಮನಸೂರೆಗೊಂಡಿತು. ಜತೆಗೆ ಸಾಹಿತಿ ಬಾರಾಸು ನೇತೃತ್ವದಲ್ಲಿ ನಡೆದ ನಮ್ಮೂರ ಹಬ್ಬ ನಾಟಕ ಪ್ರದರ್ಶಿಸಿದರು. ಕುರುಹಿನಶೆಟ್ಟಿ ಭಜನಾ ಮಂಡಳಿ ಗಾಯಕರಾದ ನರಸಿಂಹಮೂರ್ತಿ (ಶಾಸ್ತ್ರಿ), ಧನಂಜಯ, ಗುರುರಾಜ್, ನಾಗರಾಜ್, ವಿಜಯ ಕುಮಾರ್, ಗಿರಿಜಾವತಿ, ಪ್ರಮೀಳಾ, ಧನಲಕ್ಷ್ಮೀ, ನಾಗವೇಣಿ, ಭಾಗ್ಯ ಹಾಗೂ ಭಾರತಿ ಅವರ ಗಾಯನಕ್ಕೆ ಸುಮಧುರವಾಗಿ ಹಾರ್ಮೋನಿಯಂ ನುಡಿಸಿದ ಚನ್ನಕೇಶವ ಹಾಗೂ ಸುಶ್ರಾವ್ಯವಾಗಿ ತಬಲ ನುಡಿಸಿದ ಓಂಪ್ರಕಾಶ್ ಅವರ ಕೈಚಳಕಕ್ಕೆ ತನ್ಮಯತೆಯಿಂದ ಕುಳಿತ ಸಭಿಕರು ದೇವರ ನಾಮಗಳು ಹಾಗೂ ಕೀರ್ತನೆಗಳ ಸ್ವಾದವನ್ನು ಅನುಭವಿಸಿ ಪ್ರಶಂಸಿಸಿದರು.