ನರಸಿಂಹರಾಜಪುರಜಂತುಹುಳು ಮಾತ್ರೆ ನೀಡಿದರೆ ಮಕ್ಕಳಲ್ಲಿ ರಕ್ತ ಹೀನತೆ ತಡೆಗಟ್ಟಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ಸಲಹೆ ನೀಡಿದರು.
ಶಬಾನಾ ಅಂಜುಮ್ ಸಲಹೆ । ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ರಾಷ್ಟ್ರೀಯ ಜಂತು ಹುಳುನಿವಾರಣಾ ದಿನ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಜಂತುಹುಳು ಮಾತ್ರೆ ನೀಡಿದರೆ ಮಕ್ಕಳಲ್ಲಿ ರಕ್ತ ಹೀನತೆ ತಡೆಗಟ್ಟಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ಸಲಹೆ ನೀಡಿದರು.
ಮಂಗಳವಾರ ಆರೋಗ್ಯ ಇಲಾಖೆ ಶಿಕ್ಷಣ ಇಲಾಖೆ, ಕೆಪಿಎಸ್ ಸ್ಕೂಲ್ ಸಂಯುಕ್ತ ಆಶ್ರಯದಲ್ಲಿ ಕೆಪಿಎಸ್ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಜಂತು ನಿವಾರಣ ದಿನ ಉದ್ಘಾಟಿಸಿ ಮಾತನಾಡಿ ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಆರೋಗ್ಯ ಪ್ರಮುಖವಾದ ಅಂಶವಾಗಿದೆ. ಮಕ್ಕಳ ಆರೋಗ್ಯ ಸುಧಾರಿ ಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ. ರಾಷ್ಟ್ರೀಯ ಜಂತುಹುಳು ನಿವಾರಣ ದಿನ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ಕಂಡುಬರುವ ರಕ್ತಹೀನತೆ ತಡೆಗಟ್ಟಿದರೆ ಮಕ್ಕಳಲ್ಲಿ ಕಲಿಕೆಯ ಗ್ರಹಿಕೆ ಶಕ್ತಿ ಹೆಚ್ಚಿಸಲು ಸಹಕಾರಿ ಎಂದರು. ಅತಿಥಿಯಾಗಿದ್ದ ತಾಲೂಕು ಆರೋಗ್ಯ ಅಧಿಕಾರಿ ಡಾ.ಮಹೇಂದ್ರಕಿರೀಟಿ ಮಾಹಿತಿ ನೀಡಿ ಆ.10 ಹಾಗೂ ಫೆ.10 ರಂದು ಪ್ರತಿ ವರ್ಷ ಎರಡು ಬಾರಿ ರಾಷ್ಟ್ರೀಯ ಜಂತು ಹುಳು ನಿವಾರಣ ದಿನ ಆಚರಿಸಲಾಗುತ್ತಿದೆ. ಈ ದಿನದಂದು ಒಂದರಿಂದ 19 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಉಚಿತವಾಗಿ ಆರೋಗ್ಯ ಇಲಾಖೆಯಿಂದ ಆಲ್ಪೆನ್ಡ ಜೋಲ್ ಎಂಬ ಮಾತ್ರೆ ನೀಡುವ ಮೂಲಕ ಮಕ್ಕಳಲ್ಲಿ ಕಂಡುಬರುವ ಜಂತುಹುಳು ನಿವಾರಿಸುವ ಮಹತ್ವದ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳು ಬರಿಗಾಲಿನಲ್ಲಿ ನಡೆಯದೆ ಚಪ್ಪಲಿ ಧರಿಸುವುದು, ಊಟಕ್ಕಿಂತ ಮೊದಲು ಹಾಗೂ ಶೌಚಾಲಯಕ್ಕೆ ಹೋಗಿ ಬಂದ ಮೇಲೆ ಕಡ್ಡಾಯವಾಗಿ ಸರಿಯಾದ ಕ್ರಮದಲ್ಲಿ ಕೈ ತೊಳೆಯಬೇಕು. ತರಕಾರಿಗಳನ್ನು ತೊಳೆದು ಅಡುಗೆಗೆ ಬಳಸಬೇಕು, ಶುದ್ಧವಾದ ಕುದಿಸಿ ಆರಿಸಿದ ನೀರಿನ ಮಾತ್ರ ಬಳಸಬೇಕು. ಕಡ್ಡಾಯವಾಗಿ ಶೌಚಾಲಯ ಬಳಸಿ ಪರಿಸರ ಸ್ವಚ್ಛವಾಗಿಟ್ಟು ಕೊಳ್ಳುವ ಮೂಲಕ ಜಂತುಹುಳು ಯಿಂದ ರಕ್ಷಣೆ ಸಾಧ್ಯ. ಜಂತುಹುಳ ಬಾಧೆ ಇದ್ದರೆ ಮಕ್ಕಳು ಕಲಿಕೆಯಲ್ಲಿ ನಿರಾಸಕ್ತಿ, ಗ್ರಹಿಕೆಯಲ್ಲಿ ಕುಂಟಿತ ವಾಗುತ್ತದೆ. ರಕ್ತ ಹೀನತೆಯಿಂದ ಮುಖದ ಮೇಲೆ ಬಿಳಿಯ ಮಚ್ಚೆಗಳು ಬರುವುದು, ಅಪೌಷ್ಟಿಕತೆಗೆ ತುತ್ತಾಗುವುದು, ಪದೇಪದೇ ಸೋಂಕಿಗೆ ತುತ್ತಾಗುವ ಲಕ್ಷಣ ಕಂಡುಬರುತ್ತದೆ ಎಂದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಲಕ್ಷ್ಮಣ್‌ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿದ್ದ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಉದಯ ಗಿಲ್ಲಿ, ಪ.ಪಂ. ಮಾಜಿ ಅಧ್ಯಕ್ಷೆ ಜುಬೇದ ಮಾತನಾಡಿದರು.ಇದೇ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಜಂತುಹುಳು ಮಾತ್ರೆ ವಿತರಿಸಲಾಯಿತು. ರಾಷ್ಟ್ರೀಯ ಜಂತುಹುಳು ನಿವಾರಣ ಕರಪತ್ರ ಬಿಡುಗಡೆಗೊಳಿಸಲಾಯಿತು. ಸಭೆಯಲ್ಲಿ ಎಸ್.ಡಿ.ಎಂ.ಸಿ ಸದಸ್ಯ ಕೆ.ಎ.ಅಬೂಬಕರ್, ನಮ್ಮ ಕ್ಲಿನಿಕ್ ವೈದ್ಯಾಧಿಕಾರಿ ಡಾ.ಕ್ಷಮ, ಮುಖ್ಯೋಪಾಧ್ಯಾಯ ಚಂದ್ರಪ್ಪ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ, ಹಿರಿಯ ಪ್ರಾಥಮಿಕ ಸುರಕ್ಷಣಾಧಿಕಾರಿ ಡೈಸಿ, ಪೂರ್ಣಾವತಿ, ಚೈತ್ರಾ, ಸುಹಾಸ್, ಅನಿತಾ ಇದ್ದರು.