ಸಮುದಾಯ ಭವನ ನಿರ್ಮಾಣಕ್ಕೆ ಧಗ್ರಾ ನೆರವು

| Published : Sep 09 2024, 01:32 AM IST

ಸಾರಾಂಶ

ಜಿಲ್ಲೆಯಲ್ಲಿ ಧಗ್ರಾ ಯೋಡನೆಯಡಿ ನೂರಾರು ಸಾಮಾಜಿಕ ಕಾರ್ಯಗಳನ್ನು ನಡೆಸಲಾಗಿದೆ. ಅನಾಥರು, ಸಂಕಷ್ಟದಲ್ಲಿ ಇರುವವರಿಗೆ ಮಾಸಾಶನ, ಕೆರೆಗಳ ಪುನಶ್ಚೇತನ, ಪರಿಸರ ಕಾಳಜಿಯಿಂದ ಗಿಡನೆಡುವ ಕಾರ್ಯಕ್ರಮ, ಶುದ್ದ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ಶಾಲೆಗಳಿಗೆ ನೆರವು ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ ಸುಗುಟೂರು ಗ್ರಾಮದ ಸವಿತಾ ಸಮಾಜದ ಸಮುದಾಯ ಭವನಕ್ಕೆ ೧.೫ ಲಕ್ಷ ರು.ಗಳ ಡಿಡಿಯನ್ನು ಸವಿತಾ ಸಮಾಜದ ಅಧ್ಯಕ್ಷ ಚಂದ್ರಪ್ಪ ಅವರಿಗೆ ಯೋಜನಾಧಿಕಾರಿ ಸಂತೋಷ್ ಹಸ್ತಂತರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರು ಕೋಲಾರ ಜಿಲ್ಲೆಯ ನೂರಾರು ದೇವಾಲಯಗಳ ಜೀರ್ಣೋದ್ದಾರ, ನಿರ್ಮಾಣ ಕಾರ್ಯಗಳಿಗೆ ನೆರವು ನೀಡಿದ್ದು, ಇದೀಗ ಸಮುದಾಯ ಭವನಕ್ಕೂ ೧.೫ ಲಕ್ಷ ನೀಡಿದ್ದಾರೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ ಸಾಮಾಜಿಕ ಕಾರ್ಯ

ಯೋಜನೆ ವತಿಯಿಂದ ಜಿಲ್ಲೆಯಲ್ಲಿ ನೂರಾರು ಸಾಮಾಜಿಕ ಕಾರ್ಯಗಳನ್ನು ನಡೆಸಲಾಗಿದೆ ಎಂದ ಅವರು, ಅನಾಥರು, ಸಂಕಷ್ಟದಲ್ಲಿ ಇರುವವರಿಗೆ ಮಾಸಾಶನ, ಕೆರೆಗಳ ಪುನಶ್ಚೇತನ, ಪರಿಸರ ಕಾಳಜಿಯಿಂದ ಗಿಡನೆಡುವ ಕಾರ್ಯಕ್ರಮ, ಶುದ್ದ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ಶಾಲೆಗಳಿಗೆ ನೆರವು, ಶಿಕ್ಷಕರಿಗೆ ಗೌರವಧನ ಹೀಗೆ ಸಾಮಾಜಿಕ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗಲಾಗಿದೆ ಎಂದರು.ತಾಲೂಕಿನ ಚಿಟ್ನಹಳ್ಳಿ ಒಕ್ಕೂಟದ ಅಧ್ಯಕ್ಷ ಸಿ.ಬಿ.ಆನಂದ್ ಹಾಜರಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸವಿತಾ ಸಮಾಜದ ಮುಖಂಡರಾದ ಮದನಹಳ್ಳಿ ಶ್ರೀನಾಥ್ ಕಿತ್ತಂಡೂರು ಕೆ.ಟಿ.ಶ್ರೀನಿವಾಸ್ ಚಿಟ್ನಹಳ್ಳಿ ಎಂ.ಎನ್.ಮಂಜುನಾಥ್, ಸುಗುಟೂರು ಎಂ.ಮಂಜುನಾಥ್, ಮಹಿಳಾ ನಿರ್ದೇಶಕಿ ಚಿಟ್ನಹಳ್ಳಿ ಸುಜಾತ, ಸುಗಟೂರುವಲಯದ ಮೇಲ್ವಿಚಾರಕ ಲೋಕೇಶ್ ಸ್ಥಳೀಯ ಸೇವಾ ಪ್ರತಿನಿಧಿ ವೆಂಕಟರತ್ನಮ್ಮ ಹಾಜರಿದ್ದರು.